
ಮುಕ್ತವಾಗಿ ಸಂವಹನ ನಡೆಸಿ: ಸಂವಹನದ ಕೊರತೆಯಿಂದಲೂ ಸಂಬಂಧದಲ್ಲಿ ಅಂತರ ಮೂಡಲು ಕಾರಣವಾಗುತ್ತದೆ. ಆದ್ದರಿಂದ ಗಂಡ ಮನೆಗೆ ಬಂದಾಗ ಕೋಪಿಸಿಕೊಳ್ಳದೆ ಪ್ರೀತಿಯಿಂದ ಮಾತನಾಡಿಸಿ, ಹೀಗೆ ಮುಕ್ತವಾಗಿ ಸಂವಹನ ನಡೆಸುತ್ತಾ, ಪ್ರೀತಿ ತೋರಿಸಿದರೆ ಗಂಡನ ಮನಸ್ಸು ಯಾವತ್ತೂ ಬೇರೆ ಹೆಣ್ಣಿನ ಕಡೆ ವಾಲುವುದಿಲ್ಲ.

ಸಂಬಂಧದಲ್ಲಿ ಪ್ರಣಯವನ್ನು ಕಾಪಾಡಿಕೊಳ್ಳಿ: ಪ್ರತಿ ಬಾರಿ ಸಣ್ಣಪುಟ್ಟ ವಿಷಯಗಳಿಗೂ ಗಂಡನ ಮೇಲೆ ಕೋಪ ಮಾಡಿಕೊಳ್ಳುವುದು, ರೇಗಾಡುವ ಬದಲು ರೊಮ್ಯಾಂಟಿಕ್ ಆಗಿರಿ. ಹೆಂಡತಿ ರೊಮ್ಯಾಂಟಿಕ್ ಆಗಿಲ್ಲ, ಪ್ರತಿನಿತ್ಯ ಜಗಳವಾಡ್ತಾಳೆ ಎಂಬ ಕಾರಣಕ್ಕೆ ಕೆಲ ಪುರುಷರು ಬೇರೆ ಮಹಿಳೆಯರತ್ತ ಆಕರ್ಷಿತರಾಗುತ್ತಾರೆ. ಹಾಗಾಗಿ ನಿಮ್ಮ ಸಂಬಂಧವನ್ನು ರೊಮ್ಯಾಂಟಿಕ್ ಆಗಿರಿಸಲು ಪ್ರಯತ್ನಿಸಿ. ಪರಸ್ಪರ ಗುಣಮಟ್ಟದ ಸಮಯವನ್ನು ಕಳೆಯಿರಿ, ಸಣ್ಣಪುಟ್ಟ ಸಂತೋಷಗಳನ್ನು ಒಟ್ಟಿಗೆ ಆನಂದಿಸಿ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಿ.

ನಂಬಿಕೆ ಇರಲಿ: ಪ್ರತಿಯೊಂದು ಸಂಬಂಧದಲ್ಲೂ ನಂಬಿಕೆ ಎನ್ನುವಂತಹದ್ದು ಅತ್ಯಂತ ಮುಖ್ಯ. ನೀವು ಯಾವಾಗಲೂ ಅನುಮಾನಿಸುತ್ತಿದ್ದರೆ, ಅದು ನಿಮ್ಮ ಗಂಡನನ್ನು ಅಸಮಾಧಾನಗೊಳಿಸಬಹುದು. ಹಾಗಾಗಿ ನಿಮ್ಮ ಸಂಗಾತಿಯ ಮೇಲೆ ನಂಬಿಕೆ ಇಡಿ, ಅನುಮಾನ ಪಟ್ಟು ಜಗಳವಾಡಲು ಹೋಗಬೇಡಿ.

