Honda U-GO: ಹೋಂಡಾ ಹೊಸ ಸ್ಕೂಟರ್ ಬಿಡುಗಡೆ: ಮೈಲೇಜ್ ಬರೋಬ್ಬರಿ 138 ಕಿ.ಮೀ

| Updated By: ಝಾಹಿರ್ ಯೂಸುಫ್

Updated on: Aug 09, 2021 | 7:46 PM

Honda U-GO Price in India: ಈಗಾಗಲೇ ಬಜಾಜ್ ಚೇತಕ್ ಎಲೆಕ್ಟ್ರಿಕ್ ಮೋಡ್​ನಲ್ಲಿ ಲಭ್ಯವಿದ್ದು, ಇದಲ್ಲದೆ ಆಥರ್, ಓಕಿನಾವಾ ಸೇರಿದಂತೆ ಅನೇಕ ಎಲೆಕ್ಟ್ರಿಕ್ ಸ್ಕೂಟರ್​ಗಳು ಭಾರತದಲ್ಲಿ ರಸ್ತೆಗಿಳಿದಿದೆ.

1 / 8
ವಾಹನ ಕ್ಷೇತ್ರದಲ್ಲಿ ಎಲೆಕ್ಟ್ರಿಕ್ ವಾಹನಗಳ ಕಾನ್ಸೆಪ್ಟ್ ಇದೀಗ ಹೊಸ ಸಂಚಲನಕ್ಕೆ ಕಾರಣವಾಗಿದೆ. ಈಗಾಗಲೇ ಭಾರತದ ಬಹುತೇಕ ಆಟೋಮೊಬೈಲ್ ಕಂಪೆನಿಗಳು ವಿದ್ಯುತ್ ಚಾಲಿತ ವಾಹನಗಳ ನಿರ್ಮಾಣದತ್ತ ಮುಖ ಮಾಡಿದೆ. ಅದರಲ್ಲೂ ಮುಖ್ಯವಾಗಿ ಸ್ಕೂಟರ್​ ತಯಾರಿಕಾ ಕಂಪೆನಿಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಪರಿಚಯಿಸಲು ಮುಂದಾಗುತ್ತಿದೆ.

2 / 8
ಈಗಾಗಲೇ ಬಜಾಜ್ ಚೇತಕ್ ಎಲೆಕ್ಟ್ರಿಕ್ ಮೋಡ್​ನಲ್ಲಿ ಲಭ್ಯವಿದ್ದು, ಇದಲ್ಲದೆ ಆಥರ್, ಓಕಿನಾವಾ ಸೇರಿದಂತೆ ಅನೇಕ ಎಲೆಕ್ಟ್ರಿಕ್ ಸ್ಕೂಟರ್​ಗಳು ಭಾರತದಲ್ಲಿ ರಸ್ತೆಗಿಳಿದಿದೆ. ಇನ್ನು ಓಲಾ ಕಂಪೆನಿ ಕೂಡ ತನ್ನ ಎಲೆಕ್ಟ್ರಿಕ್ ಸ್ಕೂಟರ್​ನ್ನು ಆಗಸ್ಟ್​ 15 ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

3 / 8
ಇದಾಗ್ಯೂ ಭಾರತದ ಸ್ಕೂಟರ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಕಂಪೆನಿ ಹೋಂಡಾ ಮಾತ್ರ ಎಲೆಕ್ಟ್ರಿಕ್ ದ್ವಿಚಕ್ರಗಳ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಆದರೆ ಇದೀಗ ಹೋಂಡಾ ಕಂಪೆನಿ ಕೂಡ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಕಂಪೆನಿಯು ಈಗಾಗಲೇ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಹೋಂಡಾ ಯು-ಗೋ ವನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ ಶ್ರೀಘ್ರದಲ್ಲೇ ನೂತನ ಈ ಸ್ಕೂಟರ್​ನ್ನು ಭಾರತದಲ್ಲೂ ಬಿಡುಗಡೆ ಮಾಡುವ ಸಿದ್ಥತೆಯಲ್ಲಿದೆ.

4 / 8
ಚೀನಾದಲ್ಲಿ ಬಿಡುಗಡೆಯಾಗಿರುವ ಯು-ಗೋ ಹಲವು ವೈಶಿಷ್ಯಗಳೊಂದಿಗೆ ಗಮನ ಸೆಳೆಯುತ್ತಿದೆ. ಮುಖ್ಯವಾಗಿ ಇದರ ಕಡಿಮೆ ಸ್ಪೀಡ್ ಮಾಡೆಲ್​ನಲ್ಲಿ ಕಂಟಿನ್ಯೂಯಸ್  800-ವ್ಯಾಟ್ ಹಬ್ ಮೋಟಾರ್ ನೀಡಲಾಗಿದ್ದು, ಅದು 1.2 ಕಿ.ವ್ಯಾ ಗರಿಷ್ಠ ಶಕ್ತಿಯನ್ನು ಹೊರಹಾಕುತ್ತದೆ. 
ಇದರ ಗರಿಷ್ಠ ವೇಗ ಗಂಟೆಗೆ 43 ಕಿ.ಮೀ. ಇನ್ನು 1.8 kW ನ ಗರಿಷ್ಠ ಶಕ್ತಿ ಹೊಂದಿರುವ ಯು-ಗೋ ಸ್ಕೂಟರ್​ನ ವೇಗ ಗಂಟೆಗೆ 53 ಕಿ.ಮೀ.

