Updated on: Dec 26, 2021 | 8:48 PM
ನೀವು ಈ ವರ್ಷಾಂತ್ಯದಲ್ಲಿ ಅಥವಾ ಹೊಸ ವರ್ಷದಲ್ಲಿ ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಮುಂದೆ ಅತ್ಯುತ್ತಮ ಮಡಚುವ ಫೋನ್ ಆಯ್ಕೆ ಇದೆ. ಏಕೆಂದರೆ ಕೆಲ ದಿನಗಳ ಹಿಂದೆ ಹುವಾಯ್ (Huawei) ಅತ್ಯುತ್ತಮ ಫೋಲ್ಡಿಂಗ್ ಸ್ಮಾರ್ಟ್‌ಫೋನ್ ಅನ್ನು ಪರಿಚಯಿಸಿದೆ.
ಹುವಾಯ್ ಪಿ50 ಪೊಕೆಟ್ ಫೋಲ್ಡಬಲ್ ಫೋನ್ (Huawei P50 Pocket Foldable Phone) Huawei ಕಂಪೆನಿಯ ಮೊದಲ ಕ್ಲಾಮ್‌ಶೆಲ್ ಫೋಲ್ಡಬಲ್ ಫೋನ್ ಎಂಬುದು ವಿಶೇಷ. ಹಾಗಿದ್ರೆ ನೂತನ ಫೋನ್ನ ವಿಶೇಷತೆಗಳೇನು ನೋಡೋಣ...
ಸ್ಟೊರೇಜ್: Huawei P50 Pocket ನ ಮೂಲ ಮಾದರಿಯು 8GB + 256GB ಸ್ಟೋರೇಜ್ ಆಯ್ಕೆಯಲ್ಲಿ ಲಭ್ಯವಿದ್ದು, ಇನ್ನು ಪ್ರೀಮಿಯಂ ಆವೃತ್ತಿಯು 12GB + 512GB ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.
ಡಿಸ್ಪ್ಲೇ: ಈ ಸ್ಮಾರ್ಟ್ಫೋನ್ನಲ್ಲಿ 6.90 ಇಂಚಿನ ಡಿಸ್ಪ್ಲೇ ನೀಡಲಾಗಿದ್ದು, ಇದು 2790x1188 ಪಿಕ್ಸೆಲ್ ರೆಸ್ಯುಲೇಷನ್ ಹೊಂದಿದೆ.
ಕ್ಯಾಮೆರಾ: ಈ ಫೋನ್ನಲ್ಲಿ 10.7 ಮೆಗಾ ಫಿಕ್ಸೆಲ್ ಫ್ರಂಟ್ ಕ್ಯಾಮೆರಾದಲ್ಲಿ ನೀಡಲಾಗಿದ್ದು, ಹಿಂಬದಿಯಲ್ಲಿ 40mp + 13mp + 32mp ಪಿಕ್ಸೆಲ್ನ ಮೂರು ಕ್ಯಾಮೆರಾ ನೀಡಲಾಗಿದೆ.
ಪ್ರೊಸೆಸರ್: Huawei P50 Pocketಯಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 888 ಪ್ರೊಸೆಸರ್ ನೀಡಲಾಗಿದೆ. ಅಲ್ಲದೆ ಇದು ಹಾರ್ಮನಿ ಅಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯ ನಿರ್ವಹಿಸಲಿದೆ.
ಬ್ಯಾಟರಿ: ಈ ಸ್ಮಾರ್ಟ್ಫೋನ್ನಲ್ಲಿ 4000mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ.
ಬೆಲೆ: ಹುವಾಯ್ ಪಿ50 ಪೊಕೆಟ್ (8GB + 256GB ) ಸ್ಮಾರ್ಟ್‌ಫೋನ್ ಬೆಲೆ ಸುಮಾರು 1.06 ಲಕ್ಷ ರೂ, ಹಾಗೆಯೇ ಪ್ರೀಮಿಯಂ ಆವೃತ್ತಿ ಬೆಲೆ 1.30 ಲಕ್ಷ ರೂ.