- Kannada News Photo gallery Lunar Eclipse 18 September 2024 Effects on 12 zodiac signs from Aries to Pisces in Kannada
Lunar Eclipse 2024: ಸೆ. 18ಕ್ಕೆ ರಾಹುಗ್ರಸ್ತ ಚಂದ್ರಗ್ರಹಣ; ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಫಲಾಫಲ ಹೀಗಿದೆ
ಇದೇ ಸೆಪ್ಟೆಂಬರ್ ಹದಿನೆಂಟನೇ ತಾರೀಕು ಚಂದ್ರ ಗ್ರಹಣ ಇದೆ. ಪೂರ್ವಾಭಾದ್ರಾ ನಕ್ಷತ್ರ ಮೀನ ರಾಶಿಯಲ್ಲಿ ರಾಹುಗ್ರಸ್ತ ಚಂದ್ರಗ್ರಹಣ ಸಂಭವಿಸುತ್ತಿದ್ದು, ಇದು ಭಾರತದಲ್ಲಿ ಗೋಚರ ಆಗುತ್ತಿಲ್ಲ. ಆ ಕಾರಣಕ್ಕೆ ಯಾವುದೇ ಗ್ರಹಣದ ಆಚರಣೆಗಳ ಅಗತ್ಯ ಇಲ್ಲ. ಹಾಗಂತ ಚಂದ್ರಗ್ರಹಣದ ಪರಿಣಾಮ ಬೀರುವುದಿಲ್ಲವಾ ಅಂತ ಕೇಳಿದರೆ, ಖಂಡಿತಾ ಪರಿಣಾಮ ಇರುತ್ತದೆ. ಮೀನ, ಮೇಷ, ಸಿಂಹ ಹಾಗೂ ಧನುಸ್ಸು ರಾಶಿಯವರು ಬಹಳ ಎಚ್ಚರಿಕೆಯನ್ನು ವಹಿಸಬೇಕು. ಇವರಿಗೆ ಅಶುಭ ಫಲವಿದೆ. ಕುಂಭ, ವೃಶ್ಚಿಕ, ಕನ್ಯಾ ಹಾಗೂ ಕರ್ಕಾಟಕ ರಾಶಿಯವರಿಗೆ ಮಿಶ್ರ ಫಲವಿದೆ. ವೃಷಭ, ಮಿಥುನ, ತುಲಾ, ಮಕರ ರಾಶಿಯವರಿಗೆ ಶುಭ ಫಲವಿದೆ. ಲೇಖಕರು: ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ - 6361335497
Updated on:Sep 12, 2024 | 6:04 PM

ಮೇಷ : ತಾಯಿಯ ಅನಾರೋಗ್ಯ, ವಾಹನ ದುರಸ್ತಿ, ಮನೆ ದುರಸ್ತಿ ಇಂಥವುಗಳಿಗೆ ಹೆಚ್ಚಿನ ವೆಚ್ಚವಾಗಲಿದೆ. ಮಾನಸಿಕ ಖಿನ್ನತೆ, ಮರೆವು ಕಾಡಲಿದೆ. ವಿದೇಶ ಪ್ರಯಾಣಗಳು, ಶುಭ ಕಾರ್ಯಗಳಲ್ಲಿ ಅಡೆತಡೆಗಳು ಕಾಡಲಿವೆ. ನಿಮ್ಮ ತಾಯಿಯವರು ಅಥವಾ ತಾಯಿ ಸಮಾನರಾದವರ ಜೊತೆಗೆ ಮನಸ್ತಾಪಗಳು, ಅಭಿಪ್ರಾಯಭೇದಗಳು ಕಾಣಿಸಿಕೊಳ್ಳಲಿವೆ. ವಿವಾಹಿತ ಸ್ತ್ರೀಯರಿಗೆ ತವರು ಮನೆಯಲ್ಲಿ ಬೆಳವಣಿಗೆಗಳಿಂದ ಆತಂಕಕ್ಕೆ ಕಾರಣ ಆಗಲಿದೆ.