ಚೀನಾದಲ್ಲಿ ಬಿಡುಗಡೆಯಾಗಿರುವ ಯು-ಗೋ ಹಲವು ವೈಶಿಷ್ಯಗಳೊಂದಿಗೆ ಗಮನ ಸೆಳೆಯುತ್ತಿದೆ. ಮುಖ್ಯವಾಗಿ ಇದರ ಕಡಿಮೆ ಸ್ಪೀಡ್ ಮಾಡೆಲ್​ನಲ್ಲಿ ಕಂಟಿನ್ಯೂಯಸ್ 800-ವ್ಯಾಟ್ ಹಬ್ ಮೋಟಾರ್ ನೀಡಲಾಗಿದ್ದು, ಅದು 1.2 ಕಿ.ವ್ಯಾ ಗರಿಷ್ಠ ಶಕ್ತಿಯನ್ನು ಹೊರಹಾಕುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 43 ಕಿ.ಮೀ. ಇನ್ನು 1.8 kW ನ ಗರಿಷ್ಠ ಶಕ್ತಿ ಹೊಂದಿರುವ ಯು-ಗೋ ಸ್ಕೂಟರ್​ನ ವೇಗ ಗಂಟೆಗೆ 53 ಕಿ.ಮೀ.

5 / 8
ಈ ಎರಡು ಮಾಡೆಲ್​ಗಳಲ್ಲೂ  48V ಮತ್ತು 30Ahನ ತೆಗೆಯಬಹುದಾದ ಲಿಥಿಯಂ-ಐಯಾನ್ ಬ್ಯಾಟರಿ ನೀಡಲಾಗಿದೆ. ಈ ಬ್ಯಾಟರಿಗಳು 1.44 kWh ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸ್ಕೂಟರ್ ಎಲ್ ಸಿಡಿ ಸ್ಕ್ರೀನ್ ಹೊಂದಿದ್ದು, ಇದು ವೇಗ, ದೂರ, ಚಾರ್ಜ್ ಮತ್ತು ರೈಡಿಂಗ್ ಮೋಡ್ ನಂತಹ ಮಾಹಿತಿಯನ್ನು ನೀಡುತ್ತದೆ.  ಮುಂಭಾಗದ ಏಪ್ರನ್‌ನಲ್ಲಿ ಟ್ರಿಪಲ್ ಬೀಮ್‌ನೊಂದಿಗೆ ಎಲ್‌ಇಡಿ ಹೆಡ್‌ಲೈಟ್ ನೀಡಲಾಗಿದೆ. ಇದು ಎಲ್ಇಡಿ ಡಿಆರ್​ಎಲ್​ ಸ್ಟ್ರಿಪ್ ಅನ್ನು ಒಳಗೊಂಡಿದೆ.

6 / 8
ಈ ಸ್ಕೂಟರ್​ ಅನ್ನು ಒಂದು ಬಾರಿ ಸಂಪೂರ್ಣ ಚಾರ್ಜ್​ ಮಾಡಿದ್ರೆ 65 ಕಿ.ಮೀ (ಬೇಸಿಕ್ ಮಾಡೆಲ್) ಚಲಿಸಬಹುದು. ಹಾಗೆಯೇ ಬ್ಯಾಟರಿಗಳನ್ನು ಬಳಸಿ 130 ಕಿಮೀ ವರೆಗೆ ಕ್ರಮಿಸಬಹುದಾಗಿದೆ.

7 / 8
ಚೀನಾದಲ್ಲಿ ಇದರ ಆರಂಭಿಕ ಬೆಲೆ CNY 7,499. ಅಂದರೆ ಭಾರತದ ರೂಪಾಯಿ ಮೌಲ್ಯ ಸುಮಾರು 85,342 ರೂ. ಇನ್ನು ಸ್ಟ್ಯಾಂಡರ್ಡ್ ಮಾಡೆಲ್ 1.2kW ಬೆಲೆ CNY 7,999. ಭಾರತದ ಮೌಲ್ಯ ಸುಮಾರು ರೂ. 91,501 ರೂ ಆಗಿರಲಿದೆ.

8 / 8
 ಹೀಗಾಗಿ ಇದೇ ಬೆಲೆಯ ಅಸುಪಾಸಿನಲ್ಲಿ ಭಾರತದಲ್ಲೂ ಹೋಂಡಾ ಯು-ಗೋ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿರಲಿದೆ.