ಅತಿಯಾದ ಬಿಸಿನೀರಿನ ಸ್ನಾನ ಮಾಡುವುದರಿಂದ ಯಾವುದೇ ರೀತಿಯ ಪ್ರಯೋಜನಗಳಿಲ್ಲ ಬದಲಾಗಿ ಹಾನಿಗಳೇ ಹೆಚ್ಚು ಎಂಬುದು ನಿಮಗೆ ತಿಳಿದಿದೆಯೇ? ಹೌದು ನೀವು ಕೂಡ ಪ್ರತಿದಿನ ಬಿಸಿ ಬಿಸಿ ನೀರಿನ ಸ್ನಾನ ಮಾಡುತ್ತಿದ್ದರೆ ಈ ಸಮಸ್ಯೆ ತಪ್ಪಿದ್ದಲ್ಲ. ಹಾಗಾದರೆ ಇದು ಏಕೆ ಒಳ್ಳೆಯದಲ್ಲ? ಇಲ್ಲಿದೆ ಮಾಹಿತಿ.

ಅತಿಯಾದ ಬಿಸಿನೀರಿನ ಸ್ನಾನ ಹೃದಯ ಸಂಬಂಧಿತ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ. ಇದು ಸಾವಿನ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಹೃದಯ ಸಂಬಂಧಿತ ಸಮಸ್ಯೆ ಇರುವವರು ಪ್ರತಿದಿನ ಬಿಸಿ ನೀರಿನ ಸ್ನಾನ ಮಾಡಬೇಡಿ.

ಕೇವಲ ಚರ್ಮಕ್ಕೆ ಮಾತ್ರ ಹಾನಿಯುಂಟು ಮಾಡುವುದಿಲ್ಲ ಬದಲಾಗಿ ಬಿಸಿ ನೀರಿನ ಸ್ನಾನ, ಕೂದಲು ಉದುರುವಿಕೆ ಹಾಗೂ ಒಣ ನೆತ್ತಿ ಸಮಸ್ಯೆಗೆ ಕಾರಣವಾಗುತ್ತದೆ. ಜೊತೆಗೆ ಚರ್ಮದ ಮೇಲೆ ತುರಿಕೆಯಂತಹ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ

ಪ್ರತಿದಿನ ಅತಿ ಬಿಸಿಯಾಗಿರುವ ನೀರಿನ ಸ್ನಾನ ಮಾಡುವುದರಿಂದ ನಮ್ಮ ಸ್ನಾಯುಗಳು ಬಿಗಿಯಾಗಿ ಬೆನ್ನು ನೋವು ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಕೇವಲ ಚರ್ಮಕ್ಕೆ ಮಾತ್ರ ಹಾನಿಯುಂಟು ಮಾಡುವುದಿಲ್ಲ ಬದಲಾಗಿ ಬಿಸಿ ನೀರಿನ ಸ್ನಾನ, ಕೂದಲು ಉದುರುವಿಕೆ ಹಾಗೂ ಒಣ ನೆತ್ತಿ ಸಮಸ್ಯೆಗೆ ಕಾರಣವಾಗುತ್ತದೆ. ಜೊತೆಗೆ ಚರ್ಮದ ಮೇಲೆ ತುರಿಕೆಯಂತಹ ಸಮಸ್ಯೆಗಳು ಉಲ್ಬಣಗೊಳ್ಳುತ್ತದೆ

ಅಧಿಕ ರಕ್ತದೊತ್ತಡದಂತಹ ಗಂಭೀರ ಸಮಸ್ಯೆ ಕಾಣಿಸಿಕೊಳ್ಳಬಹುದು. ಅಲ್ಲದೆ ಬಿಸಿ ನೀರು ಸ್ನಾನ ಮಾಡಿದ ಮೇಲೆ ಅತಿಯಾಗಿ ಬೆವರುವುದರಿಂದ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ.

ಹಾಗಾಗಿ ಉಗುರು ಬೆಚ್ಚಗಿನ ಸ್ನಾನ ಎಲ್ಲಾ ಮಾಸದಲ್ಲೂ ಒಳ್ಳೆಯದು. ಆದ್ದರಿಂದ ಆದಷ್ಟು ಹೆಚ್ಚು ಬಿಸಿಯಾಗಿರುವ ನೀರಿನಿಂದ ಸ್ನಾನ ಮಾಡುವುದನ್ನು ಕಡಿಮೆ ಮಾಡಿ, ಆರೋಗ್ಯವಾಗಿರಿ.