ವೃಷಭ : ನೀವು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ದೊರೆಯಲಿದೆ. ನಷ್ಟದ ಸಂಭವನೀಯತೆ ನಿರೀಕ್ಷೆಯಲ್ಲಿ ಇರುವವರಿಗೆ ಅದು ಲಾಭವಾಗಿ ಅಥವಾ ಅಸಲು ಕೈಗೆ ಸಿಗುವಂತೆ ಆಗುತ್ತದೆ. ಸೋದರ- ಸೋದರಿಯರ ಜತೆಗೆ ಇರುವ ವೈಮನಸ್ಯ ನಿವಾರಣೆ ಆಗಲಿದೆ. ಹೆಸರು- ಕೀರ್ತಿಗಳು ದೊರೆಯಲಿವೆ. ಕೋರ್ಟ್- ಕಚೇರಿ ವ್ಯಾಜ್ಯಗಳು ಬಗೆಹರಿಸಿಕೊಳ್ಳಬಹುದು. ಆರೋಗ್ಯದಲ್ಲಿ ಸಮಸ್ಯೆಗಳಿದ್ದಲ್ಲಿ ಸೂಕ್ತ ವೈದ್ಯೋಪಚಾರಗಳು ದೊರೆಯಲಿವೆ.

ಮಿಥುನ : ಉದ್ಯೋಗ, ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಚಿಂತೆಗಳು ಕಾಡುತ್ತಿದ್ದಲ್ಲಿ ಅದು ದೂರವಾಗಲಿದೆ. ಸಾಂಸಾರಿಕವಾಗಿ ಸಮಸ್ಯೆಗಳು ಎದುರಿಸುತ್ತಿರುವವರಿಗೆ ಸಹ ನಿರುಮ್ಮಳರಾಗುವಂಥ ಬೆಳವಣಿಗೆ ದೊರೆಯಲಿದೆ. ಬಡ್ತಿ ಅಥವಾ ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ಸುದ್ದಿ ಕೇಳಿಬರಲಿದೆ. ಅಣ್ಣ- ತಮ್ಮಂದಿರು, ಅಕ್ಕ- ತಂಗಿಯರ ಜತೆಗೆ ಭಿನ್ನಾಭಿಪ್ರಾಯ, ಮನಸ್ತಾಪಗಳು ಇದ್ದರೂ ಅದನ್ನು ಬಗೆಹರಿಸಿಕೊಳ್ಳುವ ಅವಕಾಶವಿದೆ.

ಕರ್ಕಾಟಕ : ಪಿತ್ರಾರ್ಜಿತ ಆಸ್ತಿ ವ್ಯಾಜ್ಯಗಳು ಕಾಣಿಸಿಕೊಳ್ಳಬಹುದು, ಈಗಾಗಲೇ ಇದ್ದಲ್ಲಿ ಅದು ಉಲ್ಬಣವಾಗಲಿದೆ. ತಂದೆ ಅಥವಾ ತಂದೆ ಸಮಾನರಾದವರ ಆರೋಗ್ಯದ ಬಗ್ಗೆ ಎಚ್ಚರಿಕೆ- ಮುಂಜಾಗ್ರತೆ ತೆಗೆದುಕೊಳ್ಳಿ. ತಂದೆ ಜತೆಗೆ ತೀವ್ರತರವಾದ ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಲಿದೆ. ನಿಮ್ಮದೇ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಏರುಪೇರುಗಳಾಗಲಿದೆ. ಒತ್ತಡ ಹೆಚ್ಚಾಗಲಿದ್ದು, ಯಾವುದೇ ವಿಚಾರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಯಬೇಡಿ.

ಸಿಂಹ : ಆರೋಗ್ಯದ ಗಮನ ವಹಿಸಿ. ನಿಮ್ಮ ಸುತ್ತಮುತ್ತಲ ಬೆಳವಣಿಗೆಯು ಮಾನಸಿಕವಾಗಿ ಖಿನ್ನತೆ ತರುತ್ತದೆ. ಮನಸ್ಸು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ವಿವಾಹಿತ ಮಹಿಳೆಯರಿಗೆ ಸಂಗಾತಿಯ ಬಗ್ಗೆ ಚಿಂತೆಗಳು ಕಾಡುತ್ತವೆ. ಆದಾಯದಲ್ಲಿ ಇಳಿಕೆಯಾಗಿ ಅಥವಾ ಹೂಡಿಕೆ ಮಾಡಿದ ಹಣ ನಷ್ಟವಾಗಿ ದುಃಖ ಪಡಲಿದ್ದೀರಿ. ಕುಟುಂಬಸ್ಥರ ನಡವಳಿಕೆಯಿಂದ ಬೇಸರ ಕಾಡಲಿದೆ. ಮುಖ್ಯ ದಾಖಲೆಪತ್ರಗಳ ಜವಾಬ್ದಾರಿಯನ್ನು ನೀವಾಗಿ ತೆಗೆದುಕೊಳ್ಳದಿರಿ.

ಕನ್ಯಾ : ಪಾಲುದಾರಿಕೆ ವ್ಯವಹಾರ ಮಾಡುತ್ತಿರುವವರಿಗೆ ನಷ್ಟ, ಅಭಿಪ್ರಾಯ ಭೇದಗಳು ಕಾಣಿಸಿಕೊಳ್ಳಲಿವೆ. ವಿದೇಶ- ದೂರ ಪ್ರಯಾಣ ಮಾಡಬೇಕು ಎಂದುಕೊಳ್ಳುವವರಿಗೆ ಸಮಸ್ಯೆಗಳಾಗಲಿವೆ. ನಿಮಗೆ ಬೇಡದ ವಿಭಾಗ, ಸ್ಥಳಕ್ಕೆ ವರ್ಗಾವಣೆ ಆಗಬಹುದು. ಆಸೆಯನ್ನು ತೋರಿಸಿ, ನಿಮಗೆ ವಂಚನೆಗಳನ್ನು ಮಾಡಲಿದ್ದಾರೆ. ಇತರರ ಮಾತನ್ನು ನಂಬಿಕೊಂಡು ಹೂಡಿಕೆ ಮಾಡಬೇಡಿ. ವಿವಾಹ ವಿಚಾರದಲ್ಲಿ ಹಿನ್ನಡೆ ಆಗಲಿದೆ. ಮುಖ್ಯ ತೀರ್ಮಾನ ಬೇಡ.

ತುಲಾ : ಸಾಲದ ಹೊರೆ ಇರುವವರಿಗೆ ಹೊರಬರುವ ಮಾರ್ಗೋಪಾಯಗಳು ಗೋಚರ ಆಗಲಿದ್ದು, ಒಂದು ವೇಳೆ ಮನೆ, ಕಾರು, ವ್ಯವಹಾರ ಯಾವುದೇ ಕಾರಣಕ್ಕೆ ಸಾಲಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ದೊರೆಯಲಿದೆ. ಶತ್ರುಗಳು ಒಂದಲ್ಲಾ ಒಂದು ರೀತಿ ತೊಂದರೆ ಕೊಡುತ್ತಿದ್ದಲ್ಲಿ ಆ ಚಿಂತೆಯಿಂದ ಬಿಡುಗಡೆ ಪಡೆಯುತ್ತೀರಿ. ದೃಷ್ಟಿದೋಷ ನಿವಾರಣೆ ಆಗಲಿದೆ. ಆರೋಗ್ಯ ಸುಧಾರಣೆ ಆಗಲಿದೆ. ಉದ್ಯೋಗ ಕುರಿತಾದ ಯಾವುದೇ ಚಿಂತೆ ದೂರವಾಗಲಿದೆ.

