Relationship Tips: ಹದಗೆಡುತ್ತಿರುವ ಸಂಬಂಧ ಸರಿಪಡಿಸಿಕೊಳ್ಳಲು ಈ ವಿಧಾನ ಅನುಸರಿಸಿ
TV9 Web | Updated By: Pavitra Bhat Jigalemane
Updated on:
Mar 05, 2022 | 3:05 PM
ಸಂಬಂಧದಲ್ಲಿ ಜಗಳ, ಮುನಿಸು ಸಹಜ. ಹಾಗೆಂದ ಮಾತ್ರಕ್ಕೆ ಎಲ್ಲವೂ ಮುಗಿದೆ ಹೋಯಿತು ಎನ್ನುವುದು ಸರಿಯಲ್ಲ. ತಪ್ಪು ಕಲ್ಪನೆಗಳು ಬರುವುದು ಸಾಮಾನ್ಯ ಅದನ್ನು ಸರಿಪಡಿಸುವ ಬಗೆ ಹೇಗೆ ಎನ್ನುವ ಮಾಹಿತಿ ಇಲ್ಲಿದೆ.
1 / 6
ಸಂಬಂಧದಲ್ಲಿ ಆಗಾಗ ತಪ್ಪು ಕಲ್ಪನೆಗಳು ಬರುವುದು ಸಹಜ. ಅಂತಹ ಸಂದರ್ಭಗಳಲ್ಲಿ ವಿಚ್ಛೇದನದಂತಹ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳುವ ಬದಲು ಸರಿಪಡಿಸಿಕೊಳ್ಳುವುದನ್ನು ನೋಡಬೇಕು. ಅದಕ್ಕಾಗಿ ಹೀಗೆ ಮಾಡಿ.
2 / 6
ಸಂಬಂಧ ಹದಗೆಡುತ್ತಿದೆ ಎನ್ನುವುದು ನಿಮ್ಮ ಗಮನಕ್ಕೆ ಬಂದಾಗ ಸಂಗಾತಿಯೊಂದಿಗೆ ಕುಳಿತು ಮಾತನಾಡಿ. ಎಲ್ಲಿ ಯಾವ ವಿಷಯಕ್ಕೆ ತಪ್ಪು ಕಲ್ಪನೆ ಉಂಟಾಗಿದೆ ಎನ್ನುವುದನ್ನು ಮುಕ್ತವಾಗಿ ಮಾತನಾಡಿ. ಆಗ ಹಾಳಾಗುತ್ತಿರುವ ಸಂಬಂಧವನ್ನು ಸರಿಪಡಿಸಿಕೊಳ್ಳಬಹುದು.
3 / 6
ಕೆಲವೊಮ್ಮೆ ಸಣ್ಣ ವಿಷಯಗಳಿಂದ ಆರಂಭವಾಗುವ ಜಗಳ ಅತಿರೆಕಕ್ಕೆ ಹೋಗುತ್ತದೆ. ಅಂತಹ ಸಂದರ್ಭಗಳಲ್ಲಿ ಸಂಗಾತಿಗೆ ಎಚ್ಚರಿಕೆ ನೀಡಿ, ಪ್ರೀತಿ ಸೋಲುತ್ತಿದೆ ಎನ್ನುವುದನ್ನು ವಿವರಿಸಿ ಹೇಳಿ. ನಿಮ್ಮ ನಡುವಿನ ಅಂತರ ಕಾಯ್ದುಕೊಳ್ಳಿ.
4 / 6
ಸಂಗಾತಿಯ ಯಾವುದೇ ಕೆಲಸಗಳಿರಲಿ ಅದಕ್ಕೆ ಹೆಗಲಾಗಿ. ಜೊತೆಯಾಗಿ ಮಾಡೋಣ ಎನ್ನುವ ಭರವಸೆ ನೀಡಿ. ಆಗ ಅವರಲ್ಲಿ ಒಬ್ಬನೇ ಎಲ್ಲವನ್ನು ನಿರ್ವಹಿಸಿಬೇಕು ಎನ್ನುವ ಒತ್ತಡದ ಭಾವನೆ ಕಡಿಮೆಯಾಗುತ್ತದೆ.
5 / 6
ದೂಷಿಸುವುದನ್ನು ನಿಲ್ಲಿಸಿ. ಒಬ್ಬರಿಗೊಬ್ಬರು ದೂಷಣೆ ಮಾಡಿಕೊಳ್ಳುವುದರಿಂದ ಯಾವ ಸಮಸ್ಯೆಯುಬಗೆಹರಿಯುವುದಿಲ್ಲ. ಅದರ ಬದಲು ನಿಮ್ಮಲ್ಲೇ ನೀವು ಮಾತನಾಡಿಕೊಂಡು, ಆಡುವ ಮಾತುಗಳಲ್ಲಿ ಎಚ್ಚರವಹಿಸಿ.
6 / 6
ಕುಟುಂಬದೊಂದಿಗೆ ಬೆರೆಯಿರಿ. ಹೆಚ್ಚು ಮನೆಯ ಇತರ ಸದಸ್ಯರೊಂದಿಗೆ ಬೆರೆತಾಗ ನಿಮ್ಮ ಭಾವನೆಗಳು ಸಂಗಾತಿಗೆ ಅರ್ಥವಾಗುತ್ತದೆ. ಜತೆಗೆ ನಿಮ್ಮ ನಡುವಿನ ತಪ್ಪುಕಲ್ಪನೆಗಳೂ ಕೂಡ ತಿಳಿಯಾಗಿ, ಮನಸ್ಸು ಪ್ರೀತಿಯನ್ನು ಬಯಸುತ್ತದೆ.