'ಪುಟ್ಟಗೌರಿ ಮದುವೆ'ಯ ಪುಟ್ಟ ಹುಡುಗಿ ಸಾನ್ಯಾ ಈಗ ನಾಯಕಿಯಾಗಿ ಲಾಂಚ್ ಆಗುತ್ತಿದ್ದಾರೆ
ಸಾನ್ಯಾ ಐಯ್ಯರ್ ಇತ್ತೀಚೆಗಷ್ಟೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.
ಅವರಿಗೆ ಅವರ ಅಭಿಮಾನಿಗಳು, ಗೆಳೆಯರು ವಿಶೇಷವಾದ ಉಡುಗೊರೆ ನೀಡಿದ್ದಾರೆ.
ಸಾನ್ಯಾ ಐಯ್ಯರ್ ಹೆಸರನ್ನು ನಕ್ಷತ್ರವೊಂದಕ್ಕೆ ಇಟ್ಟು ಅದರ ಪ್ರಮಾಣ ಪತ್ರವನ್ನು ಸಾನ್ಯಾಗೆ ನೀಡಿದ್ದಾರೆ.
ಸರ್ಪ್ರೈಸ್ ಉಡುಗೊರೆಯನ್ನು ಸಾನ್ಯಾ ಓಪನ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾನ್ಯಾ ಐಯ್ಯರ್, ತಮಗೆ ಸಿಕ್ಕ ಈ ವಿಶೇಷ ಉಡುಗೊರೆಯನ್ನು ಬಹಳ ಮೆಚ್ಚಿಕೊಂಡಿದ್ದಾರೆ.
ಮಾಜಿ ಬಿಗ್ಬಾಸ್ ಸ್ಪರ್ಧಿಯೂ ಆಗಿರುವ ಸಾನ್ಯಾ ಐಯ್ಯರ್ ತಮ್ಮ ಮೊದಲ ಸಿನಿಮಾದಲ್ಲಿ ನಟಿಸಲಿದ್ದಾರೆ.
ಇಂದ್ರಜಿತ್ ಲಂಕೇಶ್ ನಿರ್ದೇಶಿಸಿ, ಅವರ ಪುತ್ರ ನಾಯಕನಾಗಿ ನಟಿಸುತ್ತಿರುವ 'ಗೌರಿ' ಸಿನಿಮಾದಲ್ಲಿ ಸಾನ್ಯಾ ಐಯ್ಯರ್ ನಟಿಸುತ್ತಿದ್ದಾರೆ.