- Kannada News Photo gallery Amazon Great Indian Festival Sales 2024, know start date, discounts and other details in Kannada
ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್: ಸಖತ್ ಡಿಸ್ಕೌಂಟ್ ಆಫರ್; ಸೆ. 29ರಿಂದ ಶುರುವಾಗುತ್ತಾ?
ನವದೆಹಲಿ, ಸೆಪ್ಟೆಂಬರ್ 12: ವಿಶ್ವದ ಅತಿದೊಡ್ಡ ಇಕಾಮರ್ಸ್ ಕಂಪನಿಯಾದ ಅಮೇಜಾನ್ನಲ್ಲಿ ಈ ವರ್ಷದ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್ ಇದೇ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಸೆಪ್ಟೆಂಬರ್ 27 ಅಥವಾ ತುಸು ಮುನ್ನ ಶುರುವಾಗಬಹುದಾದ ಈ ಶಾಪಿಂಗ್ ಉತ್ಸವದಲ್ಲಿ ನಾನಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ಒಳ್ಳೆಯ ಡಿಸ್ಕೌಂಟ್ ಸಿಗಬಹುದು ಎನ್ನಲಾಗಿದೆ.
Updated on: Sep 12, 2024 | 2:29 PM

ಅಮೇಜಾನ್ ಗ್ರಾಹಕರು ಮತ್ತು ಭಾರತದ ಆನ್ಲೈನ್ ಗ್ರಾಹಕರು ಬಹಳವಾಗಿ ನಿರೀಕ್ಷಿಸುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್ ಸದ್ಯದಲ್ಲೇ ಶುರುವಾಗುವ ಸಾಧ್ಯತೆ ಇದೆ. ಪ್ರತೀ ವರ್ಷವೂ ಅಮೇಜಾನ್ ಈ ಶಾಪಿಂಗ್ ಉತ್ಸವ ನಡೆಸುತ್ತದೆ. ಮೊಬೈಲ್, ಲ್ಯಾಪ್ಟಾಪ್, ಗೃಹೋಪಕರಣ ಇತ್ಯಾದಿ ಬಹಳಷ್ಟು ವಸ್ತುಗಳಿಗೆ ಈ ಶಾಪಿಂಗ್ ಫೆಸ್ಟಿವಲ್ನಲ್ಲಿ ಸಖತ್ ಡಿಸ್ಕೌಂಟ್ ಇರಲಿದೆ.

ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಕಳೆದ ವರ್ಷ ಅಕ್ಟೋಬರ್ 8ಕ್ಕೆ ಆರಂಭವಾಗಿತ್ತು. ಅಮೇಜಾನ್ನ ಪ್ರತಿಸ್ಪರ್ಧಿಯಾದ ಫ್ಲಿಪ್ಕಾರ್ಟ್ ಕೂಡ ಇದೇ ರೀತಿಯ ಶಾಪಿಂಗ್ ಉತ್ಸವ ಪ್ರತೀ ವರ್ಷ ನಡೆಸುತ್ತದೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಈ ವರ್ಷ ಸೆಪ್ಟೆಂಬರ್ 29ರಂದು ಆರಂಭವಾಗುತ್ತದೆ. ಅಮೇಜಾನ್ ಈ ದಿನ ಅಥವಾ ಒಂದೆರಡು ದಿನ ಮುಂಚೆ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ಸ್ ಆರಂಭಿಸುವ ನಿರೀಕ್ಷೆ ಇದೆ. ಸೆಪ್ಟೆಂಬರ್ ಕೊನೆಯ ವಾರದಿಂದ ಈ ಭರ್ಜರಿ ಮಾರಾಟ ಶುರುವಾಗಬಹುದು. ಕೆಲ ವರದಿಗಳ ಪ್ರಕಾರ ಈ ವರ್ಷವೂ ಅಕ್ಟೋಬರ್ 8ರಂದೇ ಶುರುವಾಗಬಹುದು. ಆದರೆ, ಅಮೇಜಾನ್ನಿಂದ ಇನ್ನೂ ಅಧಿಕೃತವಾಗಿ ದಿನಾಂಕ ಪ್ರಕಟವಾಗಿಲ್ಲ.