ಸಮಯ ಕೊಡಿ: ಮನೆ ಕೆಲಸ, ಹೊರಗಿನ ಕೆಲಸ ಎಷ್ಟೇ ಇದ್ದರೂ ಕೂಡಾ ಗಂಡನಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡಿ. ಗಂಡನ ಜೊತೆ ಮೂವಿಗೆ, ಲಂಚ್ ಡೇಟ್, ಡಿನ್ನರ್ ಡೇಟ್‌ಗೆ ಹೋಗುವ ಮೂಲಕ ಪರಸ್ಪರ ಸಮಯವನ್ನು ಕಳೆಯಿರಿ. ಹೀಗೆ ಮಾಡುವುದರಿಂದ ನಿಮ್ಮ ಸಂಬಂಧವೂ ಆರೋಗ್ಯಕರವಾಗಿರುತ್ತದೆ ಮತ್ತು ಗಂಡ ಇತರೆ ಮಹಿಳೆಯರತ್ತ ಆಕರ್ಷಿತನಾಗುವುದಿಲ್ಲ.

ಹೊಂದಾಣಿಕೆ: ಇಬ್ಬರ ಮಧ್ಯೆ ಹೊಂದಾಣಿಕೆ ಎನ್ನುವಂತಹದ್ದು ಇರಲಿ. ಸಣ್ಣಪುಟ್ಟ ತಪ್ಪು ನಡೆದರೆ, ಅದಕ್ಕಾಗಿ ದೊಡ್ಡ ಜಗಳವನ್ನು ಮಾಡಬೇಡಿ. ಪ್ರೀತಿಯಿಂದ ಮಾತನಾಡಿಸಿ, ಆ ತಪ್ಪುಗಳು ಮತ್ತೆ ನಡೆಯದಂತೆ ತಿಳಿ ಹೇಳಿ. ಹೀಗೆ ಒಬ್ಬರನ್ನೊಬ್ಬರು ಅರ್ಥ ಮಅಡಿಕೊಂಡು ಜೀವನ ಸಾಗಿಸಿ. ಇದು ಖಂಡಿತವಾಗಿಯೂ ನಿಮ್ಮ ಸಂಬಂಧವನ್ನು ಬಲ ಪಡಿಸುತ್ತದೆ.

ಅವರಿಷ್ಟದಂತೆ ಸ್ವಲ್ಪ ಬದಲಾಗಿ: ನಿಮ್ಮ ಇಷ್ಟದ ಜೊತೆಗೆ ನಿಮ್ಮ ಗಂಡನ ಇಷ್ಟದ ಪ್ರಕಾರವೂ ಜೀವನವನ್ನು ನಡೆಸಿ, ಹೌದು ಅವರಿಷ್ಟದಂತೆ ಬಟ್ಟೆಯನ್ನು ತೊಡುವುದು, ಅವರ ಇಷ್ಟದಂತೆ ಬದುಕುವುದು ಹೀಗೆಲ್ಲಾ ಮಾಡಿದರೆ ಖಂಡಿತವಾಗಿಯೂ ಗಂಡನಾದವನು ಬೇರೆ ಹೆಣ್ಣಿನ ಕಡೆಗೆ ಆಕರ್ಷಿತನಾಗುವುದಿಲ್ಲ.

ಪ್ರೀತಿ: ಇವೆಲ್ಲದಕ್ಕಿಂತ ಮುಖ್ಯವಾಗಿ ಸಂಬಂಧದಲ್ಲಿ ಪ್ರೀತಿ ಎನ್ನುವಂತಹದ್ದು ತುಂಬಾನೇ ಮುಖ್ಯ. ನಿಮ್ಮ ಗಂಡನಿಗೆ ಪ್ರೀತಿ ತೋರಿಸುವುದರಲ್ಲಿ ಎಂದಿಗೂ ಕಮ್ಮಿ ಮಾಡಬೇಡಿ. ನಿಮ್ಮ ಅತಿಯಾದ ಪ್ರೀತಿ, ಕಾಳಜಿ ಗಂಡ ಇತರೆ ಮಹಿಳೆಯರತ್ತ ಆಕರ್ಷಿತನಾಗುವುದನ್ನು ತಡೆಯುತ್ತದೆ.
Published On - 5:28 pm, Mon, 2 June 25