ಮಾವಿನ ಕಾಯಿ ಸಿಹಿ , ಹುಳಿ ಚಟ್ನಿ ಮಾಡುವ ವಿಧಾನ ಇಲ್ಲಿದೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 01, 2025 | 2:34 PM

ಈ ಬೇಸಿಗೆಯಲ್ಲಿ ನೀವು ಖಂಡಿತ ಮಾವಿನಕಾಯಿ ಚಟ್ನಿ ತಿನ್ನಲೇಬೇಕು. ಇದು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಬಾಯಿಗೂ ರುಚಿಯಾಗಿರುತ್ತದೆ. ಮಾವಿನಕಾಯಿ ಸಿಹಿ-ಹುಳಿ ಚಟ್ನಿಯನ್ನು ಮಾಡುವ ವಿಧಾನ ಹೇಗೆ? ಇದನ್ನು ಮನೆಯಲ್ಲಿ ಮಾಡಲು ಯಾವ ಕ್ರಮವನ್ನು ಅನುಸರಿಬೇಕು? ಈ ವಿಧಾನದಲ್ಲಿ ಮಾಡಿದ್ರೆ ಹೇಗಿರುತ್ತದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.

1 / 5
ಮಾವಿನ ಕಾಯಿ ಚಟ್ನಿ ಮಾಡುವುದು ತುಂಬಾ ಸುಲಭ, ಅದಕ್ಕೆ ಬೇಕಾದ ವಸ್ತುಗಳೇನು? ಇಲ್ಲಿದೆ ನೋಡಿ. ಒಂದು ಮಾವಿನಕಾಯಿ, ಉಪ್ಪು, ಕೆಂಪು ಮೆಣಸಿನ ಪುಡಿ, ಸಕ್ಕರೆ ಅಥವಾ ಬೆಲ್ಲ ಪದಾರ್ಥಗಳು ಬೇಕಾಗುತ್ತವೆ.

2 / 5
 ಮಾವಿನ ಕಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ, ಶುದ್ಧ ನೀರಿನಿಂದ ತೊಳೆಯಿರಿ. ನಂತರ ಅದನ್ನು ಸಿಪ್ಪೆ ಸುಲಿದು ಸಣ್ಣ ತುಂಡುಗಳಾಗಿ ಕತ್ತರಿಸಿ.

3 / 5
ಮಿಕ್ಸರ್ ಜಾರ್‌ಗೆ ಮಾವಿನ ಕಾಯಿ ತುಂಡುಗಳು, ರುಚಿಗೆ ತಕ್ಕಷ್ಟು ಉಪ್ಪು, ಸಕ್ಕರೆ ಮತ್ತು ಕೆಂಪು ಮೆಣಸಿನ ಪುಡಿಯನ್ನು ಸೇರಿಸಿ. ನಿಮಗೆ ರುಚಿ ಇಷ್ಟವಾದರೆ, ಕೆಂಪು ಮೆಣಸಿನ ಪುಡಿಯ ಬದಲಿಗೆ ಹಸಿರು ಮೆಣಸಿನಕಾಯಿಗಳನ್ನು ಸಹ ಬಳಸಬಹುದು.

4 / 5
ಸುವಾಸನೆಗಾಗಿ ಸ್ವಲ್ಪ ಶುಂಠಿ, ಪುದೀನ ಎಲೆಗಳು ಅಥವಾ ಕೊತ್ತಂಬರಿ ಸೊಪ್ಪನ್ನು ಕೂಡ ಸೇರಿಸಬಹುದು. ಎಲ್ಲವೂ ಸರಿಯಾಗಿ ಪುಡಿಮಾಡಿದ ನಂತರ, ಅದನ್ನು ಒಂದು ತಟ್ಟೆಗೆ ಹಾಕಿ.

5 / 5
ಈ ಮಾವಿನ ಕಾಯಿ ಚಟ್ನಿಯನ್ನು ನೀವು ಸಂಗ್ರಹಿಸಿಕೊಂಡು ಇಡಬಹುದು. ಇದನ್ನು  ಪರಾಠ, ರೊಟ್ಟಿ, ಚಪಾತಿ, ಗಂಜಿ ಅನ್ನದಲ್ಲಿ ಸೇವಿಸಬಹುದು.

Published On - 2:33 pm, Tue, 1 April 25