Afghanistan Economy: ಲಾರಿ ಹತ್ತಿದ ಹಪ್ಪಳದಂತಾದ ಅಫ್ಘಾನಿಸ್ತಾನದ ಆರ್ಥಿಕತೆ; ತಾಲಿಬಾನ್​ ತಾಳಿ ಉಳಿಯೋದು ಕಷ್ಡ

| Updated By: Srinivas Mata

Updated on: Aug 20, 2021 | 8:33 PM

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತ ಅನ್ನೋದು ಅಲ್ಲಿನ ಆರ್ಥಿಕತೆ ಪಾಲಿಗೆ ಹೇಗೆ ಎಂಬುದರ ಬಗ್ಗೆ ವಿಶ್ಲೇಷಣಾತ್ಮಕವಾದ ಲೇಖನ ಇಲ್ಲಿದೆ.

1 / 8
ಖಜಾನೆ ಬರಿದಾದ ದೇಶವೊಂದನ್ನು ಇಟ್ಟುಕೊಂಡು ಏನು ಆಡಳಿತ ಮಾಡುವುದಕ್ಕೆ ಸಾಧ್ಯ? ಸರಿ, ನೆರೆಹೊರೆಯವರ ಸಹಕಾರ ಇದೆಯಾ? ಆಡಳಿತಗಾರರ ಸಲುವಾಗಿ ಮನಸಾರೆ ತ್ಯಾಗ ಮಾಡುವುದಕ್ಕಾದರೂ ಅಲ್ಲಿನ ಪ್ರಜೆಗಳು ಸಿದ್ಧರಿದ್ದಾರಾ? ಈ ಪೈಕಿ ಯಾವುದಕ್ಕೂ ಸಕಾರಾತ್ಮಕ ಉತ್ತರ ಸಿಗಲ್ಲ. ಈಗ ಹೇಳಲು ಹೊರಟಿರುವುದು ಆರ್ಥಿಕ ಪತನದ ಅಂಚಿನಲ್ಲಿ ಭರವಸೆ ಕೂಡ ದಿವಾಳಿಯಾದ ಅಫ್ಘಾನಿಸ್ತಾನದ ಬಗ್ಗೆ. 20 ವರ್ಷಗಳ ಕಾಲ ಅಫ್ಘಾನಿಸ್ತಾನದಲ್ಲಿ ಸೇನೆಯನ್ನು ಬಿಟ್ಟಿದ್ದ ಅಮೆರಿಕಾ, ಅಲ್ಲಿಂದ ಹೊರಗೆ ಕಾಲಿಡುತ್ತಾ, ತಾಲಿಬಾನ್​ಗಳು ದೇಶದ ಆಡಳಿತದ ಚುಕ್ಕಾಣಿ ಕೈಗೆತ್ತಿಕೊಳ್ಳುವ ಹೊತ್ತಿಗೆ ಪರಿಸ್ಥಿತಿ ಏನು ಗೊತ್ತಾ? ವಿಶ್ವದ ಅತ್ಯಂತ ಬಡ ದೇಶಗಳಲ್ಲಿ ಅಫ್ಘಾನಿಸ್ತಾನವೂ ಒಂದು ಅಂತಾಗಿದೆ. ಇನ್ನು ವಿಶ್ವದ ಇತರ ದೇಶಗಳು ಸಹ ಅಫ್ಘಾನಿಸ್ತಾನಕ್ಕೆ ಹಣಕಾಸು ನೆರವು ಹಾಗೂ ಅಭಿವೃದ್ಧಿ ಯೋಜನೆಗಳನ್ನು ನಿಲ್ಲಿಸಿವೆ.

2 / 8
ಈಗ ಅಧಿಕಾರ ಹಿಡಿದ ತಾಲಿಬಾನ್​ ಏನೋ ಅಫ್ಘಾನಿಸ್ತಾನದ ಆರ್ಥಿಕತೆಯನ್ನು ಸುಧಾರಿಸುವಂತೆ ಮಾಡುತ್ತೇವೆ ಅಂದರೂ ಅದಕ್ಕೆ ವಿದೇಶೀ ಹಣದ ಮೇಲೆ ಅವಲಂಬಿಸಬೇಕು. ಜಾಗತಿಕ ದಾನಿಗಳು ಈಗಾಗಲೇ ಕೈ ಅನ್ನು ಅಡ್ಡಡ್ಡ ಅಲ್ಲಾಡಿಸಿ ಆಗಿದೆ. ಇನ್ನು ಬಿಕ್ಕಟ್ಟಿನ ಕಾಲದಲ್ಲಿ ದೇಶಗಳ ನೆರವಿಗೆ ಬರುವ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಬುಧವಾರದಂದು ಅಫ್ಘಾನಿಸ್ತಾನದ ಹಣಕಾಸಿನ ನೆರವನ್ನು ತಡೆಹಿಡಿದಿದೆ. ಕಾಬೂಲಿನಲ್ಲಿ ಈಗ ನಾಯಕತ್ವದ ಪ್ರಶ್ನೆ ಎದುರಾಗಿದೆ. ಕೊರೊನಾದಿಂದಲೇ ಆಫ್ಘನ್ ಆರ್ಥಿಕತೆ ಅಪ್ಪಚ್ಚಿಯಾಗಿದೆ. ಈಗ ದೇಶದ ಮೇಲೆ ತಾಲಿಬಾನ್​ಗಳ ಹಿಡಿತ ಬಂದ ಮೇಲಂತೂ ಹಪ್ಪಳದ ಮೇಲೆ ಲಾರಿ ಹತ್ತಿದಂತಾಗಿದೆ. ಅಫ್ಘಾನಿಸ್ತಾನದ ಬಳಿ ಇರುವ ಹಣವನ್ನು ಹೊರತುಪಡಿಸಿ, ಡ್ರಾ ಮಾಡಬಹುದು ಎಂಬಂಥ ಇನ್ನಷ್ಟು ಹಣ ಇರಬಹುದು. ದೇಶಕ್ಕೆ ಸೇರಿದ ಬಹುತೇಕ ನಗದು ಮತ್ತು ಚಿನ್ನದ ಸಂಗ್ರಹಕ್ಕೆ ಕೈ ಹಾಕಲು ತಾಲಿಬಾನ್​ಗೆ ಸಾಧ್ಯವಿಲ್ಲ.

3 / 8
ಜೋ ಬೈಡನ್​

ಜೋ ಬೈಡನ್​

4 / 8
ಐಎಂಎಫ್ (ಪ್ರಾತಿನಿಧಿಕ ಚಿತ್ರ)

ಐಎಂಎಫ್ (ಪ್ರಾತಿನಿಧಿಕ ಚಿತ್ರ)

5 / 8
ಚೀನಾ ಮತ್ತಿತರ ದೇಶಗಳು ಸ್ವಾಗತ

ಚೀನಾ ಮತ್ತಿತರ ದೇಶಗಳು ಸ್ವಾಗತ

6 / 8
ಅನನುಕೂಲಗಳು

ಅನನುಕೂಲಗಳು

7 / 8
ಅಫ್ಘಾನಿಸ್ತಾನದ ಕರೆನ್ಸಿ ಅಮೆರಿಕದ ಡಾಲರ್ ವಿರುದ್ಧ 86 ಅಫ್ಘನಿ

8 / 8
ವಿಶ್ವದ ಶೇ 80ರಷ್ಟು ಒಪಿಯಂ ಬೆಳೆಯುವುದು ಅಫ್ಘಾನಿಸ್ತಾನದಲ್ಲೇ

Published On - 7:56 pm, Fri, 20 August 21