Holi 2023: ಹೋಳಿ ಹಬ್ಬದ ಸಮಯದಲ್ಲಿ ಭಾರತದ ಈ ಸ್ಥಳಗಳಿಗೆ ಒಮ್ಮೆಯಾದರೂ ಭೇಟಿ ನೀಡಲೇಬೇಕು

Updated on: Feb 24, 2023 | 8:38 PM

ಭಾರತದಲ್ಲಿ ಹೋಳಿ ಹಬ್ಬವನ್ನು ಒಂದೊಂದು ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಹೋಳಿಯ ಸಮಯದಲ್ಲಿ ನೀವು ಎಲ್ಲಾದರೂ ಹೋಗಲು ನಿರ್ಧಸಿದ್ದರೆ ಈ ಸ್ಥಳಗಳು ಉತ್ತಮ.

1 / 6
ಸದ್ಯ ಹೋಳಿ ಹಬ್ಬದ ಸಮಯ. ಭಾರತದಲ್ಲಿ ಹೋಳಿ ಹಬ್ಬವನ್ನು ಒಂದೊಂದು ಪ್ರದೇಶಗಳಲ್ಲಿ
ವಿಭಿನ್ನವಾಗಿ ಆಚರಿಸಲಾಗುತ್ತದೆ. ಹೋಳಿಯ ಸಮಯದಲ್ಲಿ ನೀವು ಎಲ್ಲಾದರೂ ಹೋಗಲು
ನಿರ್ಧಸಿದ್ದರೆ ಈ ಸ್ಥಳಗಳು ಉತ್ತಮ.

ಸದ್ಯ ಹೋಳಿ ಹಬ್ಬದ ಸಮಯ. ಭಾರತದಲ್ಲಿ ಹೋಳಿ ಹಬ್ಬವನ್ನು ಒಂದೊಂದು ಪ್ರದೇಶಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಹೋಳಿಯ ಸಮಯದಲ್ಲಿ ನೀವು ಎಲ್ಲಾದರೂ ಹೋಗಲು ನಿರ್ಧಸಿದ್ದರೆ ಈ ಸ್ಥಳಗಳು ಉತ್ತಮ.

2 / 6

ಶಾಂತಿನಿಕೇತನ: ಪಶ್ಚಿಮ ಬಂಗಾಳದ ಶಾಂತಿನಿಕೇತನದಲ್ಲಿ ಹೋಳಿಯನ್ನು ಬಸಂತ ಉತ್ಸವ ಅಥವಾ ವಸಂತ ಹಬ್ಬ ಎಂದು ಆಚರಿಸಲಾಗುತ್ತದೆ. ಇದು ಬಹಳ ವಿಶಿಷ್ಟಯಿಂದ ಕೂಡಿದ್ದು, ವಿದ್ಯಾರ್ಥಿಗಳು ಹಳದಿ ಬಣ್ಣದಿಂದ ಅಲಂಕರಿಸಿಕೊಂಡು ಜಾನಪದ ನೃತ್ಯ ಪ್ರದರ್ಶಿಸುತ್ತಾರೆ.

3 / 6

ಹಂಪಿ: ವಿಜಯನಗರ ಸಾಮ್ರಾಜ್ಯದ ಹಂಪಿಯಲ್ಲಿ ಕೂಡ ಹೋಳಿ ಹಬ್ಬವನ್ನು ವಿಭೃಂಭಣೆಯಿಂದ ಆಚರಿಸಲಾಗುತ್ತದೆ. ಡೊಳ್ಳು ಕುಣಿತ, ಅದ್ಧೂರಿ ವಿಜಯನಗರ ಸಾಮ್ರಾಜ್ಯದ ಅಬ್ಬರದ ಅವಶೇಷಗಳ ಮಧ್ಯೆ ಮುಂಜಾನೆಯಿಂದಲೇ ಸಮಸ್ತ ಸಮುದಾಯದವರು ಹೋಳಿ ಆಡಲು ಜಮಾಯಿಸುತ್ತಾರೆ.

4 / 6

ಮಥುರಾ: ಮಥುರಾ ಮತ್ತು ವೃಂದಾವನದ ಹೋಳಿಯು ರಾಷ್ಟ್ರದಾದ್ಯಂತ ಪ್ರಸಿದ್ಧವಾಗಿದೆ. ಪ್ರಪಂಚದಾದ್ಯಂತದ ಪ್ರಯಾಣಿಕರು ಮತ್ತು ಯಾತ್ರಿಕರು ಈ ಸಮಯದಲ್ಲಿ ಇಲ್ಲಿಗೆ ಭೇಟಿ ನೀಡುತ್ತಾರೆ.

5 / 6

ಜೈಪುರ: ಭಾರತದ ಪಿಂಕ್ ಸಿಟಿ ಆಗಿರುವ ಜೈಪುರದಲ್ಲಿ ಕೂಡ ಹೋಳಿ ಹಬ್ಬ ಅದ್ದೂರಿಯಿಂದು ಕೂಡಿರುತ್ತದೆ. ಹವಾ ಮಹಲ್ ಈ ಸಂದರ್ಭದಲ್ಲಿ ರಂಗುರಂಗಿನ ಬಣ್ಣದ ಲೈಟ್​ಗಳಿಂದ ಕಂಗೊಳಿಸುತ್ತಿರುತ್ತದೆ.

6 / 6

ಉದಯಪುರ: ಉದಯಪುರದಲ್ಲಿ ಹೋಳಿ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸುತ್ತಾರೆ. ಮೇವಾರದ ಮಹಾರಾಜರು ಹೋಳಿ ದಿನದಂದು ರಾಯಲ್ ಸಿಟಿ ಪ್ಯಾಲೇಸ್‌ಗೆ ವಿಶೇಷ ಸಂದರ್ಶಕರು, ವಿದೇಶಿ ಪ್ರವಾಸಿಗರು ಮತ್ತು ಹಲವಾರು ಗಣ್ಯರನ್ನು ಸ್ವಾಗತಿಸುತ್ತಾರೆ.

Published On - 8:38 pm, Fri, 24 February 23

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us