IPL 2022: ಐಪಿಎಲ್​ಗೆ ಕೊರೋನಾತಂಕ ಶುರು..!

IPL 2022 Mega Auction: ಬೆಂಗಳೂರಿನ ಈಗಾಗಲೇ ಕೊರೋನಾ ಸುರಕ್ಷತಾ ನಿಯಮಾವಳಿ ಜಾರಿಯಲ್ಲಿದ್ದು, ಹೀಗಾಗಿ ಮೆಗಾ ಹರಾಜನ್ನು ಬೇರೆ ಕಡೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

TV9 Web
| Updated By: ಝಾಹಿರ್ ಯೂಸುಫ್

Updated on:Jan 05, 2022 | 10:59 PM

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಸಿದ್ದತೆಗಳನ್ನು ಆರಂಭಿಸಿದ ಬಿಸಿಸಿಐಗೆ ಕೊರೋನಾ ಓಮಿಕ್ರಾನ್ ಹೊಸ ತಲೆನೋವುಂಟು ಮಾಡಿದೆ. ಈಗಾಗಲೇ ರಿಟೈನ್ ಪ್ರಕ್ರಿಯೆ ಮುಗಿಸಿರುವ ಬಿಸಿಸಿಐ ಮುಂದಿನ ತಿಂಗಳು ಮೆಗಾ ಹರಾಜು ನಡೆಸಲು ಪ್ಲ್ಯಾನ್ ರೂಪಿಸಿತ್ತು.

1 / 6
ಅದರಂತೆ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಐಪಿಎಲ್ ಸೀಸನ್ 15 ಮೆಗಾ ಹರಾಜು ನಡೆಸಲು ನಿರ್ಧರಿಸಲಾಗಿತ್ತು. ಆದರೀಗ ದೇಶದಲ್ಲಿ ಕೊರೋನಾ ಓಮಿಕ್ರಾನ್ ಪ್ರಕರಣಗಳು ಹೆಚ್ಚಾದ ಕಾರಣ ಇದೀಗ ರಣಜಿ ಟೂರ್ನಿಯನ್ನು ಮುಂದೂಡಲಾಗಿದೆ.

2 / 6
 ಅಷ್ಟೇ ಅಲ್ಲದೆ ಈ ಹಿಂದೆ ನಿರ್ಧರಿಸಿದಂತೆ ಫೆಬ್ರವರಿ 12 ರಂದು ಮೆಗಾ ಹರಾಜನ್ನು ಶುರು ಮಾಡುವುದು ಕೂಡ ಅನುಮಾನ ಎನ್ನಲಾಗುತ್ತಿದೆ. ಏಕೆಂದರೆ ಮುಂದಿನ ತಿಂಗಳು ದೇಶದಲ್ಲಿ ಕೊರೋನಾ ಪ್ರಕರಣ ಹೆಚ್ಚಾದರೆ ರಾಜ್ಯಗಳ ನಡುವಣ ಪ್ರಯಾಣ ಹಾಗೂ ವಿಮಾನಯಾನ ರದ್ದಾಗಲಿದೆ. ಹೀಗಾಗಿ ಹರಾಜು ದಿನಾಂಕವನ್ನು ಬದಲಿಸುವ ಬಗ್ಗೆ ಬಿಸಿಸಿಐ ಚರ್ಚಿಸಿದೆ.

3 / 6
ಅಷ್ಟೇ ಅಲ್ಲದೆ ಬೆಂಗಳೂರಿನ ಈಗಾಗಲೇ ಕೊರೋನಾ ಸುರಕ್ಷತಾ ನಿಯಮಾವಳಿ ಜಾರಿಯಲ್ಲಿದ್ದು, ಹೀಗಾಗಿ ಮೆಗಾ ಹರಾಜನ್ನು ಬೇರೆ ಕಡೆ ಶಿಫ್ಟ್ ಮಾಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿಯೇ ಬಿಸಿಸಿಐ ಫೆಬ್ರವರಿ 12 ಮತ್ತು 13 ರಂದು ಮೆಗಾ ಹರಾಜಿ ನಡೆಸಲು ಬೆಂಗಳೂರಿನಲ್ಲಿ ಯಾವುದೇ ಹೋಟೆಲ್‌ಗಳನ್ನು ಕಾಯ್ದಿರಿಸಿಲ್ಲ ಎಂದು ತಿಳಿದು ಬಂದಿದೆ.

4 / 6
ಕೆಲವು ವಿಷಯಗಳು ನಮ್ಮ ಕೈಯಲ್ಲಿಲ್ಲ. ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ ಮತ್ತು ರಾಜ್ಯ ಸಂಘಗಳೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಮೆಗಾ ಹರಾಜಿನ ಸ್ಥಳವನ್ನು ಸ್ಥಳಾಂತರಿಸುವ ಬಗ್ಗೆ ಚರ್ಚೆ ಮುಂದುವರೆದಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಮೆಗಾ ಹರಾಜಿನ ದಿನಾಂಕ ಹಾಗೂ ಸ್ಥಳ ಸ್ಥಳಾಂತರವಾಗುವ ಸಾಧ್ಯತೆಯಿದೆ.

5 / 6
ಒಟ್ಟಿನಲ್ಲಿ 10 ತಂಡಗಳೊಂದಿಗೆ ಹೊಸ ಸೀಸನ್ ಶುರು ಮಾಡುವ ಭರ್ಜರಿ ಸಿದ್ದತೆಯಲ್ಲಿದ್ದ ಬಿಸಿಸಿಐನ ಲೆಕ್ಕಚಾರಗಳು ಇದೀಗ ಕೊರೋನಾ ಓಮಿಕ್ರಾನ್ ಕಾರಣದಿಂದ ತಲೆಕೆಳಗಾಗುತ್ತಿವೆ. ಇದಾಗ್ಯೂ ಮುಂದಿನ ಎರಡು ತಿಂಗಳು ಕಾಲ ಭಾರತದಲ್ಲಿ ಕೊರೋನಾಂತಕ ಇದ್ದರೆ ಅನಿವಾರ್ಯವಾಗಿ ಐಪಿಎಲ್​ ಟೂರ್ನಿ ವಿದೇಶಕ್ಕೆ ಸ್ಥಳಾಂತರವಾದರೂ ಅಚ್ಚರಿಪಡಬೇಕಿಲ್ಲ.

6 / 6

Published On - 10:11 pm, Wed, 5 January 22

Follow us
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ

ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ

ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ

‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ

ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ

ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ

ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್