3ನೇ ಟೆಸ್ಟ್​ನಲ್ಲಿ ಭಾರತಕ್ಕೆ ಗೆಲುವು ನಿಶ್ಚಿತ; ಟೀಂ ಇಂಡಿಯಾ ಗೆಲುವಿಗೆ 5 ಕಾರಣ ನೀಡಿದ ಇಂಗ್ಲೆಂಡಿನ ಮಾಜಿ ನಾಯಕ ನಾಸಿರ್ ಹುಸೇನ್

| Updated By: ಪೃಥ್ವಿಶಂಕರ

Updated on: Aug 23, 2021 | 5:24 PM

Ind vs Eng: ಟೀಮ್ ಇಂಡಿಯಾ ಮೂರನೇ ಟೆಸ್ಟ್​ನಲ್ಲಿ ಗೆಲುವು ದಾಖಲಿಸುವ ಬಗ್ಗೆ ಹಲವಾರು ಊಹಪೋಹಗಳು ಎದ್ದಿವೆ. ಇಂಗ್ಲೆಂಡಿನ ಮಾಜಿ ನಾಯಕ ನಾಸಿರ್ ಹುಸೇನ್ ಅವರು ಪಟ್ಟಿ ಮಾಡಿದ 5 ಕಾರಣಗಳು ಸಹ ಈ ಭರವಸೆವನ್ನು ಮತ್ತಷ್ಟು ಹೆಚ್ಚಿಸಿವೆ.

1 / 6
ಭಾರತ ಮತ್ತು ಇಂಗ್ಲೆಂಡ್ ನಡುವಿನ 5-ಟೆಸ್ಟ್ ಸರಣಿಯ ಮೂರನೇ ಟೆಸ್ಟ್ ಆಗಸ್ಟ್ 25 ರಿಂದ ಹೆಡಿಂಗ್ಲಿಯಲ್ಲಿ ನಡೆಯಲಿದೆ. ಪ್ರಸ್ತುತ ತಂಡಗಳು ಅದಕ್ಕಾಗಿ ತಯಾರಿ ನಡೆಸುತ್ತಿವೆ. ಯಾರು ಗೆಲ್ಲುತ್ತಾರೆ ಎಂಬುದು ದೊಡ್ಡ ಪ್ರಶ್ನೆ? ಮೊದಲ ಎರಡು ಟೆಸ್ಟ್‌ಗಳಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಭಾರತ ಕೂಡ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಂದರೆ, ಈಗ ಹೆಡಿಂಗ್ಲಿ ಟೆಸ್ಟ್ ಗೆದ್ದರೆ, ಭಾರತಕ್ಕೆ ಸರಣಿ ಗೆಲ್ಲುವ ಅವಕಾಶ ಹೆಚ್ಚಿರುತ್ತದೆ. ಟೀಮ್ ಇಂಡಿಯಾ ಮೂರನೇ ಟೆಸ್ಟ್​ನಲ್ಲಿ ಗೆಲುವು ದಾಖಲಿಸುವ ಬಗ್ಗೆ ಹಲವಾರು ಊಹಪೋಹಗಳು ಎದ್ದಿವೆ. ಇಂಗ್ಲೆಂಡಿನ ಮಾಜಿ ನಾಯಕ ನಾಸಿರ್ ಹುಸೇನ್ ಅವರು ಪಟ್ಟಿ ಮಾಡಿದ 5 ಕಾರಣಗಳು ಸಹ ಈ ಭರವಸೆವನ್ನು ಮತ್ತಷ್ಟು ಹೆಚ್ಚಿಸಿವೆ.

2 / 6
ವಿರಾಟ್ ಕೊಹ್ಲಿಯ ಸಾಮರ್ಥ್ಯ- ನಾಸಿರ್ ಹುಸೇನ್ ಪ್ರಕಾರ, ಟೀಮ್ ಇಂಡಿಯಾದ ದೊಡ್ಡ ಶಕ್ತಿ ಅದರ ನಾಯಕನಲ್ಲಿದೆ. ಅವರು ಈ ತಂಡವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ. ಕೊಹ್ಲಿಗೆ ಗೆಲ್ಲುವ ಉತ್ಸಾಹವಿದೆ ಮತ್ತು ಅದು ಅವರ ಆಕ್ರಮಣಶೀಲತೆಯನ್ನು ತೋರಿಸುತ್ತದೆ. ಹುಸೇನ್ ಪ್ರಕಾರ, ವಿರಾಟ್ ಬ್ಯಾಟಿಂಗ್​ನಲ್ಲಿ ಕಷ್ಟಪಡುತ್ತಿರಬಹುದು, ಆದರೆ ಅವರ ತಂಡ ಸರಣಿ ಗೆಲ್ಲಬಹುದು.

