AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: 3 ಸ್ಟೇಡಿಯಂ, 74 ಪಂದ್ಯಗಳು: ಭಾರತದಲ್ಲೇ ಐಪಿಎಲ್ ನಡೆಸಲು ಬಿಸಿಸಿಐ ಭರ್ಜರಿ ಪ್ಲ್ಯಾನ್

IPL 2022 Mega Auction: ಮುಂದಿನ ತಿಂಗಳು ಫೆಬ್ರವರಿ 12-13ರಂದು ಆಟಗಾರರ ಮೆಗಾ ಹರಾಜು ನಡೆಸಲು ಬಿಸಿಸಿಐ ಪ್ಲ್ಯಾನ್ ರೂಪಿಸಿದೆ. ಆದರೀಗ ಕೊರೋನಾ ಕಾರಣದಿಂದ ದಿನಾಂಕ ಬದಲಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

TV9 Web
| Edited By: |

Updated on: Jan 10, 2022 | 5:02 PM

Share
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 15 ಗಾಗಿ ಬಿಸಿಸಿಐ ಸಿದ್ದತೆಗಳನ್ನು ಆರಂಭಿಸಿದೆ. ಅದರಂತೆ ಐಪಿಎಲ್ ಮೆಗಾ ಹರಾಜಿಗೆ ಬೇಕಾದ ರೂಪುರೇಷೆಗಳನ್ನು ಸಿದ್ದಪಡಿಸಲಾಗುತ್ತಿದೆ. ಇದರ ನಡುವೆ ದೇಶದಲ್ಲಿ ಕೊರೋನಾ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರಿಂದ ಬಿಸಿಸಿಐ ಚಿಂತೆಗೀಡಾಗಿದೆ. ಏಕೆಂದರೆ ಬಿಸಿಸಿಐ ಈ ಬಾರಿ ಭಾರತದಲ್ಲೇ ಟೂರ್ನಿಯನ್ನು ಆಯೋಜಿಸಲು ಪ್ಲ್ಯಾನ್ ರೂಪಿಸಿತ್ತು.

1 / 8
 ಮಾರ್ಚ್​ ಕೊನೆಯ ವಾರ ಅಥವಾ ಏಪ್ರಿಲ್ ಮೊದಲ ವಾರದಲ್ಲಿ ಐಪಿಎಲ್​ ಸೀಸನ್​ 15 ಗಾಗಿ ಚಾಲನೆ ನೀಡಲು ಬಿಸಿಸಿಐ ಯೋಜನೆ ಹಾಕಿಕೊಂಡಿದೆ. ಆದರೀಗ ಓಮಿಕ್ರಾನ್ ಹೆಸರಿನ ಕೊರೋನಾ ಮತ್ತೆ ಆತಂಕವನ್ನು ಉಂಟು ಮಾಡಿದೆ. ಮುಂದಿನ ಎರಡು ತಿಂಗಳು ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ ಟೂರ್ನಿ ಆಯೋಜಿಸುವುದು ದೊಡ್ಡ ಸವಾಲಾಗಲಿದೆ.

2 / 8
 ಅದರಲ್ಲೂ ಈ ಬಾರಿ 10 ತಂಡಗಳಿರುವ ಕಾರಣ 10 ಸ್ಟೇಡಿಯಂಗಳಲ್ಲಿ ಪಂದ್ಯವನ್ನು ಆಯೋಜಿಸಬೇಕಿದೆ. ಇದೀಗ ಕೊರೋನಾ ಹಿನ್ನೆಲೆಯಲ್ಲಿ ಬಿಸಿಸಿಐ ಪರ್ಯಾಯ ಮಾರ್ಗಗಳ ಬಗ್ಗೆ ಚಿಂತಿಸಿದೆ. ಅದರಂತೆ ಐಪಿಎಲ್ ಆಡಳಿತ ಮಂಡಳಿ ಮುಂದಿನ ಸೀಸನ್​ ಐಪಿಎಲ್​ಗಾಗಿ ಎರಡು ಆಯ್ಕೆಗಳನ್ನು ಬಿಸಿಸಿಐ ಮುಂದಿಟ್ಟಿದೆ.

3 / 8
ಅದರಲ್ಲಿ ಒಂದು ಮಹಾರಾಷ್ಟ್ರ. ಮತ್ತೊಂದು ಯುಎಇ...ಈ ಬಾರಿ ಭಾರತದಲ್ಲೇ ಟೂರ್ನಿ ಆಯೋಜಿಸಲು ನಿರ್ಧರಿಸಿರುವ ಬಿಸಿಸಿಐ ಮುಂದೆ ಮಹಾರಾಷ್ಟ್ರದಲ್ಲಿ ಸಂಪೂರ್ಣ ಟೂರ್ನಿಯನ್ನು ಆಯೋಜಿಸುವ ಪ್ಲ್ಯಾನ್ ಮುಂದಿಡಲಾಗಿದೆ. ಏಕೆಂದರೆ ಮಹಾರಾಷ್ಟ್ರದಲ್ಲಿ ಮೂರು ಕ್ರಿಕೆಟ್ ಸ್ಟೇಡಿಯಂ ಇದ್ದು, ಅದರಂತೆ ಡಿವೈ ಪಾಟೀಲ್ ಸ್ಟೇಡಿಯಂ, ವಾಂಖೆಡೆ ಸ್ಟೇಡಿಯಂ ಹಾಗೂ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ​​ಸ್ಟೇಡಿಯಂ ನಲ್ಲಿ ಇಡೀ ಟೂರ್ನಿ ನಡೆಸಲು ಪ್ಲ್ಯಾನ್ ರೂಪಿಸಲಾಗಿದೆ.

