ಅತಿಯಾಗಿ ಸ್ಮಾರ್ಟ್​ಫೋನ್ ಬಳಸುತ್ತೀರಾ?; ಟ್ರಿಗರ್ ಫಿಂಗರ್ ಸಮಸ್ಯೆ ಬಗ್ಗೆಯೂ ತಿಳಿದಿರಲಿ

Updated on: Oct 05, 2023 | 2:27 PM

ನೀವು ಟಚ್‌ಸ್ಕ್ರೀನ್ ಅನ್ನು ಎಷ್ಟು ಸಮಯ ಬಳಸುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಟ್ರಿಗರ್ ಫಿಂಗರ್ ಸಮಸ್ಯೆಯ ಲಕ್ಷಣಗಳ ತೀವ್ರತೆ ನಿರ್ಧರಿತವಾಗುತ್ತದೆ. ಟಚ್‌ಸ್ಕ್ರೀನ್‌ಗಳಲ್ಲಿ ನಿರಂತರವಾಗಿ ಟ್ಯಾಪಿಂಗ್ ಮತ್ತು ಸ್ಕ್ರೋಲಿಂಗ್ ಮಾಡುವುದರಿಂದ ಬೆರಳುಗಳ ಸ್ನಾಯುರಜ್ಜುಗಳ ಮೇಲೆ ಅತಿಯಾದ ಒತ್ತಡವನ್ನು ಉಂಟುಮಾಡಬಹುದು.

1 / 16
ಡಿಜಿಟಲೀಕರಣದ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಟಚ್ ಸ್ಕ್ರೀನ್‌ಗಳು ಜನರ ಮೇಲೆ ತಮ್ಮ ಸಂಪೂರ್ಣ ಪ್ರಾಬಲ್ಯ ಸಾಧಿಸಿವೆ.

ಡಿಜಿಟಲೀಕರಣದ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಟಚ್ ಸ್ಕ್ರೀನ್‌ಗಳು ಜನರ ಮೇಲೆ ತಮ್ಮ ಸಂಪೂರ್ಣ ಪ್ರಾಬಲ್ಯ ಸಾಧಿಸಿವೆ.

2 / 16

ಸ್ಮಾರ್ಟ್​ಫೋನ್ ಬಳಸದೇ ಇರುವವರೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಟಚ್​ಸ್ಕ್ರೀನ್​ಗಳು ಜನರನ್ನು ಆವರಿಸಿಕೊಂಡಿವೆ.

3 / 16

ನಾವು ಸ್ಮಾರ್ಟ್‌ಫೋನ್‌ಗಳಿಗೆ ಅಂಟಿಕೊಂಡು ಅದನ್ನೇ ಚಟವನ್ನಾಗಿ ಮಾಡಿಕೊಂಡಿದ್ದೇವೆ. ಈ ಚಟ ಟ್ರಿಗರ್ ಫಿಂಗರ್ ಎಂಬ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು.

4 / 16

ಈ ಟ್ರಿಗರ್ ಫಿಂಗರ್ ಕೈ ನೋವಿನ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ.

5 / 16

ಮೊಬೈಲ್ ಸ್ಕ್ರೀನ್ ಮೇಲೆ ನಮ್ಮ ಬೆರಳುಗಳನ್ನು ಇಟ್ಟು ಬ್ರೌಸ್ ಮಾಡುತ್ತಾ ಇರುವುದರಿಂದ ಬೆರಳಿನ ನೋವು, ಕೈಗಳ ನೋವು ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

6 / 16

ಪ್ರಪಂಚದ ಜನಸಂಖ್ಯೆಯ ಸುಮಾರು ಶೇ. 2ರಷ್ಟು ಜನರು ಈ ಟ್ರಿಗರ್ ಫಿಂಗರ್ ಸಮಸ್ಯೆಗೆ ತುತ್ತಾಗಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

7 / 16

ಟ್ರಿಗರ್ ಫಿಂಗರ್ ಎಂದರೆ ಸಾಮಾನ್ಯವಾಗಿ ಬೆರಳುಗಳು ಅಥವಾ ಹೆಬ್ಬೆರಳು ಲಾಕ್ ಮಾಡುವ ಅಥವಾ ಬಾಗುವ ಮತ್ತು ನೇರಗೊಳಿಸುವ ಚಲನೆಯ ಸಮಯದಲ್ಲಿ ತಡೆಹಿಡಿಯುವ ಒಂದು ಬಗೆಯ ಸ್ನಾಯುವಿನ ಸಮಸ್ಯೆಯಾಗಿದೆ.

