ಕಾರಣಗಳು: ಕೋವಿಡ್-19 ಮತ್ತು ಫ್ಲೂ ಎರಡೂ ಸೋಂಕುಗಳು ಎರಡು ವಿಭಿನ್ನ ರೀತಿಯ ವೈರಸ್‌ಗಳಿಂದ ಉಂಟಾಗುತ್ತದೆ. ಫ್ಲೂ ಇನ್ಫ್ಲುಯೆನ್ಸ A ಮತ್ತು B ವೈರಸ್‌ಗಳಿಂದ ಉಂಟಾಗುತ್ತದೆ. ಎರಡರಲ್ಲಿ, ಇನ್ಫ್ಲುಯೆನ್ಸ, ಎ ವೈರಸ್ ಚಳಿಗಾಲದಲ್ಲಿ ಹೆಚ್ಚಿನ ಸಂದರ್ಭಗಳಲ್ಲಿ ಜ್ವರಕ್ಕೆ ಕಾರಣವಾಗಿದೆ ಏಕೆಂದರೆ ಇದು ಹೆಚ್ಚು ಸಾಂಕ್ರಾಮಿಕವಾಗಿದೆ. ಮತ್ತೊಂದೆಡೆ, ಕೋವಿಡ್ -19 ತೀವ್ರವಾದ ಉಸಿರಾಟದ ತೊಂದರೆಗೆ ಕೊರೊನಾವೈರಸ್ 2 (SARS-CoV-2) ವೈರಸ್ ಉಂಟಾಗುತ್ತದೆ.
ರೋಗ ಲಕ್ಷಣಗಳು: ಕೊರೋನಾ ಮತ್ತು ಫ್ಲೂ ಎರಡೂ ಸೋಂಕಿನ ಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆಯಾಗಿರುತ್ತದೆ. ಆದರೆ ಎರಡೂ ಸೋಂಕು ಉಸಿರಾಟದಿಂದಲೇ ಹರಡುತ್ತದೆ. ಕೆಮ್ಮು, ಜ್ವರ, ಆಯಾಸ ಮೂರು ಕೊರೋನಾ ಹಾಗೂ ಫ್ಲೂ ಸಾಮಾನ್ಯ ಲಕ್ಷಣಗಳಾಗಿವೆ. ಮೂಗಿನಲ್ಲಿ ಸೋರುವಿಕೆ, ಅತಿಸಾರ, ಗಂಟಲು ನೋವು, ಸ್ನಾಯು ನೋವು ಮತ್ತು ಶೀತ ಕೂಡ ಎರಡೂ ಸೋಂಕಿನ ಲಕ್ಷಣ. ಆದರೆ ಎಲ್ಲಾ ಸಂದರ್ಭಗಳಲ್ಲಿ ಅಲ್ಲ. ಉಸಿರಾಟದ ತೊಂದರೆ, ರುಚಿ ಮತ್ತು ವಾಸನೆಯ ನಷ್ಟ ಕೊರೋನವೈರಸ್ ಸೋಂಕಿನ ಪ್ರಮುಖ ಲಕ್ಷಣಗಳಾಗಿವೆ. ಆದರೆ ಫ್ಲೂನಲ್ಲಿ ಈ ರೀತಿ ಲಕ್ಷಣ ಕಂಡುಬರುವುದಿಲ್ಲ.
ಲಕ್ಷಣಗಳು ಕಾಣಸಿಕೊಳ್ಳುವ ಸಮಯ: ಕೊರೋನಾ ಮತ್ತು ಫ್ಲೂ ಎರಡೂ ಸೋಂಕು ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಯಾಗಿದೆ.ಆದರೆ ಫ್ಲೂ ಕಡಿಮೆ ಸಮಯದಲ್ಲಿ ಅರಿವಿಗೆ ಬರುತ್ತದೆ. ಫ್ಲೂ 1-4 ದಿನಗಳ ಒಳಗೆ ಲಕ್ಷಣಗಳು ಸ್ಪಷ್ಟವಾಗಿ ಕಾಣಸಿಕೊಳ್ಳುತ್ತದೆ. ಆದರೆ ಕೊರೋನಾ ಸೋಂಕಿನಲ್ಲಿ 1-14 ದಿನಗಳ ಬಳಿಕ ಲಕ್ಷಣಗಳು ಕಾಣಿಸುತ್ತದೆ .ಆದರೆ ನೆನಪಿಡಿ ಜ್ವರ ಮತ್ತು ಕೋವಿಡ್-19 ಹೊಂದಿರುವ ಜನರು ಯಾವುದೇ ರೋಗಲಕ್ಷಣಗಳನ್ನು ತೋರಿಸುವ ಮೊದಲು ಇತರರಿಗೆ ಸುಲಭವಾಗಿ ವೈರಸ್ ಅನ್ನು ಹರಡಬಹುದು.
