- Kannada News Photo gallery Cricket photos Asia Cup 2023 Kuldeep Yadav become fastest Indian spinner to achieve 150 ODI wickets
Asia Cup 2023: ಅಗರ್ಕರ್, ಜಹೀರ್, ಕುಂಬ್ಳೆ, ಇರ್ಫಾನ್ರನ್ನು ಹಿಂದಿಕ್ಕಿದ ಕುಲ್ದೀಪ್..!
Kuldeep Yadav: ಈ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ ಕುಲ್ದೀಪ್ ಯಾದವ್ ಏಕದಿನದಲ್ಲಿ 150ವಿಕೆಟ್ ಪಡೆದ ಸಾಧನೆ ಕೂಡ ಮಾಡಿದರು. ಈ ಮೂಲಕ ಭಾರತದ ಪರ ಏಕದಿನದಲ್ಲಿ 150 ವಿಕೆಟ್ ಪಡೆದ ಎರಡನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಪಾತ್ರರಾಗಿದ್ದಾರೆ.
Updated on: Sep 13, 2023 | 9:25 AM

ಟೀಂ ಇಂಡಿಯಾ ಏಷ್ಯಾ ಕಪ್ 2023ರ ಫೈನಲ್ ತಲುಪಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಸತತ ಎರಡು ದಿನಗಳಲ್ಲಿ ಪಾಕಿಸ್ತಾನ ಮತ್ತು ನಂತರ ಶ್ರೀಲಂಕಾವನ್ನು ಸೋಲಿಸುವ ಮೂಲಕ ಸೆಪ್ಟೆಂಬರ್ 17 ರಂದು ನಡೆಯಲಿರುವ ಪ್ರಶಸ್ತಿ ಪಂದ್ಯದ ಟಿಕೆಟ್ ಅನ್ನು ಖಾತರಿಪಡಿಸಿಕೊಂಡಿದೆ.

ಇನ್ನು ಈ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ ಕುಲ್ದೀಪ್ ಯಾದವ್ ಏಕದಿನದಲ್ಲಿ 150ವಿಕೆಟ್ ಪಡೆದ ಸಾಧನೆ ಕೂಡ ಮಾಡಿದರು.

ಈ ಮೂಲಕ ಭಾರತದ ಪರ ಏಕದಿನದಲ್ಲಿ 150 ವಿಕೆಟ್ ಪಡೆದ ಎರಡನೇ ವೇಗದ ಬೌಲರ್ ಎಂಬ ಹೆಗ್ಗಳಿಕೆಗೆ ಕುಲ್ದೀಪ್ ಪಾತ್ರರಾಗಿದ್ದಾರೆ.

ಈ ಅನುಕ್ರಮದಲ್ಲಿ ಕುಲ್ದೀಪ್ ಅವರು ಅಜಿತ್ ಅಗರ್ಕರ್, ಜಹೀರ್ ಖಾನ್, ಅನಿಲ್ ಕುಂಬ್ಳೆ ಮತ್ತು ಇರ್ಫಾನ್ ಪಠಾಣ್ ಅವರಂತಹ ದಿಗ್ಗಜರನ್ನೂ ಹಿಂದಿಕ್ಕಿದ್ದಾರೆ.

ಕುಲ್ದೀಪ್ 88 ಏಕದಿನ ಪಂದ್ಯಗಳಲ್ಲಿ 150 ವಿಕೆಟ್ ಪಡೆದಿದ್ದು, ಅಗರ್ಕರ್ 97, ಜಹೀರ್ 103, ಕುಂಬ್ಳೆ 106, ಇರ್ಫಾನ್ 106 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.

ಭಾರತ ಪರ 150 ಏಕದಿನ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ ಕುಲ್ದೀಪ್ ಎರಡನೇ ಸ್ಥಾನದಲ್ಲಿದ್ದರೆ, ಮೊಹಮ್ಮದ್ ಶಮಿ ಅಗ್ರಸ್ಥಾನದಲ್ಲಿದ್ದಾರೆ. ಶಮಿ 80 ಪಂದ್ಯಗಳಲ್ಲಿ 150 ವಿಕೆಟ್ ಕಬಳಿಸುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.

ಈ ಪಂದ್ಯದಲ್ಲಿ ಕುಲ್ದೀಪ್ ಹೊರತುಪಡಿಸಿ, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ತಲಾ 2 ವಿಕೆಟ್ ಪಡೆದರೆ.. ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದರು.




