
ಭಾರತದಲ್ಲಿ ಈಗಾಗಲೇ ಹಲವು ಲಸಿಕೆಗಳ ಬಳಕೆಗೆ ಅನುಮತಿ ದೊರೆತಿದೆ. ಆದರೆ 12-18 ವರ್ಷದ ಮಕ್ಕಳಿಗೆ ಭಾರತ್ ಬಯೋಟೆಕ್ನ ಕೋವಾಕ್ಸಿನ್ ಅನ್ನು ನೀಡಲು ಅವಕಾಶ ನೀಡಲಾಗಿದೆ.

ಸ್ವಿಡ್ಜರ್ಲ್ಯಾಂಡ್ನಲ್ಲಿ 12-15 ವರ್ಷದ ಮಕ್ಕಳಿಗೆ ಮೊಡರ್ನಾ ಮತ್ತು ಪೈಜರ್ ಎರಡೂ ಲಸಿಕೆಯ ಬಳಕಗೆ ಅನುಮತಿ ನೀಡಲಾಗಿದೆ. ಇಟಲಿಯಲ್ಲಿಯೂ 12-17 ವರ್ಷದ ಮಕ್ಕಳಿಗೆ ಮಾಡರ್ನಾ ಲಸಿಕೆಯನ್ನು ನೀಡಲಾಗುತ್ತಿದೆ.

ಸಪ್ಟೆಂಬರ್ನಲ್ಲಿ ಕ್ಯೂಬಾ ದೇಶ 2-10ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಆರಂಭಿಸಿದೆ. ಕ್ಯೂಬಾದಲ್ಲಿ ಸ್ಥಳೀಯವಾಗಿ ತಯಾರಿಸಿದ ಅಬ್ದಲಾ ಮತ್ತು ಸೋಬೇರಾನಾ ಎನ್ನುವ ಎರಡು ಲಸಿಕೆಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ.

ಚೀನಾದಲ್ಲಿಯೂ ಮಕ್ಕಳಿಗೆ ಸ್ಥಳೀಯವಾಗಿ ತಯಾರಿಸಿದ ಸಿನೋವಾಕ್ಸ್ ಲಸಿಕೆಯನ್ನು ನೀಡಲಾಗುತ್ತಿದೆ. ಜತೆಗೆ ಇಂಡೋನೇಷ್ಯಾವು ಸಿನೋವಾಕ್ಸ್ ಲಸಿಕೆಯನ್ನು 6 ವರ್ಷ ಮೇಲ್ಪಟ್ಟ ಮಕ್ಕಳಿಗೆ ನೀಡುತ್ತಿದೆ.

ಅಮೆರಿಕ ಮತ್ತು ಯುರೋಪಿಯನ್ ದೇಶಗಳಲ್ಲಿ ಪೈಜರ್ ಬಯೋಟೆಕ್ ಲಸಿಕೆಯನ್ನು ನೀಡಲು ಅನುಮತಿ ನೀಡಲಾಗಿದೆ. ಅಮೆರಿಕದಲ್ಲಿ 5-11 ವರ್ಷದ ಮಕ್ಕಳಿಗೆ ಹಾಗೂ ಯುರೋಪಿಯನ್ ದೇಶಗಳಲ್ಲಿ 5-18 ವರ್ಷದ ಮಕ್ಕಳಿಗೆ ಪೈಜರ್ ಲಸಿಕೆಯ ಲೋವರ್ ಡೋಸ್ ನೀಡಲಾಗುತ್ತಿದೆ.