ಶುಕ್ರವಾರದಂದು ಹಳದಿ ಬಟ್ಟೆಯಲ್ಲಿ 5 ಕಪ್ಪೆ ಚಿಪ್ಪುಗಳು, ಬೆಳ್ಳಿಯ ನಾಣ್ಯ ಮತ್ತು ಸ್ವಲ್ಪ ಕುಂಕುಮವನ್ನು ಹಾಕಿ ಕಟ್ಟಿಕೊಳ್ಳಿ. ಇದನ್ನು ಹಣ ಇಡುವ ಜಾಗ ಅಥವಾ ಇನ್ನಿತರ ಸುರಕ್ಷಿತ ಸ್ಥಳದಲ್ಲಿ ಅರಿಶಿಣದ ಉಂಡೆಯೊಂದಿಗೆ ಇಡಿ.
ರಕ್ತಚಂದನವನ್ನು ನೀರಿನಲ್ಲಿ ಕರಗಿಸಿ ಮತ್ತು ಭೋಜಪತ್ರ ಎಲೆಗಳ ಮೇಲೆ ನವಿಲು ಗರಿಗಳಿಂದ ಶ್ರೀ ಎಂದು ಬರೆಯಿರಿ. ನಂತರ ಈ ಭೋಜಪತ್ರವನ್ನು ಸುರಕ್ಷಿತವಾಗಿ ಮನೆಯಲ್ಲಿ ಇಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ಮನೆಯಲ್ಲಿ ಹಣ ಹೆಚ್ಚಾಗುತ್ತದೆ.
ಬೆಳ್ಳಿ, ಹಿತ್ತಾಳೆ ಅಥವಾ ಕಂಚಿನ ಲೋಹದಿಂದ ಮಾಡಿದ ಆಮೆಯನ್ನು ಮನೆಯಲ್ಲಿ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಉತ್ತರ ದಿಕ್ಕಿನಲ್ಲಿ ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗುತ್ತದೆ ಎಂದು ನಂಬಲಾಗಿದೆ. ಇದು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ. ಅಷ್ಟೇ ಅಲ್ಲ ಹಣವೂ ಹೆಚ್ಚಾಗುತ್ತದೆ
ಶಂಖವು ಲಕ್ಷ್ಮಿ ದೇವಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಇದನ್ನು ಹಣ ಇಡುವ ಕಪಾಟಿನಲ್ಲಿಟ್ಟಾಗ, ತಾಯಿ ಲಕ್ಷ್ಮಿಯೇ ಅದರ ಕಡೆಗೆ ಆಕರ್ಷಿತಳಾಗುತ್ತಾಳೆ ಮತ್ತು ಹಣಕ್ಕೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ. ಅದೇ ಸಮಯದಲ್ಲಿ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.
ವೀಳ್ಯದೆಲೆ ಅಡಿಕೆಯನ್ನು ಗೌರಿ ಗಣೇಶನ ಒಂದು ರೂಪವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಸಂಪತ್ತು ಹೆಚ್ಚಾಗುತ್ತದೆ. ಜತೆಗೆ ಗಣೇಶ ಎಲ್ಲಿ ನೆಲೆಸುತ್ತಾನೆಯೋ ಅಲ್ಲಿ ತಾಯಿ ಲಕ್ಷ್ಮಿಯೂ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ.
Published On - 8:30 am, Mon, 10 January 22