
ಕಳೆದ 9 ವರ್ಷದಿಂದ ಗಣಮತಿಯನ್ನ ತಯಾರಿಸುತ್ತಿರುವ ಈ ಯುವಕ ಆಕಾಶ್, ಬೀದರ್ ತಾಲೂಕಿನ ಚಾಂಬೋಳ ಗ್ರಾಮದವನು. ನೂರಾರು ಗಣೇಶನನ್ನ ತಯಾರಿಸಿ ಮಾರಾಟ ಮಾಡಿ ವರ್ಷಕ್ಕೆ ಹತ್ತಾರು ಲಕ್ಷ ರೂಪಾಯಿ ಘಳಿಸುತ್ತಿದ್ದಾನೆ. ಈತ ತಯಾರಿಸುವ ಗಣೇಶನ ಮೂರ್ತಿಗೆ ಅಂತರ್ ರಾಜ್ಯದಲ್ಲಿ ಬಾರೀ ಬೇಡಿಕೆ ಇದ್ದು, ಜನರು ಬುಕ್ ಮಾಡಿ ಹೋಗುತ್ತಿದ್ದಾರೆ.

6 ಇಂಚಿನ ಗಣಪತಿಯಿಂದ ಹಿಡಿದು 15 ಫೂಟ್ ವರೆಗಿನ ವಿವಿಧ ಬಗೆಯ ಗಣೇಶನ ಮೂರ್ತಿಗಳು ಇಲ್ಲಿ ಸಿಗುತ್ತವೆ. ಒಂದು ಗಣೇಶನಿಗೆ ಐದು ನೂರು ರೂಪಾಯಿಂದ 50 ಸಾವಿರ ರೂಪಾಯಿವರೆಗೆ ಇವರು ಮಾರಾಟ ಮಾಡುತ್ತಾರೆ. ಎತ್ತರ, ಡಿಸೈನ್ ಮೇಲೆ ಹಣ ನಿಗದಿ ಮಾಡುತ್ತಾರೆ.

ಇನ್ನು ಈ ಯುವಕ ತಯಾರಿಸುವ ಗಣೇಶನ ಮೂರ್ತಿಗಳ ಹೈದರಾಬಾದ್, ಆಂಧ್ರಪ್ರದೇಶ್, ಮಹಾರಾಷ್ಟ್ರದ ಹಲವಾರು ಜಿಲ್ಲೆಗೆ ಮಾರಾಟವಾಗುತ್ತವೆ. ಇವರು ತಯಾರಿಸುವ ಗಣೇಶ ಮೂರ್ತಿಗಳು ಕಡಿಮೆ ಬೆಲೆಗೆ ಲಭ್ಯವಿದ್ದು, ಗ್ರಾಹಕರ ಬೇಡಿಕೆಗಣುಗುಣವಾಗಿ ಇವರು ಗಣೇಶನನ್ನ ತಯ್ಯಾರಿಸಿ ಮಾರಾಟ ಮಾಡುತ್ತಾರೆ.

ಇವರು ತಯಾರಿಸುವ ವೈವಿದ್ಯಮಯ ಗಣಪಪತಿ ಮೂರ್ತಿ ಜನಾಕರ್ಷಣೆಗೆ ಒಳಗಾಗುತ್ತಿವೆ. ಅಷ್ಟೇ ಅಲ್ಲದೇ ಸಾರ್ವಜನಿಕ ಗಣಪತಿಗಳು ವೈಶಿಷ್ಟ್ಯಪೂರ್ಣವಾಗಿದ್ದು, ಗ್ರಾಹಕರ ಅಭಿಲಾಷೆಯನ್ನು ಅರಿತು ಮೂರ್ತಿಗಳಿಗೆ ನೂತನ ಸ್ಪರ್ಷ ನೀಡುವ ಹೊಸ ಪ್ರಯೋಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಇವರ ಗಣೇಶನ ಮೂರ್ತಿಗಳು ಎಲ್ಲರ ಮನಸ್ಸಿನಲ್ಲಿ ಉಳಿದುಕೊಳ್ಳುವುದರ ಜೊತೆಗೆ ಗ್ರಾಹಕರು ಮುಗಿಬಿದ್ದು ಇಲ್ಲಿಗೆ ಬಂದು ಗಣೇಶನನ್ನ ಖರೀದಿಸಿಕೊಂಡು ಹೋಗುತ್ತಿದ್ದಾರೆ.

ಗಣೇಶ ಚತುರ್ಥಿ ಹಬ್ಬಕ್ಕೆ ಒಂದೆರಡು ತಿಂಗಳು ಇರುವಾಗಲೇ ಆಕಾಶ್, ಗಣೇಶನನ್ನ ತಯಾರಿಸುವುದರಲ್ಲಿ ತಲ್ಲಿಣರಾಗುತ್ತಾರೆ. ಒಂದು ಕ್ಷಣವೂ ಪುರಸೊತ್ತು ಇರುವುದಿಲ್ಲ. ಮೇ ತಿಂಗಳಿನಿಂದಲೇ ಗಣಪತಿ ತಯಾರಿಸಲು ಸಿದ್ಧತೆ ನಡೆಸಿಕೊಳ್ಳುವ ಈ ಯುವಕ, ಇದೀಗ ಬಿಡುವಿಲ್ಲದ ಕೆಲಸ. ಈಗಾಗಲೇ ಸಿದ್ಧಪಡಿಸಿರುವ ವಿವಿಧ ವಿನ್ಯಾಸದ ಗಣಪನಿಗೆ ಆಕರ್ಷಕ ಬಣ್ಣ ನೀಡುವುದರಲ್ಲಿ ಮಗ್ನರಾಗಿದ್ದಾರೆ.

ಗಣೇಶ ಹಬ್ಬ ಸಮೀಪ ಬಂದಿರುವುದರಿಂದ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ನಾವು ಈ ವರ್ಷ 12 ಅಡಿ ಎತ್ತರದವರೆಗಿನ ಸಾರ್ವಜನಿಕ ಮೂರ್ತಿಯನ್ನು ಸಿದ್ಧಪಡಿಸಿದ್ದೇವೆ. 35 ಸಾರ್ವಜನಿಕ ಮೂರ್ತಿಗಳು ಹಾಗೂ ಮನೆಯಲ್ಲಿ ಪ್ರತಿಷ್ಠಾಪಿಸುವ ಸುಮಾರು 4 ಸಾವಿರ ಮೂರ್ತಿಗಳನ್ನು ನಿರ್ಮಿಸಿದ್ದೇವೆ. 30 ಬಗೆಯ ವಿನ್ಯಾಸದ ಮೂರ್ತಿಗಳು ನಮ್ಮಲ್ಲಿ ಲಭ್ಯವಿದೆ ಎಂದು ಆಕಾಶ್ ಹೇಳಿದರು.
Published On - 4:53 pm, Sun, 11 August 24