ಹೊಸ ಸಂಸತ್ ಭವನದ ಪುರುಷ ಹಾಗೂ ಮಹಿಳಾ ಸಿಬ್ಬಂದಿಗೆ ಹೊಸ ಸಮವಸ್ತ್ರ ವಿನ್ಯಾಸಗೊಳಿಸಲಾಗಿದ್ದು,ಖಾಕಿ ಬಣ್ಣಕ್ಕೆ ಹಾಗೂ ಕಮಲದ ಹೂವಿಗೆ ಪ್ರಾಮುಖ್ಯತೆ ನೀಡಲಾಗಿದೆ. ಪುರುಷ ಚೇಂಬರ್ ಅಟೆಂಡೆಂಟ್‌ಗಳು ಕಂದು ಬಣ್ಣದ ಸಮವಸ್ತ್ರ ಧರಿಸಲಿದ್ದಾರೆ. ತೋಳುಗಳ ಮೇಲೆ ಬಿಳಿ ಪಟ್ಟಿ ಇರಲಿದೆ.
ಮಹಿಳಾ ಚೇಂಬರ್ ಅಟೆಂಡೆಂಟ್‌ಗಳು ಬಿಳಿ ಬಣ್ಣದ ಸೀರೆಯನ್ನು ಹೊಂದಿದ್ದು, ಜೊತೆಗೆ ಗುಲಾಬಿ ಬಣ್ಣದ ಅಂಚು ಜೊತೆಗೆ ತಿಳಿ ಗುಲಾಬಿ ಬಣ್ಣದ ಕೋಟ್ ಅನ್ನು ಹೊಂದಿರುತ್ತಾರೆ.
ಮಹಿಳಾ ಅಧಿಕಾರಿಗಳು ಕಪ್ಪು ಮತ್ತು ಬಿಳಿ ಅಂಚುಗಳೊಂದಿಗೆ ಗುಲಾಬಿ ಬಣ್ಣದ ಗಾಢ ಛಾಯೆಯ ಸೀರೆಯನ್ನು ಧರಿಸುತ್ತಾರೆ. ಬ್ಲೌಸ್ಸೀರೆಯದೇ ಅದೇ ಬಾರ್ಡರ್ನೊಂದಿಗೆ ಕಾಲರ್ ಮತ್ತು ಅರ್ಧ ತೋಳುಗಳನ್ನು ಹೊಂದಿರುತ್ತದೆ.
ಮಹಿಳಾ ಅಧಿಕಾರಿಗಳು ತಮ್ಮ ಸಮವಸ್ತ್ರಕ್ಕೆ ಹೊಂದುವ ಮತ್ತೊಂದು ರೀತಿಯ ಗುಲಾಬಿ ಬಣ್ಣದ ಕೋಟ್ ಧರಿಸಬಹುದು.
ಪುರುಷ ಚೇಂಬರ್ ಅಟೆಂಡೆಂಟ್‌ಗಳು ಬಿಳಿ ಶರ್ಟ್ ಜೊತೆಗೆ ವೇಸ್ಟ್ ಕೋಟ್, ಕಪ್ಪು ಪ್ಯಾಂಟ್ ಮತ್ತು ಕಪ್ಪು ಬೂಟುಗಳನ್ನು ಧರಿಸುತ್ತಾರೆ.
ಒಳ ಮಹಿಳಾ ಭದ್ರತಾ ಅಧಿಕಾರಿಗಳಿಗೆ ಸಮವಸ್ತ್ರವು ಬಿಳಿ ಬಣ್ಣದ ಜಾಕೆಟ್ ಮತ್ತು ಕಂದು ಬಣ್ಣದ ಚಿತ್ರವಿರುವ ಪ್ಯಾಂಟ್ ಧರಿಸಿರುತ್ತಾರೆ.
