- Kannada News Photo gallery Badminton star Sai Praneeth and Dhruv Rawat have tested positive and withdrawn from india open
ಸಾಯಿ ಪ್ರಣೀತ್ಗೆ ಕೊರೊನಾ ಪಾಸಿಟಿವ್; ಇಂಡಿಯಾ ಓಪನ್‌ನಿಂದ ಹಿಂದೆ ಸರಿದ ಬ್ಯಾಡ್ಮಿಂಟನ್ ಸ್ಟಾರ್
B Sai Praneeth: ಹೈದರಾಬಾದ್‌ನಿಂದ ದೆಹಲಿಗೆ ತೆರಳುವಾಗ ಪ್ರಣೀತ್ ಅವರ ಕೊರೊನಾ ವೈರಸ್ ಪರೀಕ್ಷೆಯನ್ನು ಮಾಡಲಾಗಿತ್ತು. ವರದಿ ಪಾಸಿಟಿವ್ ಬಂದಿದೆ ಎಂದು ಬಿಎಐ ಈಗ ಮಾಹಿತಿ ನೀಡಿದೆ.
Updated on: Jan 09, 2022 | 9:49 PM

ಕೊರೊನಾ ಹೊರತಾಗಿಯೂ, ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಷನ್ ದೆಹಲಿಯಲ್ಲಿ ಇಂಡಿಯಾ ಓಪನ್ ಆಯೋಜಿಸಲು ನಿರ್ಧರಿಸಿತ್ತು. ಆದರೆ, ಟೂರ್ನಿ ಆರಂಭಕ್ಕೂ ಮುನ್ನವೇ ಕೊರೊನಾ ಛಾಯೆ ಆವರಿಸಿದೆ. ಪಂದ್ಯಾವಳಿಯು ಜನವರಿ 11 ರಿಂದ ಪ್ರಾರಂಭವಾಗಬೇಕಿತ್ತು ಆದರೆ ಈಗ ಸ್ಟಾರ್ ಆಟಗಾರ ಬಿ ಸಾಯಿ ಪ್ರಣೀತ್ ಈ ಟೂರ್ನಿಯಿಂದ ಹೊರನಡೆದಿದ್ದಾರೆ.

ಹೈದರಾಬಾದ್‌ನಿಂದ ದೆಹಲಿಗೆ ತೆರಳುವಾಗ ಪ್ರಣೀತ್ ಅವರ ಕೊರೊನಾ ವೈರಸ್ ಪರೀಕ್ಷೆಯನ್ನು ಮಾಡಲಾಗಿತ್ತು. ವರದಿ ಪಾಸಿಟಿವ್ ಬಂದಿದೆ ಎಂದು ಬಿಎಐ ಈಗ ಮಾಹಿತಿ ನೀಡಿದೆ. ಪ್ರಣೀತ್ ಹೊರತಾಗಿ, ಧ್ರುವ ರಾವತ್ ವರದಿ ಕೂಡ ಪಾಸಿಟಿವ್ ಬಂದಿದೆ. ಹೀಗಾಗಿ ಇಬ್ಬರೂ ಆಟಗಾರರು ಇಂಡಿಯಾ ಓಪನ್‌ನಿಂದ ಹೊರಗುಳಿದಿದ್ದಾರೆ.

2019 ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಪ್ರಣೀತ್ ಈ ಬಗ್ಗೆ ಮಾಹಿತಿ ನೀಡಿದ್ದು, ನಾನು ಕೊರೊನಾ ಪಾಸಿಟಿವ್ ಆಗಿದ್ದೇನೆ ಮತ್ತು ಪ್ರಸ್ತುತ ಮನೆಯಲ್ಲಿ ಪ್ರತ್ಯೇಕವಾಗಿರುತ್ತೇನೆ. ಶನಿವಾರ ನನಗೆ ಶೀತ ಮತ್ತು ಕೆಮ್ಮು ಇತ್ತು. ನಾನು ಕನಿಷ್ಠ ಒಂದು ವಾರ ಪ್ರತ್ಯೇಕವಾಗಿರಬೇಕು. ಈ ವರ್ಷ ನನಗೆ ತುಂಬಾ ಮಹತ್ವದ್ದಾಗಿದೆ ಹಾಗಾಗಿ ನಾನು ಫಿಟ್ನೆಸ್ ಮರಳಿ ಪಡೆಯುವುದು ಮುಖ್ಯವಾಗಿದೆ ಎಂದಿದ್ದಾರೆ.

ಇಂಗ್ಲೆಂಡ್‌ನ ಡಬಲ್ಸ್ ಸ್ಪೆಷಲಿಸ್ಟ್ ಸೀನ್ ವೆಂಡಿ ಮತ್ತು ಕೋಚ್ ನಾಥನ್ ರಾಬರ್ಟ್‌ಸನ್ COVID-19 ತುತ್ತಾಗಿರುವುದರಿಂದ ಇಡೀ ಬ್ಯಾಡ್ಮಿಂಟನ್ ತಂಡವು ಮುಂಬರುವ ಇಂಡಿಯಾ ಓಪನ್‌ನಿಂದ ಹಿಂದೆ ಸರಿದಿದೆ. ಈ ವಿಚಾರವನ್ನು ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾ (ಬಿಎಐ) ಭಾನುವಾರ ಇಂಗ್ಲೆಂಡ್‌ನ ನಿರ್ಗಮನದ ನಿರ್ಧಾರವನ್ನು ಬಹಿರಂಗಗೊಳಿಸಿದೆ.



















