ನಿಮಗೆ ಗೊತ್ತಾ? ಕನ್ನಡ ಚಿತ್ರರಂಗದ ಈ ಇಬ್ಬರ ಹೆಸರಲ್ಲಿ ಮಾತ್ರ ಬಂದಿದೆ ಅಂಚೆ ಚೀಟಿ
ಭಾರತೀಯ ಅಂಚೆ ಇಲಾಖೆಯು ಆಗಾಗ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡವರ ಹೆಸರಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡುತ್ತದೆ. ಈ ಸಾಲಿನಲ್ಲಿ ಕನ್ನಡ ಚಿತ್ರರಂಗದ ಕೆಲವೇ ಕೆಲವು ಸೆಲೆಬ್ರಿಟಿಗಳು ಇದ್ದಾರೆ. ಅದು ಬೇರೆ ಯಾರೂ ಅಲ್ಲ ರಾಜ್ಕುಮಾರ್ ಹಾಗೂ ವಿಷ್ಣುವರ್ಧನ್. ಆ ಅಂಚೆ ಚೀಟಿಗಳನ್ನು ನಾವು ನಿಮ್ಮ ಮುಂದೆ ಇಡುತ್ತಿದ್ದೇವೆ.
Updated on: Mar 31, 2025 | 12:48 PM

ಸ್ವಾತಂತ್ರ್ಯಾ ನಂತರ ಅಂಚೆ ಇಲಾಖೆ ಸಾವಿರಾರು ಅಂಚೆ ಚೀಟಿಗಳು ಹೊರ ತಂದಿದೆ. ಈ ಪೈಕಿ ಕನ್ನಡ ಚಿತ್ರರಂಗದದಿಂದ ಇಬ್ಬರಿಗೆ ಮಾತ್ರ ಈ ಗೌರವ ಸಿಕ್ಕಿದೆ. ಕನ್ನಡದ ಇಬ್ಬರು ಸ್ಟಾರ್ ಹೀರೋಗಳ ಹೆಸರಲ್ಲಿ ಮಾತ್ರ ಅಂಚೆ ಚೀಟಿ ಬಂದಿದೆ.

ರಾಜ್ಕುಮಾರ್ ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಹೀರೋಗಳಲ್ಲಿ ಒಬ್ಬರು. 2009ರಲ್ಲಿ ರಾಜ್ಕುಮಾರ್ ಹೆಸರಲ್ಲಿ ಅಂಚೆ ಚೀಟಿಯನ್ನು ಹೊರತರಲಾಯಿತು. ಇದು ಭಾರತೀಯ ಅಂಚೆ ವಿಭಾಗವು ರಾಜ್ಕುಮಾರ್ ಅವರಿಗೆ ನೀಡಿದ ಗೌರವ ಇದಾಗಿದೆ.

ರಾಜ್ಕುಮಾರ್ ಅಲ್ಲದೆ, ವಿಷ್ಣುವರ್ಧನ್ ಹೆಸರಲ್ಲೂ ಅಂಚೆ ಚೀಟಿಯನ್ನು ಹೊರತಲಾಗಿದೆ. 2013ರಲ್ಲಿ ವಿಷ್ಣುವರ್ಧನ್ ಹೆಸರಿನಲ್ಲಿ ಅಂಚೆ ಚೀಟಿಯನ್ನು ಹೊರತರಲಾಗಿತ್ತು ಅನ್ನೋದು ವಿಶೇಷ. ಆ ಸಂದರ್ಭದ ಅಂಚೆ ಚೀಟಿ ಇಲ್ಲಿದೆ.

ಇನ್ನು, ಪುನೀತ್ ರಾಜ್ಕುಮಾರ್ 50ನೇ ಜನ್ಮದಿನದ ಪ್ರಯುಕ್ತ ಇತ್ತೀಚೆಗೆ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಪೋಸ್ಟ್ ಕಾರ್ಡ್ಗಳನ್ನು ಬಿಡುಗಡೆ ಮಾಡಲಾಯಿತು. ಬೆಂಗಳೂರು ಕೇಂದ್ರ ಅಂಚೆ ಮಹಾಕಾರ್ಯಾಲಯದಲ್ಲಿ ಪುನೀತ್ ಅವರ ಸ್ಮರಣಾರ್ಥ ವಿಶೇಷ ಪಿಚ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಗಿದೆ.

ಡಾಲಿ ಧನಂಜಯ ಕೈ ಬರಹದಲ್ಲಿ ಆಮಂತ್ರಣ ಪತ್ರ ಬರೆದು ಅದನ್ನು ಮುದ್ರಿಸಿ ಎಲ್ಲ ಕಡೆಗಳಲ್ಲಿ ಹಂಚಿದ್ದರು. ಈ ಆಮಂತ್ರಣ ಪತ್ರಕ್ಕೆ ಖುಷಿಯಾದ ಮೈಸೂರು ಅಂಚೆ ಇಲಾಖೆ, ಶುಭ ವಿವಾಹ ಎಂಬ ಸಾಲಿನೊಂದಿಗೆ ವಿಶೇಷವಾಗಿರುವ 12 ಸ್ಟ್ಯಾಂಪ್ ಗಳನ್ನ ಉಡುಗೊರೆಯಾಗಿ ನೀಡಿತ್ತು. ಇದರಲ್ಲಿ ಡಾಲಿ ಹಾಗೂ ಧನ್ಯತಾ ಫೋಟೋಗಳು ಇದ್ದವು. ಇದು ಕೇವಲ ಉಡುಗೊರೆ ಆಗಿತ್ತು ಅಷ್ಟೇ.



















