ರಷ್ಯಾ ದಾಳಿಗೆ ತತ್ತರಿಸಿದ ಉಕ್ರೇನ್: ಯುದ್ಧದ ನಾಡಿನ ಮನಕಲಕುವ ಫೋಟೋಗಳು ಇಲ್ಲಿವೆ
TV9 Web | Updated By: Pavitra Bhat Jigalemane
Updated on:
Feb 25, 2022 | 11:34 AM
ಉಕ್ರೇನ್ ರಷ್ಯಾ ಯುದ್ಧ ಮುಂದುವರೆದಿದೆ. ರಷ್ಯಾ ದಾಳಿಗೆ ನೂರಾರು ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಯುದ್ಧದ ನಾಡಿನಲ್ಲಿ ಒಂದೊಂದು ದೃಶ್ಯವೂ ಭಯಹುಟ್ಟಿಸುವಂತಿದೆ. ಮನಕಲಕುವ ಕೆಲವು ಫೋಟೋಗಳು ಇಲ್ಲಿವೆ ನೋಡಿ.
1 / 11
ಫೆ. 24 ರಂದು ಪೂರ್ವ ಉಕ್ರೇನಿಯನ್ ಪಟ್ಟಣವಾದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ವ್ಯಕ್ತಿಯು ತನ್ನ ನಾಶವಾದ ಕಟ್ಟಡದ ಹೊರಗೆ ಕುಳಿತಿರುವ ದೃಶ್ಯ
2 / 11
ಉಕ್ರೇನಿಯನ್ ನಗರದ ಖಾರ್ಕಿವ್‌ನ ಉತ್ತರದ ಹೊರವಲಯದಲ್ಲಿ ಶೆಲ್ ದಾಳಿಯ ನಂತರ ರಾಕೆಟ್‌ನ ದೇಹವು ಫ್ಲಾಟ್‌ನಲ್ಲಿ ಸಿಲುಕಿಕೊಂಡಾಗ ಕಾಣಿಸಿದ್ದು ಹೀಗೆ
3 / 11
ಪೂರ್ವ ಉಕ್ರೇನ್ ಪಟ್ಟಣದ ಚುಹುವಿವ್‌ನಲ್ಲಿ ಬಾಂಬ್ ದಾಳಿಯ ನಂತರ ತುರ್ತು ಘಟಕದ ಸಿಬ್ಬಂದಿ ಗಾಯಗೊಂಡ ವ್ಯಕ್ತಿಗೆ ಚಿಕಿತ್ಸೆ ನೀಡುತ್ತಿದ್ದಾಗ ಕಂಡುಬಂದಿದ್ದು ಹೀಗೆ
4 / 11
ಉಕ್ರೇನ್‌ನ ಲುಹಾನ್ಸ್ಕ್ ಪ್ರದೇಶದಲ್ಲಿ ರಷ್ಯಾ ದಾಳಿಯನ್ನು ಹಿಮ್ಮೆಟ್ಟಿಸಲು ಉಕ್ರೇನಿಯನ್ ಸೈನಿಕರು ಸಿದ್ಧರಾಗುತ್ತಿರುವ ದೃಶ್ಯ.
5 / 11
ಉಕ್ರೇನ್ ರಾಜಧಾನಿ ಕೀವ್ನಲ್ಲಿ ರಾಕೆಟ್ ದಾಳಿಯಿಂದ ಹಾನಿಗೊಳಗಾದ ವಾಹನದ ಕಾಣಿಸಿದ್ದು ಹೀಗೆ.
6 / 11
ರಷ್ಯಾ ದಾಳಿಗೆ ಕಂಗೆಟ್ಟು ರಾಜಧಾನಿ ಕೀವ್ ಪಟ್ಟಣ ತೊರೆದು ಮಗುವನನ್ಉ ಎತ್ತಿಕೊಂಡು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿರುವ ಮಹಿಳೆ
7 / 11
ಮೆಟ್ರೋ ನಿಲ್ದಾಣದ ಬಳಿ ಸಂಗಾತಿಯಿಂದ ದೂರ ಹೋಗುತ್ತಿರುವಾಗ ಜೋಡಿಯೊಂದು ಕಾಣಿಕೊಂಡಿದ್ದು ಹೀಗೆ
8 / 11
ಹಾನಿಗೊಳಗಾದ ಮಿಲಿಟರಿಯ ರಾಡಾರ್ ಉಪಕರಣಗಳು ಮತ್ತು ಕಾರು ಮಾರಿಯುಪೋಲ್‌ನ ಹೊರಗಿನ ಉಕ್ರೇನಿಯನ್ನಲ್ಲಿ ಕಾಣಿಸಿಕೊಂಡಿದ್ದು ಹೀಗೆ
9 / 11
ಉಕ್ರೇನ್‌ನ ಮಾರಿಯುಪೋಲ್‌ನಲ್ಲಿ ರಷ್ಯಾದ ಶೆಲ್ ದಾಳಿಯ ಸಮಯದಲ್ಲಿ ಜನರು ಆಶ್ರಯದಲ್ಲಿ ನಿಂತಿರುವಾಗ ಮಗು ಕುರ್ಚಿಯ ಮೇಲೆ ಮಲಗಿರುವ ಮನಕಲಕುವ ದೃಶ್ಯ..
10 / 11
ರಷ್ಯಾ ದಾಳಿಯಿಂದ ಆಹಾರಕ್ಕೂ ಪರದಾಡುತ್ತಿರುವ ಜನ ನೀರನ್ನು ಕೊಳ್ಳಲು ಅಂಗಡಿಯ ಮುಂದೆ ಕಾಣಿಸಿಕೊಂಡಿದ್ದಾರೆ.
11 / 11
ಉಕ್ರೇನ್‌ನ ನಗರಗಳಲ್ಲಿ ಬಾಂಬ್ ಸ್ಫೂಟಗೊಂಡ ಬಳಿಕ ಉಕ್ರೇನ್‌ನ ಕೈವ್‌ನಿಂದ ಹೊರಡಲು ಪ್ರಯತ್ನಿಸುತ್ತಿರುವಾಗ ತನ್ನ ಮಗಳೊಂದಿಗೆ ಮಹಿಳೆ ರೈಲಿಗಾಗಿ ಕಾಯುತ್ತಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಹೀಗೆ