
ಲಕ್ಷ್ಮೀದೇವಿಯನ್ನು ಹಿಂದೂ ಧರ್ಮದಲ್ಲಿ ಶ್ರೇಯಸ್ಸು, ಸಂಪತ್ತು ಮತ್ತು ಸಮೃದ್ಧಿಯ ಪ್ರಧಾನ ದೇವತೆ ಎಂದು ಕರೆಯಲಾಗುತ್ತದೆ. ಲಕ್ಷ್ಮಿ ದೇವತೆಯಾಗಿರುವ ಮನೆಯಲ್ಲಿ ಹಣದ ಕೊರತೆ ಎಂದಿಗೂ ಇರುವುದಿಲ್ಲ. ಆನೆಗಳೊಂದಿಗೆ ಇರುವ ಲಕ್ಷ್ಮಿ ದೇವಿಯನ್ನು ಗಜಲಕ್ಷ್ಮಿ ಎಂದು ಕರೆಯುತ್ತೇವೆ. ಅಷ್ಟ ಲಕ್ಷ್ಮಿಯರ ಪೈಕಿ ಗಜ ಲಕ್ಷ್ಮಿ ಸಹ ಒಬ್ಬ ಸಂಪತ್ತಿನ ದೇವತೆ . ಗಜ ಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸಂಪತ್ತು ಮತ್ತು ಸಮೃದ್ಧಿ ಹೆಚ್ಚಾಗುತ್ತದೆ. ಅವಳನ್ನು ಅದೃಷ್ಟ ಮತ್ತು ಸಮೃದ್ಧಿಯ ದೇವತೆ ಎಂದು ಪರಿಗಣಿಸಲಾಗುತ್ತದೆ.

ಕಮಲದ ಮೇಲೆ ಪದ್ಮಾಸನದ ಭಂಗಿಯಲ್ಲಿ ಗಜಲಕ್ಷ್ಮಿ ಕುಳಿತುಕೊಂಡಿರುತ್ತಾಳೆ. ನಾಲ್ಕು ಕೈಗಳ ಪೈಕಿ ಹಿಂಭಾಗದ ಎರಡು ಹಸ್ತಗಳಲ್ಲಿ ಕಮಲದ ಹೂಗಳನ್ನು ಹಿಡಿದಿರುತ್ತಾಳೆ.


ಮನೆಯಲ್ಲಿ ಗಜಲಕ್ಷ್ಮಿ ಚಿತ್ರವನ್ನು ಇಟ್ಟು ಪೂಜಿಸುವುದು ತುಂಬಾ ಶ್ರೇಯಸ್ಕರ. ವಿಶೇಷವಾಗಿ ಲಕ್ಷ್ಮಿ ದೇವಿಯ ಜೊತೆಗೆ ಕಮಲದ ಹೂವಿನೊಂದಿಗೆ ನಿಂತಿರುವ ಆನೆ ಚಿತ್ರವು ಮಂಗಳಕರ ಚಿತ್ರವೆಂದು ಪರಿಗಣಿಸಲಾಗಿದೆ.

ಗಜಲಕ್ಷ್ಮಿಯನ್ನು ಪೂಜಿಸುವುದರಿಂದ ವ್ಯಕ್ತಿಯು ಸಾಲದಿಂದ ಮುಕ್ತಿ ಹೊಂದುತ್ತಾನೆ ಮತ್ತು ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಗಜಲಕ್ಷ್ಮಿಯ ಈ ರೂಪವನ್ನು ಪೂಜಿಸುವುದರಿಂದ ತುಂಬಾ ಫಲ ಸಿಗುತ್ತದೆ. ಆದರೆ ಮನೆಯಲ್ಲಿ ಗಜಲಕ್ಷ್ಮಿಯ ಚಿತ್ರವನ್ನು ಸರಿಯಾದ ಸ್ಥಳದಲ್ಲಿ ಇಡುವುದು ಮುಖ್ಯ.

ಈ ಗಜಲಕ್ಷ್ಮಿಯನ್ನು ಆರೋಗ್ಯ, ಯೋಗಕ್ಷೇಮ, ಸಂತೋಷ ಮತ್ತು ಯಶಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದುದರಿಂದ ಗಜಲಕ್ಷ್ಮಿಯನ್ನು ಪೂಜಿಸುವುದರಿಂದ ಮನೆಯಲ್ಲಿ ಸುಖ, ಸಂತೋಷ, ಸೌಭಾಗ್ಯವಿರುತ್ತದೆ.

ಮನೆಯ ಈಶಾನ್ಯ ಮೂಲೆಯಲ್ಲಿ (ಈಶಾನ್ಯ ದಿಕ್ಕಿನಲ್ಲಿ) ಅಥವಾ ಪೂಜಾ ಕೊಠಡಿಯ ಬಲಭಾಗದಲ್ಲಿ ಗಜಲಕ್ಷ್ಮಿ ಚಿತ್ರವನ್ನು ಇಡುವುದು ಮಂಗಳಕರವಾಗಿದೆ. ಗಜಲಕ್ಷ್ಮಿ ಫೋಟೋವನ್ನು ಉತ್ತರ ದಿಕ್ಕಿನಲ್ಲಿyಊ ಇರಿಸಬಹುದು. ಅದೂ ಶ್ರೇಯಸ್ಕರವೇ