
ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022 ರಲ್ಲಿ ಆಡಿದ ಮೂರು ಪಂದ್ಯಗಳ ಪೈಕಿ ಎರಡರಲ್ಲಿ ಭರ್ಜರಿಯಾಗಿ ಗೆದ್ದು ಒಂದರಲ್ಲಿ ಸೋಲುಂಡಿರುವ ಭಾರತ ಮಹಿಳಾ ತಂಡ ತನ್ನ ಮುಂದಿನ ಪಂದ್ಯವನ್ನು ಇಂಗ್ಲೆಂಡ್ ವಿರುದ್ಧ ಆಡಲಿದೆ. ಈ ಪಂದ್ಯಕ್ಕೆ ಸಿದ್ಧತೆ ನಡೆಸಲು ಭಾರತ ತಂಡ ನೆಟ್ಸ್ ನಲ್ಲಿ ಅಭ್ಯಾಸ ನಡೆಸಬೇಕಿತ್ತು. ಆದರೆ, ಮಿಥಾಲಿ ಪಡೆ ಹಾಗೆ ಮಾಡುವ ಬದಲು ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪಂದ್ಯ ವೀಕ್ಷಿಸಲು ತೆರಳಿದ್ದಾರೆ.

ಭಾರತ ತಂಡದ ಕೆಲ ಆಟಗಾರ್ತಿಯರು ಸದ್ಯ ಸಾಗುತ್ತಿರುವ ಈ ಪಂದ್ಯವನ್ನು ಸ್ಟೇಡಿಯಂನಲ್ಲಿ ಕುಳಿತು ಲೈವ್ ವೀಕ್ಷಿಸುತ್ತಿದ್ದಾರೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ಮಾರ್ಚ್ 16 ರಂದು ನಡೆಯಲಿದೆ. ಇದು ಭಾರತಕ್ಕೆ ಮಹತ್ವದ ಪಂದ್ಯ. ಅದೇ ಕಾರಣಕ್ಕಾಗಿ, ನಾಯಕಿ ಮಿಥಾಲಿ ರಾಜ್ ಸೇರಿದಂತೆ ಭಾರತ ಮಹಿಳಾ ತಂಡದ ಕೆಲ ಸದಸ್ಯರು ಕ್ರೀಡಾಂಗಣದಲ್ಲಿ ಕುಳಿತು ಇಂಗ್ಲೆಂಡ್ ಆಟವನ್ನು ವೀಕ್ಷಿಸಿದ್ದಾರೆ. ಯಕೆಂದರೆ ಇಂಗ್ಲೆಂಡ್ ತಂಡದದಲ್ಲಿನ ನ್ಯೂನತೆಗಳನ್ನು ಕಂಡುಹಿಡಿಯಲು.

ಹೌದು, ಎದುರಾಳಿಯ ದೌರ್ಬಲ್ಯಗಳನ್ನು ಎದುರಿನಿಂದ ಸರಳವಾಗಿ ಪರೀಕ್ಷಿಸಲು ಟೀಮ್ ಇಂಡಿಯಾ ಆಟಗಾರ್ತಿಯರು ಆಫ್ರಿಕಾ-ಇಂಗ್ಲೆಂಡ್ ಪಂದ್ಯ ವೀಕ್ಷಣೆಗೆ ಹಾಜರಿದ್ದರು. ಈ ಫೋಟೋಗಳು ವೈರಲ್ ಆಗುತ್ತಿದ್ದು ಮಿಥಾಲಿ ರಾಜ್, ಸ್ನೇಹ ರಾಣಾ, ಯಾಸ್ತಿಕಾ ಭಾಟಿಯಾ ಮತ್ತು ಪೂಜಾ ವಸ್ತ್ರಾಕರ್ ಸೇರಿದಂತೆ ಕೆಲ ಆಟಗಾರರು ಕಾಣಿಸಿಕೊಂಡಿದ್ದಾರೆ.

ಯಾಸ್ತಿಕಾ ಭಾಟಿಯಾ ಈ ಪಂದ್ಯಕ್ಕಾಗಿ ಕ್ರೀಡಾಂಗಣ ತಲುಪುವ ಮುನ್ನವೇ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿರುವ ಇಂಗ್ಲೆಂಡ್ 50 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 235 ರನ್ ಬಾರಿಸಿದೆ. ಟಾಮಿ ಬ್ಯೂಮೊಂಟ್ ಹಾಗೂ ಆ್ಯಮಿ ಎಲೆನ್ ಅರ್ಧಶಕ ಸಿಡಿಸಿ ಮಿಂಚಿದರು.
Published On - 9:53 am, Mon, 14 March 22