4 / 8
ದೇಶದಲ್ಲಿ ಮಾರ್ಚ್​ನಲ್ಲಿ ಕೊರೋನಾಂತಕ ಇದ್ದರೆ ಮಹಾರಾಷ್ಟ್ರದ ಈ ಮೂರು ಸ್ಟೇಡಿಯಂನಲ್ಲಿ ಬಯೋ ಬಬಲ್ ವ್ಯವಸ್ಥೆಯೊಂದಿಗೆ ಎಲ್ಲಾ ಪಂದ್ಯಗಳನ್ನು ಆಯೋಜಿಸಬಹುದು. ಇದಾಗ್ಯೂ ಮಾರ್ಚ್​ ಅಂತ್ಯದ ವೇಳೆ ಭಾರತದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣದಲ್ಲಿ ಇರದಿದ್ದರೆ ಕಳೆದ ಬಾರಿಯಂತೆ ಈ ಸಲ ಕೂಡ ಇಡೀ ಟೂರ್ನಿಯನ್ನು ವಿದೇಶಕ್ಕೆ ಸ್ಥಳಾಂತರಿಸಲಾಗುತ್ತದೆ. ಅದರಂತೆ ಯುಎಇನಲ್ಲಿ ಇಡೀ ಟೂರ್ನಿ ನಡೆಯಲಿದೆ.

5 / 8
2020 ಹಾಗೂ 2021 ರಲ್ಲಿ ಯುಎಇ ನಲ್ಲಿ ಕೊರೋನಾ ನಡುವೆಯೇ ಬಿಸಿಸಿಐ ಯಶಸ್ವಿಯಾಗಿ ಐಪಿಎಲ್ ಟೂರ್ನಿಯನ್ನು ಆಯೋಜಿಸಿತ್ತು. ಹೀಗಾಗಿ ಮೊದಲ ಆಯ್ಕೆಯಾಗಿ ಮಹಾರಾಷ್ಟ್ರದ ಮೂರು ಸ್ಟೇಡಿಯಂಗಳಲ್ಲಿ ಟೂರ್ನಿಯನ್ನು ಆಯೋಜಿಸಲು ಸಾಧ್ಯವಾಗದಿದ್ದರೆ ಮಾತ್ರ ಈ ಬಾರಿ ಯುಎಇಗೆ ಐಪಿಎಲ್ ಶಿಫ್ಟ್ ಆಗಲಿದೆ.

6 / 8
ಈ ಬಗ್ಗೆ ಈಗಾಗಲೇ ಹೇಮಂಗ್ ಅಮೀನ್ (BCCI ಯ ಹಂಗಾಮಿ ಸಿಇಒ ಮತ್ತು IPL ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ) ವಿಜಯ್ ಪಾಟೀಲ್ (ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ) ಅವರನ್ನು ಸಂಪರ್ಕಿಸಿ ಚರ್ಚಿಸಿದ್ದಾರೆ. ಹಾಗೆಯೇ ಎನ್‌ಸಿಪಿ ಮುಖ್ಯಸ್ಥರಾದ ಶರದ್ ಪವಾರ್ ಅವರನ್ನು ಭೇಟಿಯಾಗಿ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅದರಂತೆ ಬಿಸಿಸಿಐ ಮತ್ತು ಎಂಸಿಎ ಅಧಿಕಾರಿಗಳು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿ ದೇಬಾಶಿಶ್ ಚಕ್ರಬರ್ತಿ ಅವರನ್ನು ಭೇಟಿ ಮಾಡಿ ಈ ಸಂಬಂಧ ಅಗತ್ಯ ಅನುಮತಿಗೆ ವ್ಯವಸ್ಥೆ ಮಾಡಲಿದ್ದಾರೆ ಎಂದು ವರದಿಯಾಗಿದೆ.

7 / 8
ಹೀಗಾಗಿ ಮುಂದಿನ ಎರಡು ತಿಂಗಳಲ್ಲಿ ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರದಿದ್ದರೆ ಮಹಾರಾಷ್ಟ್ರದ ಮೂರು ಸ್ಟೇಡಿಯಂಗಳಲ್ಲಿ ಐಪಿಎಲ್​ನ ಒಟ್ಟು 74 ಪಂದ್ಯಗಳು ನಡೆಯಲಿದೆ. ಒಂದು ವೇಳೆ ದೇಶದಲ್ಲಿ ಕೊರೋನ ಪರಿಸ್ಥಿತಿ ಕೈ ಮೀರಿದರೆ ಮಾತ್ರ ಟೂರ್ನಿ ವಿದೇಶಕ್ಕೆ ಶಿಫ್ಟ್ ಆಗಲಿದೆ. ಹೀಗಾಗಿ ಮುಂದಿನ ಸೀಸನ್ ಐಪಿಎಲ್​ನಲ್ಲೂ ಪ್ರೇಕ್ಷಕರಿಗೆ ಅವಕಾಶ ದೊರೆಯುವುದು ಅನುಮಾನ ಎಂದೇ ಹೇಳಬಹುದು.

8 / 8
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ

ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?

ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ

ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು

‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್

2026ರಲ್ಲಿ ಕಟಕ ರಾಶಿಯವರ ವರ್ಷ ಭವಿಷ್ಯ ಹೇಗಿದೆ ನೋಡಿ

ಅಶ್ವಗಂಧ ಹಾಗೂ ಸಾಂಪ್ರದಾಯಿಕ ಔಷಧಿಗಳ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು?

ಡಿಕೆಶಿ​ಗೆ ಸಿಕ್ತಾ ಸಿಎಂ ಆಗುವ ಸೂಚನೆ? ಬಲಗಡೆ ಹೂ ಕೊಟ್ಟ ಗೋಕರ್ಣ ಮಹಾಗಣಪತಿ

ತೈವಾನ್​ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ

VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