ವೃಶ್ಚಿಕ; ಸಂತಾನ ವಿಚಾರಕ್ಕೆ ಚಿಂತೆಗೆ ಒಳಗಾಗಿದ್ದರೆ, ವ್ಯಾಪಾರ- ವ್ಯವಹಾರಗಳಲ್ಲಿ ಹಣ ಹಾಕಿ ಅದು ಸಿಕ್ಕಿಹಾಕಿಕೊಂಡಿದೆ ಎಂದಾದಲ್ಲಿ, ಪಿತ್ರಾರ್ಜಿತ ಆಸ್ತಿ ವಿಚಾರಕ್ಕೆ ಗಂಭೀರ ವ್ಯಾಜ್ಯಗಳಿದ್ದಲ್ಲಿ ಇವೆಲ್ಲ ಉಲ್ಬಣ ಆಗುವ ಅವಕಾಶಗಳಿವೆ. ಇಂಥದ್ದೇನೂ ಆಗಿಲ್ಲ ಎಂದಾದರೆ ಅದು ಕಾಣಿಸಿಕೊಳ್ಳಬಹುದು. ಇನ್ನು ಈ ಬಾರಿ ಮಿಶ್ರ ಫಲ ಇರುವುದರಿಂದ ಈ ಮೇಲ್ಕಂಡ ವಿಚಾರಗಳಲ್ಲಿಯೇ ಸಕಾರಾತ್ಮಕ ಬೆಳವಣಿಗೆಗಳನ್ನು ಸಹ ನಿರೀಕ್ಷೆ ಮಾಡಬಹುದು.

ಧನುಸ್ಸು; ಆರೋಗ್ಯದಲ್ಲಿ ಗಂಭೀರ ಸ್ವರೂಪದ ಚಿಂತೆ ಶುರುವಾಗಲಿದೆ. ತಾಯಿ ಅಥವಾ ತಾಯಿ ಸಮಾನರಾದವರ ಆರೋಗ್ಯ ಸಮಸ್ಯೆಗೆ ಮನಸ್ಸು ಖಿನ್ನಗೊಳ್ಳುತ್ತದೆ. ವಿದ್ಯಾರ್ಥಿಗಳಿಗೆ ಒತ್ತಡ ಜಾಸ್ತಿಯಾಗಿ, ಏಕಾಗ್ರತೆ ಸಾಧ್ಯವಾಗುವುದಿಲ್ಲ. ಉದ್ಯೋಗದಲ್ಲಿ ಗಮನವಿಟ್ಟು ಕೆಲಸ ಮಾಡಲಾಗುವುದಿಲ್ಲ. ಕೆಲವರಿಗೆ ಕೆಲಸವೇ ಹೋಗಿಬಿಡಬಹುದು ಅನಿಸಲಿದೆ. ಮಾತಿನ ಮೇಲೆ ನಿಗಾ ಇರಿಸಿಕೊಳ್ಳಿ. ಪದಬಳಕೆ ಬಗ್ಗೆ ಎಚ್ಚರವಿರಲಿ.

ಮಕರ ; ಅವಿವಾಹಿತರಿಗೆ ವಿವಾಹಕ್ಕೆ ಪೂರಕ ಬೆಳವಣಿಗೆ ಆಗಲಿದೆ, ದಂಪತಿ ಮಧ್ಯೆ ಸಾಮರಸ್ಯ ಜಾಸ್ತಿ ಆಗಲಿದೆ. ನಿಮ್ಮ ಸ್ನೇಹವಲಯ ವಿಸ್ತರಣೆಯಾಗಿ, ಅದರಿಂದ ಲಾಭವಾಗಲಿದೆ. ನಿಮಗೆ ಬೇಕಾದ ಸ್ಥಳಕ್ಕೆ, ವಿಭಾಗಕ್ಕೆ ವರ್ಗಾವಣೆ ಆಗಲಿದೆ. ಸೋದರ- ಸೋದರಿಯರ ಜತೆಗಿನ ಅಭಿಪ್ರಾಯ ಭೇದ ನಿವಾರಣೆ ಆಗುತ್ತದೆ. ದೂರ ಪ್ರಯಾಣ ಅಥವಾ ವಿದೇಶ ಪ್ರಯಾಣಗಳ ಅಡೆತಡೆ ನಿವಾರಣೆಯಾಗುತ್ತದೆ. ತಂದೆಯವರ ಆರೋಗ್ಯ ಚೇತರಿಕೆಯಾಗಲಿದೆ.

