Beauty Tips: 40ರ ನಂತರವೂ ನಿಮ್ಮ ಸೌಂದರ್ಯವನ್ನು ಹಾಗೆಯೇ ಉಳಿಸಿಕೊಳ್ಳಲು ಇಲ್ಲಿದೆ ಸಲಹೆಗಳು

| Updated By: ಅಕ್ಷತಾ ವರ್ಕಾಡಿ

Updated on: Nov 11, 2022 | 3:46 PM

ವಯಸ್ಸಾಗುತ್ತಾ ಹೋದಂತೆ ನಿಮ್ಮ ಸೌಂದರ್ಯವನ್ನು ಕಳೆದುಕೊಳ್ಳುತ್ತಿದ್ದೀರಿ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿದೇಯೇ? ಹಾಗಿದ್ದರೆ ನಿಮ್ಮ ದೈನಂದಿನ ಜೀವನದಲ್ಲಿ ಈ ಕೆಳಗಿನ ಅಂಶಗಳನ್ನು ರೂಢಿಸಿಕೊಳ್ಳಿ

1 / 7
ತೂಕ ಎತ್ತುವುದನ್ನು ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಿ. ಯಾಕೆಂದರೆ ನೀವು ವಯಸ್ಸಾದಂತೆ ಆರೋಗ್ಯಕರ ಮತ್ತು ಸ್ವತಂತ್ರವಾಗಿರಲು ಇದು ಸಹಾಯಮಾಡುತ್ತದೆ.

2 / 7
ನಡಿಗೆಯು ನಿಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯಮಾಡುತ್ತದೆ. ಆದ್ದರಿಂದ ಪ್ರತಿ ದಿನ ಒಂದಿಷ್ಟು ಗಂಟೆ ನಡಿಗೆಗೆ ಮೀಸಲಿಡಿ. ಇದು ನಿಮ್ಮ ಮನಸ್ಸು ಹಾಗೂ ದೇಹವನ್ನು ಚುರುಕಿನಿಂದಿಡಲು ಪ್ರಚೋಧಿಸುತ್ತದೆ.

3 / 7
ನಿದ್ರಾಹೀನತೆ ಯಾಕೆ ಉಂಟಾಗುತ್ತದೆ ಎಂಬುದಕ್ಕೆ ಖಚಿತ ಕಾರಣವಿಲ್ಲ. ಒತ್ತಡ ಮತ್ತು ಆತಂಕ, ಮಲಗುವ ಸ್ಥಳದ ಬದಲಾವಣೆ, ಪರಿಸರದ ಬದಲಾವಣೆ, ಜೀವನಶೈಲಿ ಹೀಗೆ ಹಲವು ಕಾರಣಗಳಿಂದ ನಿದ್ರಾಹೀನತೆ ಉಂಟಾಗುತ್ತದೆ.

4 / 7
ಆಲ್ಕೋಹಾಲ್ ನಿಮ್ಮ ಮೆದುಳು, ದೇಹ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಇದು ನಿದ್ರೆ, ಕಾರ್ಯಕ್ಷಮತೆ, ಮನಸ್ಥಿತಿ, ಅರಿವಿನ ಕಾರ್ಯ, ಕರುಳಿನ ಆರೋಗ್ಯ, ಹಾರ್ಮೋನುಗಳು, ರಕ್ತದಲ್ಲಿನ ಸಕ್ಕರೆ ಮೇಲೆ ಪರಿಣಾಮ ಬೀರುವುದ್ದರಿಂದ ನಿಮ್ಮ ಆರೋಗ್ಯ ಜೊತೆಗೆ ಸೌಂದರ್ಯವು ಕೆಡುವಂತೆ ಮಾಡುತ್ತದೆ.

5 / 7
ಪೌಷ್ಟಿಕಾಂಶವುಳ್ಳ ಆಹಾರವನ್ನು ಸೇವಿಸುವುದ್ದರಿಂದ ನಿಮ್ಮ ಆರೋಗ್ಯ ಹಾಗೂ ದೇಹ ಸದೃಡವಾಗಿರಲು ಸಹಾಯಮಾಡುತ್ತದೆ. ಕಾರ್ಬೋಹೈಡ್ರೇಟ್‌ಗಳು, ಕೊಬ್ಬುಗಳು ಮತ್ತು ಸೂಕ್ಷ್ಮ ಪೋಷಕಾಂಶಗಳ ಸಮತೋಲನದೊಂದಿಗೆ ಪ್ರೋಟೀನ್-ಕೇಂದ್ರಿತ ಊಟವನ್ನು ದೈನಂದಿನ ಆಹಾರ ಪದ್ದತಿಯಲ್ಲಿ ರೂಢಿಸಿಕೊಳ್ಳಿ. ಇದು ನಿಮ್ಮ ಆರೋಗ್ಯದ ಜೊತೆಗೆ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

6 / 7
ನೀವು ನಿಮ್ಮ ದೇಹದ ಬಗ್ಗೆ ಯಾವತ್ತಿಗೂ ಅಸಮಧಾನವನ್ನು ಇಟ್ಟುಕೊಳ್ಳುವುದು ಸೂಕ್ತವಲ್ಲ. ಇದು ನಿಮ್ಮನ್ನು ಮಾನಸಿಕ ಖಿನ್ನತೆಯತ್ತ ದೂಡುತ್ತದೆ. ಇದ್ದರಿಂದಾಗಿ ನೀವು ಮಾನಸಿಕವಾಗಿ ಹಿಂಸೆಗೆ ಒಳಗಾಗುವುದು ಮಾತ್ರವಲ್ಲದೇ ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಜೊತೆಗೆ ಹೆಚ್ಚು ವಯಸ್ಸಾದಂತೆ ಕಾಣುತ್ತದೆ.

7 / 7
ನಿಮ್ಮ 40 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ನೀವು ಕೆಲವು ಅದ್ಭುತವಾದ ವಿಷಯಗಳನ್ನು ಸಾಧಿಸಬಹುದು. ನೀವು ವಿಭಿನ್ನವಾಗಿ ಕೆಲಸಗಳನ್ನು ಮಾಡಲು ಸಿದ್ಧರಾಗಿರಬೇಕು. ತುಂಬಾ ತಡವಾಗಿದೆ ಮತ್ತು ನಿಮಗೆ ತುಂಬಾ ವಯಸ್ಸಾಗಿದೆ ಎಂದು ಯೋಚಿಸುವುದನ್ನು ನಿಲ್ಲಿಸಿ.

Published On - 3:05 pm, Fri, 11 November 22