ಕಣ್ಣು ನಮ್ಮ ದೇಹದ ಭಾಗದಲ್ಲಿರುವ ಪ್ರಮುಖ ಅಂಗವಾಗಿದೆ. ಹಾಗೂ ಅದು ಸೂಕ್ಷ್ಮವಾಗಿರುವ ಭಾಗವಾಗಿದೆ. ನಮ್ಮ ಕಣ್ಣಿಗೆ ಒಂದು ಸಣ್ಣ ಧೂಳು -ಕಸ ಬಿದ್ದರೆ ತುಂಬಾ ಉರಿ, ನೋವು ಉಂಟಾಗುತ್ತದೆ. ಇನ್ನು ಕೆಲವರಿಗೆ ತಲೆ ಸುತ್ತುತ್ತದೆ, ಅಸ್ವಸ್ಥತೆ ಉಂಟಾಗುತ್ತದೆ. ಇನ್ನು ಕಸ ಅಥವಾ ಧೂಳು ಕಣ್ಣಿಗೆ ಬಿದ್ದರೆ ಅದನ್ನು ಉಜ್ಜಲು ಪ್ರಾರಂಭಿಸುತ್ತೇವೆ. ಹೀಗೆ ಮಾಡುವುದರಿಂದ ಕಣ್ಣು ಕೆಂಪಾಗುತ್ತದೆ. ನಂತರ ಅದು ದೊಡ್ಡಮಟ್ಟದ ಹಾನಿಯನ್ನು ಉಂಟು ಮಾಡುತ್ತದೆ.
ಇನ್ನು ಕೆಲವರು ಕಣ್ಣಿಗೆ ಧೂಳು ಅಥವಾ ಕಸ ಬಿದ್ದರೆ ಶುದ್ಧ ನೀರಿನಿಂದ ತೊಳೆಯುತ್ತಾರೆ. ಕೆಲವೊಮ್ಮೆ ನೀವು ಏನೇ ಮಾಡಿದರೂ ಧೂಳಿನ ಕಣಗಳು ಹೋಗುವುದಿಲ್ಲ. ಈ ಸಮಸ್ಯೆಯನ್ನು ಪರಿಹರಿಸಲು ಕೆಲವು ಸಲಹೆಗಳು ಇಲ್ಲಿವೆ.
ನಿಮ್ಮ ಕಣ್ಣಿಗೆ ಧೂಳು ಬಿದ್ದರೆ, ಅದನ್ನು ತೆಗೆದುಹಾಕಲು ನೀವು ಕಣ್ಣಿಗೆ ನೀರನ್ನು ಸಿಂಪಡಿಸಬಹುದು. ನೀರನ್ನು ಜೋರಾಗಿ ಸಿಂಪಡಿಸಿದರೆ, ಕಣ್ಣಿನಲ್ಲಿರುವ ಧೂಳಿನ ಕಣ ಹೊರಬರುತ್ತದೆ. ಧೂಳಿನ ಕಣಗಳು ದೊಡ್ಡದಾಗಿದ್ದರೆ, ತೆರೆದ ಕಣ್ಣುಗಳನ್ನು ನಲ್ಲಿ ನೀರಿನ ಬಳಿ ಹಿಡಿದು ಅದನ್ನು ಕಣ್ಣುಗಳ ಮೇಲೆ ನಿಧಾನವಾಗಿ ಹರಿಯಲು ಬಿಡಿ. ಹೀಗೆ ಮಾಡುವುದರಿಂದ ಕಣ್ಣಿನ ಒಳಗಿನ ಕಸವನ್ನು ತೆಗೆದುಹಾಕಬಹುದು.
ಕಣ್ಣಿಗೆ ಧೂಳು ಸೇರಿದರೆ, ಬೇಗನೆ ಕಣ್ಣು ಮಿಟುಕಿಸುವುದರಿಂದ ಸಣ್ಣ ಧೂಳಿನ ಕಣಗಳು ಹೊರಬರುತ್ತವೆ. ದೊಡ್ಡ ಧೂಳಿನ ಕಣಗಳಿದ್ದರೆ, ನೀವು ಕಣ್ಣುರೆಪ್ಪೆಯನ್ನು ತೆರೆದು ತೆಳುವಾದ ಹತ್ತಿ ಬಟ್ಟೆಯನ್ನು ಬಳಸಿ ಧೂಳಿನ ಕಣಗಳನ್ನು ತೆಗೆದುಹಾಕಬಹುದು.
ಒಂದು ಲೋಟ ನೀರಿನಲ್ಲಿ ಸ್ವಲ್ಪ ಸಕ್ಕರೆ ಬೆರೆಸಿ ಈ ಸಕ್ಕರೆ ನೀರಿನಿಂದ ಕಣ್ಣುಗಳನ್ನು ತೊಳೆಯುವುದರಿಂದ ನಿಮ್ಮ ಕಣ್ಣುಗಳಿಂದ ಧೂಳು ಅಥವಾ ಕಸ ಹೋಗುತ್ತದೆ. ನಿಮ್ಮ ಮನೆಯಲ್ಲಿ ಗೋವಿನ ತುಪ್ಪವಿದ್ದರೆ , ಅದನ್ನು ಬಿಸಿ ಮಾಡಿ, ಸೋಸಿ, ಎರಡು ಹನಿ ತುಪ್ಪವನ್ನು ನಿಮ್ಮ ಕಣ್ಣುಗಳಿಗೆ ಹಚ್ಚಿಕೊಳ್ಳಿ. ಹೀಗೆ ಮಾಡುವುದರಿಂದ ಕಣ್ಣಿನಿಂದ ಕೊಳೆ ನಿವಾರಣೆಯಾಗುತ್ತದೆ. ಕಣ್ಣುಗಳಿಗೆ ಎರಡು ಚಮಚ ಕ್ಯಾಸ್ಟರ್ ಆಯಿಲ್ ಹಚ್ಚುವುದರಿಂದಲೂ ಪರಿಣಾಮಕಾರಿಯಾಗಬಹುದು.
Published On - 4:12 pm, Mon, 31 March 25