ಇದರ ನಂತರ, ನವೆಂಬರ್ 2021 ರಲ್ಲಿ ಕಾನ್ಪುರದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆದ ಟೆಸ್ಟ್ ಕೂಡ ರೋಚಕ ರೀತಿಯಲ್ಲಿ ಡ್ರಾಗೊಂಡಿತು. ಕೊನೆಯ ದಿನ ನ್ಯೂಜಿಲೆಂಡ್‌ಗೆ 280 ರನ್‌ಗಳ ಅವಶ್ಯಕತೆಯಿದ್ದರೆ, ಭಾರತಕ್ಕೆ 9 ವಿಕೆಟ್‌ಗಳ ಅಗತ್ಯವಿತ್ತು. ಅಶ್ವಿನ್, ಅಕ್ಸರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರ ಸ್ಪಿನ್ ತ್ರಿವಳಿಗಳ ಹೊಡೆತದ ಮುಂದೆ ನ್ಯೂಜಿಲೆಂಡ್ 155 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡಿತು. ಭಾರತಕ್ಕೆ ಕೇವಲ 1 ವಿಕೆಟ್ ಅಗತ್ಯವಿತ್ತು, ಆದರೆ ರಚಿನ್ ರವೀಂದ್ರ ಮತ್ತು ಎಜಾಜ್ ಪಟೇಲ್ ಸತತ 52 ಎಸೆತಗಳಿಗೆ ವಿಕೆಟ್ ಕಾಯ್ದುಕೊಂಡು ಭಾರತದ ಗೆಲುವಿಗೆ ಅಡ್ಡಿಯಾದರು.