ಕುಂಭ ; ಹಣಕಾಸಿನ ವಿಚಾರಕ್ಕೆ ಮಾನಸಿಕ ಚಿಂತೆ ಕಾಡುತ್ತಿದ್ದಲ್ಲಿ, ಸಾಲ ಬಾಧೆಯಿಂದ ಆತಂಕ ಎದುರಾಗಲಿದೆ. ಶತ್ರುಗಳ ಕೈ ಮೇಲಾಗುವ ಎಲ್ಲ ಸಾಧ್ಯತೆಗಳಿವೆ. ಕೌಟುಂಬಿಕವಾಗಿ ಸಣ್ಣ- ಪುಟ್ಟ ವಿಚಾರಗಳಿಗೂ ಜೋರು ಮಾತುಕತೆ, ವಾಗ್ವಾದಗಳು ನಡೆಯುತ್ತವೆ. ನಿಮ್ಮ ರಾಶಿಗೆ ಕುಟುಂಬ, ವಾಕ್, ಧನ ಸ್ಥಾನದಲ್ಲಿ ಗ್ರಹಣ ನಡೆಯಲಿದ್ದು, ಈ ವಿಚಾರಗಳಿಗೆ ಸಂಬಂಧಿಸಿದಂತೆ ಒಳಿತು- ಕೆಡುಕು ಎರಡನ್ನೂ ಅನುಭವಿಸುತ್ತೀರಿ.

ಮೀನ ; ನಿಮ್ಮದೇ ರಾಶಿಯಲ್ಲಿ ಗ್ರಹಣ ನಡೆಯಲಿದೆ. ಹತಾಶೆ, ಸಿಟ್ಟು, ಖಿನ್ನತೆ ಮಾನಸಿಕವಾಗಿ ಜರ್ಝರಿತರಾಗುತ್ತೀರಿ. ಆರೋಗ್ಯದಲ್ಲಿ ಏನೋ ಏರುಪೇರಾಗಿದೆ ಎಂಬ ಮಾನಸಿಕ ಕ್ಲೇಶ ಕಾಡಲಿದೆ. ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕಿದ್ದರೆ, ಸೈಟು ಖರೀದಿ- ಮನೆ ಖರೀದಿ ಇಂಥವುಗಳಿಗೆ ಮುಂದಾಗಿದ್ದರೆ ಈ ಎಲ್ಲದರಲ್ಲೂ ಏಕ ಕಾಲಕ್ಕೆ ಹಿನ್ನಡೆ ಆಗುತ್ತದೆ. ನಿಮ್ಮ ಶ್ರಮ ಸಂಪೂರ್ಣ ವ್ಯರ್ಥವಾಗುತ್ತದೆ.

ಪರಿಹಾರ ಇದು ದ್ವಾದಶ ರಾಶಿಯವರೂ ಅನುಸರಿಸಿದರೆ ಉತ್ತಮ. ಗ್ರಹಣ ಸಂಭವಿಸುವ ದಿನ ಮನೆಯ ಹತ್ತಿರ ಇರುವ ಶಿವ ದೇವಾಲಯಕ್ಕೆ ತೆರಳಿ ಹಾಲಿನಿಂದ ರುದ್ರಾಭಿಷೇಕ ಮಾಡಿಸುವುದು ಉತ್ತಮ. ಇನ್ನು ಇದರ ಜೊತೆಗೆ ಚಂದ್ರ ಬಿಂಬ, ಬಿಳಿಯ ವಸ್ತ್ರ, ಅಕ್ಕಿ ಅಥವಾ ಭತ್ತ ಹಾಗೂ ಉದ್ದಿನ ಬೇಳೆಯನ್ನು ದಾನವಾಗಿ ನೀಡಬೇಕು. ಇದನ್ನು ವೀಳ್ಯದೆಲೆ, ಅಡಿಕೆ, ಬಾಳೇಹಣ್ಣು, ತೆಂಗಿನಕಾಯಿ ಸಹಿತವಾಗಿ ನೀಡಬೇಕು. ಇನ್ನು ಶಿವಾಷ್ಟೋತ್ತರ, ಚಂದ್ರಾಷ್ಟೋತ್ತರ ಪಠಣವನ್ನು ಮಾಡಿ.
Published On - 3:39 pm, Thu, 12 September 24
