ರೋಗ ಹರಡುವ ರೀತಿ: ಕೊರೋನಾ ಹಾಗೂ ಫ್ಲೂ ಎರಡೂ ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಸುಲಭವಾಗಿ ಹರಡುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಸೋಂಕು ಬೇಗ ಆವರಿಸಿಕೊಳ್ಳುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ 6 ಅಡಿಗಿಂತ ಹತ್ತಿರದಲ್ಲಿ ನಿಂತು ಮಾತನಾಡಿದರೆ ಬಾಯಿಯ ಮೂಲಕ ಅಥವಾ ಮೂಗಿನ ಸ್ರವಿಸುವಿಕೆಯ ಮೂಲಕ ಸೋಂಕು ಹರಡುತ್ತದೆ. ಆದ್ದರಿಂದ ಎರಡೂ ಸೋಂಕಿನ ಹರಡುವಿಕೆ ತಪ್ಪಿಸಲು ಸಾಮಾಜಿಕ ಅಂತರ ಬಹುಮುಖ್ಯವಾಗಿದೆ. ಫ್ಲೂ ರೋಗ ಮಕ್ಕಳಿಂದ ವಯಸ್ಕರಿಗೆ ಸುಲಭವಾಗಿ ಹರಡುತ್ತದೆ. ಆದರೆ ಕೊರೋನಾಕ್ಕೆ ಮಕ್ಕಳು ಒಳಗಾಗುವ ಅಥವಾ ಸೋಂಕನ್ನು ಹರಡುವ ಸಾಧ್ಯತೆ ಕಡಿಮೆ.
ಮುನ್ನೆಚ್ಚರಿಕಾ ಕ್ರಮಗಳು: ಕೊರೋನಾ ಹಾಗೂ ಫ್ಲೂ ಎರಡೂ ರೋಗಗಳಿಗೆ ಸಾಕಷ್ಟು ರೀತಿಯ ಲಸಿಕೆಗಳು ಲಭ್ಯವಿದೆ. ಆದರೆ ಕಾಯಿಲೆ ಹರಡದಂತೆ ತಡೆಯಲು ಹೀಗೆ ಮಾಡಿ, ನಿಯಮಿತವಾಗಿ ಕೈಗಳನ್ನು ಸ್ವಚ್ಛಗೊಳಿಸಿ, ಮುಖವನ್ನು ಆಗಾಗ ಮುಟ್ಟಬೇಡಿ, 6ಅಡಿ ದೂರನಿಂತು ವ್ಯವಹರಿಸಿ, ಕೆಮ್ಮುವಾಗ ಅಥವಾ ಸೀನುವಾಗ ಬಾಯಿಯನ್ನು ಮುಚ್ಚಿಕೊಳ್ಳಿ, ಅನಾರೋಗ್ಯದ ಲಕ್ಷಣಗಳು ಕಂಡುಬಂದರೆ ಮನೆಯಲ್ಲೇ ಇರಿ, ಜನಸಂದಣಿ ಇರುವ ಪ್ರದೇಶಗಳಿಂದ ದೂರವಿರಿ.
ಅಪಾಯದ ಹಂತ: ಫ್ಲೂ ಮತ್ತು ಕೊರೋನಾ ಎರಡೂ ಸೋಂಕು ತಗಲಿದಾಗ ದೇಹದ ತಾಪಮಾನ ಕುಸಿಯುವುದು ಮತ್ತು ಉಸಿರಾಟದ ಸಮಸ್ಯೆ ಕಾಣಸಿಕೊಳ್ಳುವುದು ಅಪಾಯದ ಮುನ್ಸೂಚನೆ. ಹೀಗಾಗಿ ಕೊರೋನಾ ಲಕ್ಷಣಗಳು ಕಂಡುಬಂದ ತಕ್ಷಣ ಸ್ವತಃ ಕ್ವಾರಂಟೈನ್ ಆಗಿರಿ. ಯಾವ ಸೋಂಕು ತಗುಲಿದರೂ ಇತರರಿಗೆ ಹರಡುವ ಸಾಧ್ಯತೆ ಹೆಚ್ಚು ಹೀಗಾಗಿ ಹೆಚ್ಚು ಮುನ್ನಚ್ಚರಿಕೆ ವಹಿಸಿ.