Discontinued Foods in 2023: ಈ ದೇಶದಲ್ಲಿಇನ್ನೂ ಮುಂದೆ ಈ ಫುಡ್​ಗಳು ಲಭ್ಯವಿಲ್ಲ

Edited By:

Updated on: Dec 29, 2022 | 7:14 PM

ಅಮೇರಿಕಾದಲ್ಲಿ ಇನ್ನೂ ಮುಂದೆ 2023ರ ನಂತರ ಕೆಲವು ಜನಪ್ರಿಯ ಫುಡ್​ಗಳು ಲಭ್ಯವಿರುವುದಿಲ್ಲ. ಆ ಫುಡ್​ ಯಾವುವು? ಇಲ್ಲಿದೆ ಮಾಹಿತಿ

1 / 5
ಮೆಕ್ಡೊನಾಲ್ಡ್ಸ್ ಮ್ಯಾಕ್ರಿಬ್(McDonald’s McRib): ಇನ್ನೂ ಮುಂದೆ ಅಂದರೆ 2023 ನಂತರ ಅಮೇರಿಕಾದ ಯಾವುದೇ ಪುಡ್ ಶಾಪ್​ಗಳಲ್ಲಿ ಮೆಕ್ಡೊನಾಲ್ಡ್ಸ್ ಮ್ಯಾಕ್ರಿಬ್ ಲಭ್ಯವಿರುವುದಿಲ್ಲ. ಯಾಕೆಂದರೆ ಈ ಸ್ಯಾಂಡ್‌ವಿಚ್​ಗಳಲ್ಲಿ ಹಂದಿಯ ಭುಜದ ಮಾಂಸದಿಂದ ಕೂಡಿದೆ ಎಂದು ಮೆಕ್‌ಡೊನಾಲ್ಡ್ಸ್ ಹೇಳಿಕೊಂಡಿತ್ತು. ಆದರೆ ಚಿಕಾಗೋ ನಿಯತಕಾಲಿಕೆಯು ವಾಸ್ತವವಾಗಿ ಹೃದಯ, ಹೊಟ್ಟೆಯ ಮಾಂಸವನ್ನು ಒಳಗೊಂಡಿದೆ ಎಂದು ಬಹಿರಂಗಪಡಿಸಿತು.

2 / 5

ಚೋಕೋ ಟ್ಯಾಕೋ: ನಾಲ್ಕು ದಶಕಗಳಿಂದ ಕ್ಲೋಂಡಿಕ್‌ನ ಮೆನುಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡು, ಈ ವರ್ಷ ಜುಲೈನಲ್ಲಿ ಚೋಕೊ ಟ್ಯಾಕೋವನ್ನು ನಿಲ್ಲಿಸಲಾಯಿತು. ಯೂನಿಲಿವರ್ ಒಡೆತನದ ಕ್ಲೋಂಡಿಕ್‌ನ ಪ್ರತಿನಿಧಿಯ ಪ್ರಕಾರ, ಕಳೆದ ಎರಡು ವರ್ಷಗಳಲ್ಲಿ ವಿವಿಧ ಕ್ಲೋಂಡಿಕ್ ಉತ್ಪನ್ನಗಳಿಗೆ ಅಭೂತಪೂರ್ವ ಬೇಡಿಕೆಯ ಕಾರಣ ಜುಲೈನಲ್ಲಿ ಚೋಕೊ ಟ್ಯಾಕೋವನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು ಎಂದು ತಿಳಿದು ಬಂದಿದೆ.

3 / 5

ವೆಂಡಿಸ್ ವೆನಿಲ್ಲಾ ಫ್ರಾಸ್ಟಿ (Wendy’s Vanilla Frosty): 2006ರಲ್ಲಿ ಪ್ರಾರಂಭವಾದ ವೆಂಡಿಸ್ ವೆನಿಲ್ಲಾ ಫ್ರಾಸ್ಟಿ ಇನ್ನೂ ಮುಂದೆ ಅಮೇರಿಕಾ ಯಾವುದೇ ಪುಡ್ ಮೆನುವಿನಲ್ಲಿ ಇರುವುದಿಲ್ಲ. ಗ್ರಾಹಕರ ಬೇಡಿಕೆಯ ಕಾರಣ ವೆನಿಲ್ಲಾ ಫ್ರಾಸ್ಟಿಯನ್ನು ತಾತ್ಕಾಲಿಕವಾಗಿ ಸ್ಟ್ರಾಬೆರಿ ಫ್ರಾಸ್ಟಿಗೆ ಬದಲಾಯಿಸಲಾಯಿತು

4 / 5

ಬರ್ಗರ್ ಕಿಂಗ್ಸ್ ಚಿಕನ್ ಕಿಂಗ್(Burger King’s Ch’King): ಚಿಕನ್ ಕಿಂಗ್ ಎಂದು ಕರೆಯಲ್ಪಡುವ ಬರ್ಗರ್ ಕಿಂಗ್ಸ್ ಫ್ರೈಡ್ ಚಿಕನ್ ಸ್ಯಾಂಡ್ವಿಚ್ ಕೇವಲ ಒಂದು ವರ್ಷ ಉಳಿಯಿತು. ಮೇ 2021 ರಲ್ಲಿ ಪ್ರಾರಂಭಿಸಲಾಯಿತು. ನಂತರ ಸಾಕಷ್ಟು ವಿವಾದಗಳು ಹುಟ್ಟಿಕೊಂಡಿರುವುದರಿಂದ ಕೇವಲ 15 ತಿಂಗಳ ನಂತರ ರಾಷ್ಟ್ರವ್ಯಾಪಿ ಆಹಾರಗಳಿಂದ ತೆಗೆದುಹಾಕಲಾಗಿದೆ.

5 / 5

ಚಿಲ್ಲಿಸ್ಸ್ ಒರಿಜಿನಲ್ ಚಿಕನ್ ಟೆಂಡರ್(Chili’s Original Chicken Tenders): ಡಿಸೆಂಬರ್ 8 ರಂದು, ಡಲ್ಲಾಸ್ ಮಾರ್ನಿಂಗ್ ನ್ಯೂಸ್​ನ ಬರಹಗಾರ ಸಾರಾ ಬ್ಲಾಸ್ಕೊವಿಚ್ ಅವರು ಚಿಲ್ಲಿಸ್ಸ್ ಒರಿಜಿನಲ್ ಚಿಕನ್ ಟೆಂಡರ್ ಸಾಕಷ್ಟು ವರ್ಷಗಳಿಂದ ಪ್ರತಿ ಫುಡ್ ಮೆನುವಿನಲ್ಲಿ ನೀಡಲಾಗುತ್ತಿತ್ತು. ಆದರೆ ಇದೀಗಾ ಅಧಿಕೃತವಾಗಿ ಮೆನುವಿನಿಂದ ಹೊರಗಿಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

Published On - 7:13 pm, Thu, 29 December 22

Loading...
Unable to load recommendations.
Follow Us