ಪುರುಷ ಭದ್ರತಾ ಸಿಬ್ಬಂದಿ ಕೂಡ ಜಾಕೆಟ್ ಮತ್ತು ಟ್ರೌಸರ್ ಹಾಗೂ ಕಪ್ಪು ಶೂಗಳನ್ನು ಧರಿಸಲಿದ್ದಾರೆ, ತಮ್ಮ ಮಹಿಳಾ ಕೌಂಟರ್ಪಾರ್ಟ್ನರ್ಗಳಂತೆಯೇ ಅದೇ ಮಾದರಿಯ ಸಮವಸ್ತ್ರವನ್ನು ಹೊಂದಿರುತ್ತಾರೆ.
ಮಾರ್ಷಲ್‌ಗಳು ಬಿಳಿ ಕುರ್ತಾ ಪೈಜಾಮ, ಗುಲಾಬಿ ವೇಸ್ಟ್‌ಕೋಟ್ ಮತ್ತು ಕಂದು ಬಣ್ಣದ ಬೂಟುಗಳೊಂದಿಗೆ ಬಿಳಿ ಪೇಟದೊಂದಿಗೆ ಹೆಚ್ಚು ಸಾಂಪ್ರದಾಯಿಕ ನೋಟವನ್ನು ಪಡೆಯುತ್ತಾರೆ. ನವೆಂಬರ್ 2019 ರ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭಾ ಮಾರ್ಷಲ್ ಅವರ ಉಡುಗೆಯನ್ನು ಬದಲಾಯಿಸುವ ಬಗ್ಗೆ ವಿವಾದ ಎದ್ದಿತ್ತು. ರಾಜ್ಯಸಭೆಯಲ್ಲಿ ಸದನದೊಳಗೆ ಹಾಕಲಾಗಿದ್ದ ಮಾರ್ಷಲ್‌ನ ಉಡುಪನ್ನು ಸೇನಾ ಸಮವಸ್ತ್ರವನ್ನು ಹೋಲುವಂತೆ ಬದಲಾಯಿಸಲಾಗಿತ್ತು. ನಿವೃತ್ತ ಸೇನಾ ಅಧಿಕಾರಿಗಳು ಮತ್ತು ವಿರೋಧ ಪಕ್ಷಗಳು ಇದನ್ನು ಬದಲಾಯಿಸಬೇಕೆಂದು ಒತ್ತಾಯಿಸಿದ್ದವು. ಹೆಚ್ಚುತ್ತಿರುವ ವಿವಾದದ ನಂತರ, ಸೆಕ್ರೆಟರಿಯೇಟ್ ಮಾರ್ಷಲ್ ಉಡುಗೆಯನ್ನು ಬದಲಾಯಿಸಿತ್ತು. ಬದಲಾದ ಮಾರ್ಷಲ್ ಗಳ ಡ್ರೆಸ್ ಸೇನೆಯ ಸಮವಸ್ತ್ರದಂತೆ ಕಾಣುತ್ತಿತ್ತು.
ಸಂಸತ್ ಹೊಸ ಭಾಗದಲ್ಲಿರುವ ಪುರುಷ ಭದ್ರತಾ ಸಿಬ್ಬಂದಿಯ ಸಮವಸ್ತ್ರವು ಬೂದು ಶೇಡ್ ಇರುವ ಶರ್ಟ್ ಮತ್ತು ಟ್ರೌಸರ್, ಶೂಗಳನ್ನು ಒಳಗೊಂಡಿರುತ್ತದೆ.
ಸಂಸತ್ ಹೊರ ಭಾಗದಲ್ಲಿ ಕಾರ್ಯ ನಿರ್ವಹಿಸುವ ಭದ್ರತಾ ಸಿಬ್ಬಂದಿ ಬೂದು ಬಣ್ಣದ ಸಮವಸ್ತ್ರ ಧರಿಸಲಿದ್ದಾರೆ.
ಚಾಲಕರು ಬೇಸಿಗೆಯಲ್ಲಿ ಬೂದು ಬಣ್ಣದ ಸಫಾರಿ ಸೂಟ್ ಅನ್ನು ಕಪ್ಪು ಬಣ್ಣದ ಶೂಗಳ ಜತೆಗೆ ಧರಿಸಲಿದ್ದಾರೆ.