3 / 6
 ಬೌಲರ್‌ಗಳ ಆತ್ಮವಿಶ್ವಾಸ - ನಾಸಿರ್ ಹುಸೇನ್ ಅವರು ಬುಮ್ರಾ ಅತ್ಯಂತ ಶಾಂತ ಆಟಗಾರ ಎಂದು ಭಾವಿಸಿದ್ದರು. ಆದರೆ ಕಳೆದ ಪಂದ್ಯದಲ್ಲಿ ಬುಮ್ರಾ ಆಂಡರ್ಸನ್ ಮೇಲೆ ದಾಳಿ ಮಾಡಿದ ರೀತಿ ಆತನ ಆತ್ಮವಿಶ್ವಾಸ ಎಷ್ಟು ಬೆಳೆದಿದೆ ಎಂಬುದನ್ನು ತೋರಿಸುತ್ತದೆ. ಮಾಜಿ ಇಂಗ್ಲೆಂಡ್ ನಾಯಕನ ಪ್ರಕಾರ, ಕೊಹ್ಲಿಯ ಆಕ್ರಮಣಕ್ಕೆ ಪ್ರಮುಖ ಕಾರಣ ಬೌಲಿಂಗ್‌ನಲ್ಲಿ ಭಾರತದ ಸಾಮರ್ಥ್ಯ.

4 / 6
ಇಂಗ್ಲೆಂಡ್ ಗಾಯ- ಇಂಗ್ಲೆಂಡ್ ತಂಡವು ಕಳಪೆ ಆಟವಾಡುವುದು ಮಾತ್ರವಲ್ಲ, ಈ ತಂಡವು ಗಾಯದಿಂದ ಕೂಡ ಹೋರಾಟ ನಡೆಸುತ್ತಿದೆ. ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಈಗಾಗಲೇ ಸರಣಿಯಿಂದ ಹೊರಗುಳಿದಿದ್ದರು. ಈಗ ಮಾರ್ಕ್ ವುಡ್ ಕೂಡ ಇಂಜುರಿಯಿಂದ ಬಳಲುತ್ತಿದ್ದಾರೆ. ರೆಡ್ ಬಾಲ್ ಕ್ರಿಕೆಟ್ ನ ಈ ದಿಗ್ಗಜರ ನಿರ್ಗಮನ ರೂಟ್​ಗೆ ದೊಡ್ಡ ನಷ್ಟವಾಗಿದೆ.

5 / 6
X ಫ್ಯಾಕ್ಟರ್ ರೋಹಿತ್ ಶರ್ಮಾ - ರೋಹಿತ್ ಶರ್ಮಾ ಭಾರತ ತಂಡದ ಪ್ರಮುಖ ಅಸ್ತ್ರ ಎಂದು ನಾಸಿರ್ ಹುಸೇನ್ ಬರೆದಿದ್ದಾರೆ. ರೋಹಿತ್ ಈ ತಂಡದ ಎಕ್ಸ್ ಫ್ಯಾಕ್ಟರ್. ಇದುವರೆಗೂ ರೋಹಿತ್​ಗೆ ಇಂಗ್ಲೆಂಡ್ ಪ್ರವಾಸ ಚೆನ್ನಾಗಿ ಹೋಗಿದೆ. ಅವರು ಲಾರ್ಡ್ಸ್ ಟೆಸ್ಟ್‌ನಲ್ಲಿ 83 ರನ್ ಗಳಿಸಿದ್ದಾರೆ, ಇದು ವಿದೇಶದಲ್ಲಿ ಅವರ ದೊಡ್ಡ ಸ್ಕೋರ್ ಆಗಿದೆ. ರೋಹಿತ್ ಶರ್ಮಾ ಮೊದಲ ಎರಡು ಟೆಸ್ಟ್​ಗಳಲ್ಲಿ ವಿಕೆಟ್​ಗಳ ನಡುವೆ ಹೆಚ್ಚು ಹೊತ್ತು ಇರಲು ಪ್ರಯತ್ನಿಸುತ್ತಾರೆ.

6 / 6
 ಅಶ್ವಿನ್ ರಿಟರ್ನ್- ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಅಶ್ವಿನ್ ಮರಳಬಹುದು ಎಂಬ ಭರವಸೆಯನ್ನು ನಾಸಿರ್ ಹುಸೇನ್ ವ್ಯಕ್ತಪಡಿಸಿದ್ದಾರೆ. ಇದು ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಭಾರತಕ್ಕೆ ಪ್ರಯೋಜನವನ್ನು ನೀಡುತ್ತದೆ.