ಅಮೇಜಾನ್ ಶಾಪಿಂಗ್ ಫೆಸ್ಟಿವಲ್ನ ಮಾರಾಟದ ಸೌಲಭ್ಯವನ್ನು ಪ್ರೈಮ್ ಮೆಂಬರ್ಸ್ ಮೊದಲು ಪಡೆಯುತ್ತಾರೆ. ಫೆಸ್ಟಿವಲ್ ಸೇಲ್ ಶುರುವಾಗ 24 ಗಂಟೆ ಮುನ್ನವೇ ಪ್ರೈಮ್ ಸದಸ್ಯರು ಶಾಪಿಂಗ್ ನಡೆಸಬಹುದು. ಈ ಶಾಪಿಂಗ್ನಲ್ಲಿ ಹೆಚ್ಚಿನ ಡಿಸ್ಕೌಂಟ್ ಮತ್ತು ಆಫರ್ಗಳು ಪ್ರೈಮ್ ಮೆಂಬರ್ಸ್ಗೆ ಸಿಗುತ್ತದೆ. ಅಮೇಜಾನ್ ಪ್ರೈಮ್ ಮೆಂಬರ್ಶಿಪ್ ಹಣ ತಿಂಗಳಿಗೆ 125 ರೂ ಇದೆ.

ಫ್ಯಾಷನ್ ಉಡುಪು, ಕನ್ಸೂಮರ್ ಎಲೆಕ್ಟ್ರಾನಿಕ್ಸ್ ವಸ್ತು, ಗೃಹೋಪಕರಣ ಹೀಗೆ ವಿವಿಧ ವಸ್ತುಗಳಿಗೆ ಒಳ್ಳೆಯ ರಿಯಾಯಿತಿ ಸಿಗಲಿದೆ. ಈ ಬಾರಿ ಸ್ಯಾಮ್ಸುಂಗ್, ಆ್ಯಪಲ್, ಓಪ್ಪೋ, ಒನ್ಪ್ಲಸ್, ರಿಯಲ್ಮೀ ಮತ್ತಿತರ ಕಂಪನಿಗಳ ಸ್ಮಾರ್ಟ್ಫೋನ್ಗಳ ಮೇಲೆ ಸಖತ್ ಡಿಸ್ಕೌಂಟ್ ನಿರೀಕ್ಷಿಸಬಹುದು.

ಎಲ್ಜಿ, ಸ್ಯಾಮ್ಸುಂಗ್ನ ವಾಷಿಂಗ್ ಮೆಷೀನ್ ಮೇಲೆ ಶೇ. 35ರವರೆಗೂ ಡಿಸ್ಕೌಂಟ್ ಇರುವ ಸಾಧ್ಯತೆ ಇದೆ. ಸ್ಮಾರ್ಟ್ ಟಿವಿ, ಸ್ಮಾರ್ಟ್ ವಾಚ್, ಇಯರ್ ಬಡ್ಸ್ ಇತ್ಯಾದಿ ವಸ್ತುಗಳು ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ನಲ್ಲಿ ಉತ್ತಮ ಡಿಸ್ಕೌಂಟ್ಗೆ ಮಾರಾಟವಾಗಬಹುದು. ಈ ಅಮೇಜಾನ್ ಫೆಸ್ಟಿವಲ್ ಸೇಲ್ಸ್ ಎಷ್ಟು ದಿನಗಳವರೆಗೆ ಇರುತ್ತೆ ಎಂಬುದು ಸ್ಪಷ್ಟ ಇಲ್ಲ. 2 ದಿನದಿಂದ ಹಿಡಿದು 10 ದಿನದವರೆಗೆ ಈ ಆನ್ಲೈನ್ ಉತ್ಸವ ಇರಬಹುದು.



