8 / 16

ಈ ಸಮಸ್ಯೆ ಉಂಟಾದರೆ ನಿಮಗೆ ಹೆಬ್ಬೆರಳು ಮತ್ತಿತರೆ ಬೆರಳುಗಳನ್ನು ಸುಲಭವಾಗಿ ಅಲ್ಲಾಡಿಸಲು ಸಾಧ್ಯವಾಗುವುದಿಲ್ಲ. ಬೆರಳು ಬಿಗಿದಂತೆ ಭಾಸವಾಗುತ್ತದೆ.

9 / 16

ನೀವು ಟಚ್‌ಸ್ಕ್ರೀನ್ ಅನ್ನು ಎಷ್ಟು ಸಮಯ ಬಳಸುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಟ್ರಿಗರ್ ಫಿಂಗರ್ ಸಮಸ್ಯೆಯ ಲಕ್ಷಣಗಳ ತೀವ್ರತೆ ನಿರ್ಧರಿತವಾಗುತ್ತದೆ.

10 / 16

ಬೆರಳು ಊದಿಕೊಳ್ಳುವುದು ಅಥವಾ ನೋವಿನಿಂದ ಕೂಡಿರುವುದು, ಬೆರಳಿನ ಬಿಗಿತ ಅದರಲ್ಲೂ ವಿಶೇಷವಾಗಿ ಬೆಳಿಗ್ಗೆ ಬೆರಳಿನ ಬಿಗಿತ ಉಂಟಾಗುವುದು ಈ ಟ್ರಿಗರ್ ಫಿಂಗರ್​ನ ಲಕ್ಷಣ.

11 / 16

ನೋವಿರುವ ಬೆರಳಿನ ಬುಡದಲ್ಲಿ ಗಂಟಿನಲ್ಲಿ ಬಿಗಿತ, ಯಾವುದಾದರೂ ವಸ್ತುವನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಸಾಧ್ಯವಾಗದಿರುವುದು, ತುಂಬ ಸಮಯದವರೆಗೆ ಬೆರಳು ಬಾಗಿದ ಸ್ಥಿತಿಯಲ್ಲಿರುವುದು ಟ್ರಿಗರ್ ಫಿಂಗರ್​ ಸಮಸ್ಯೆಯ ಲಕ್ಷಣವಾಗಿದೆ.

12 / 16

ಟಚ್‌ಸ್ಕ್ರೀನ್‌ಗಳಲ್ಲಿ ನಿರಂತರವಾಗಿ ಟ್ಯಾಪಿಂಗ್ ಮತ್ತು ಸ್ಕ್ರೋಲಿಂಗ್ ಮಾಡುವುದರಿಂದ ಬೆರಳುಗಳ ಸ್ನಾಯುರಜ್ಜುಗಳ ಮೇಲೆ ಅತಿಯಾದ ಒತ್ತಡವನ್ನು ಉಂಟುಮಾಡಬಹುದು.

13 / 16

ಇದು ಉರಿಯೂತಕ್ಕೆ ಕಾರಣವಾಗುತ್ತದೆ. ಇದರಿಂದ ಟ್ರಿಗರ್ ಫಿಂಗರ್ ಸಮಸ್ಯೆ ಉಂಟಾಗುತ್ತದೆ.

14 / 16

ಈ ಟ್ರಿಗರ್ ಫಿಂಗರ್ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ 6 ಪಟ್ಟು ಹೆಚ್ಚು ಎಂದು ಅಧ್ಯಯನಗಳು ತಿಳಿಸಿವೆ.

15 / 16

ಟ್ರಿಗರ್ ಫಿಂಗರ್ ಸಮಸ್ಯೆ ಉಂಟಾದರೆ, ಫಿಜಿಯೋಥೆರಪಿಸ್ಟ್‌ಗಳನ್ನು ಭೇಟಿ ಮಾಡಿ.

16 / 16

ಫಿಸಿಯೋಥೆರಪಿಸ್ಟ್​ಗಳು ಹೇಳುವ ಬೆರಳಿನ ವ್ಯಾಯಾಮಗಳು ಪೀಡಿತ ಸ್ನಾಯುರಜ್ಜುಗಳನ್ನು ಬಲಪಡಿಸಲು ಮತ್ತು ಹೆಚ್ಚಿನ ತೊಡಕುಗಳನ್ನು ತಡೆಯಲು ಸಹಾಯ ಮಾಡುತ್ತದೆ.

Loading...
Unable to load recommendations.
Follow Us