Updated on: Mar 09, 2022 | 11:06 AM
ಹೇರಳವಾದ ಮಿನರಲ್ಸ್ ಮತ್ತು ವಿಟಮಿನ್ಸ್ಗಳನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕವಾಗಿದೆ, ಇಲ್ಲಿದೆ ನೋಡಿ ಸ್ಟ್ರಾಬೆರಿ ಹಣ್ಣಿನ ಉಪಯೋಗಗಳು.
ಆ್ಯಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸಲು ಸಹಾಯಕವಾಗಿದೆ.
ವಿಟಮಿನ್ ಸಿ ಅಂಶಗಳನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ದೇಹದ ತೂಕವನ್ನು ಇಳಿಸಿಕೊಳ್ಳಲು ಸಹಾಯಕವಾಗಿದೆ.
ಸ್ಟ್ರಾಬೆರಿಯಲ್ಲಿನ ವಿಟಮಿನ್ ಸಿ ಅಂಶಗಳು ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ. ಜತೆಗೆ ದೇಹದ ವಿವಿಧ ಭಾಗಗಳ ನೋವನ್ನು ತೆಗೆಯಲು ನೆರವಾಗುತ್ತದೆ.
ಯಥೇಚ್ಛವಾದ ಫೈಬರ್ ಅಂಶವನ್ನು ಹೊಂದಿರುವ ಸ್ಟ್ರಾಬೆರಿ ಹಣ್ಣುಗಳು ವೇಗವಾಗಿ ದೇಹದ ತೂಕ ಇಳಿಕೆಗೆ ಸಹಕಾರಿಯಾಗಿದೆ.
ಸ್ಟ್ರಾಬೆರಿ ಹಣ್ಣುಗಳ ಸಲಾಡ್ ಅನ್ನು ಮೊಸರಿನೊಂದಿಗೆ ಬೆಳಗ್ಗಿನ ಉಪಹಾರವಾಗಿಯೂ ಸೇವಿಸಬಹುದಾಗಿದೆ.