
ಕಾಮನ್‌ವೆಲ್ತ್ ಕ್ರೀಡಾಕೂಟದ 10ನೇ ದಿನದಂದು ಭಾರತದಿಂದ ಪದಕಗಳ ಭೇಟೆ ಜೋರಾಗಿದೆ. ಅದರಲ್ಲೂ ಮಹಿಳಾ ಸ್ಪರ್ಧಿಗಳು ಚಿನ್ನ ಗೆಲ್ಲುವುದರಲ್ಲಿ ಮುಂದಿದ್ದಾರೆ. ಮಹಿಳೆಯರ ಬಾಕ್ಸಿಂಗ್ನಲ್ಲಿ ಫೈನಲ್ ತಲುಪಿದ ಭಾಗಶಃ ಮಹಿಳಾ ಆಟಗಾರ್ತಿಯರು ಸ್ವರ್ಣ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಇದೀಗ ಬಾಕ್ಸರ್ ಸಾಕ್ಷಿ ಚೌಧರಿ 51 ಕೆಜಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಚಿನ್ನದ ಪದಕ ಗೆದಿದ್ದಾರೆ(PC-PTI).

ಫೈನಲ್‌ನಲ್ಲಿ ಇಂಗ್ಲೆಂಡ್‌ನ ರೂಬಿ ವೈಟ್ ಅವರನ್ನು ಸುಲಭವಾಗಿ ಸೋಲಿಸಿದ ಸಾಕ್ಷಿ ಚೌಧರಿ ತಮ್ಮ ಮೊದಲ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಸಾಕ್ಷಿ ಈ ಹಿಂದೆ 54 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಆದರೆ ತಮ್ಮ ತೂಕವನ್ನು ಇಳಿಸಿಕೊಂಡು ಈ ಬಾರಿ 51 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾಕ್ಷಿ ಸ್ವರ್ಣಕ್ಕೆ ಕೊರಳೊಡ್ಡಿದ್ದಾರೆ(PC-PTI).

ಸಾಕ್ಷಿ ಚೌಧರಿ ರಾಷ್ಟ್ರೀಯ ಟ್ರಯಲ್ಸ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ನಿಖತ್ ಜರೀನ್ ಮತ್ತು ವಿಶ್ವ ಮತ್ತು ಏಷ್ಯನ್ ಚಾಂಪಿಯನ್ ಮೀನಾಕ್ಷಿ ಹೂಡಾ ಅವರನ್ನು ಸೋಲಿಸುವ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆದಿದ್ದರು. ಇದೀಗ ಫೈನಲ್‌ನಲ್ಲಿ ಏಕಪಕ್ಷೀಯ ಗೆಲುವು ಸಾಧಿಸಿದ್ದಾರೆ(PC-PTI).

ಸಾಕ್ಷಿ ಚೌಧರಿ ಕಾಮನ್‌ವೆಲ್ತ್ ಕ್ರೀಡಾಕೂಟದ ಪ್ರಯಾಣವನ್ನು ನೋಡುವುದಾದರೆ.. 16 ರ ಸುತ್ತಿನಲ್ಲಿ ಬೋಟ್ಸ್ವಾನಾದ ಲೆಥಾಬೊ ಮೊಡುಕನ್ಯಲೆ ಅವರನ್ನು ಸೋಲಿಸಿದ ಸಾಕ್ಷಿ, ಕ್ವಾರ್ಟರ್ ಫೈನಲ್‌ನಲ್ಲಿ ಉತ್ತರ ಐರ್ಲೆಂಡ್‌ನ ಕೈಟ್ಲಿನ್ ಫ್ರೈಯರ್ಸ್ ಅವರನ್ನು ಸೋಲಿಸಿದರು. ನಂತರ ಸೆಮಿಫೈನಲ್‌ನಲ್ಲಿ ಕೆನಡಾದ ಅಂಬರ್-ಜೇನ್ ವಾಲ್ ಅವರನ್ನು ಸೋಲಿಸಿದ ಸಾಕ್ಷಿ ಇದೀಗ ಫೈನಲ್‌ನಲ್ಲಿ ಇಂಗ್ಲೆಂಡ್‌ನ ರೂಬಿ ವೈಟ್ ಅವರನ್ನು ಸೋಲಿಸಿ ಕಾಮನ್‌ವೆಲ್ತ್ ಚಾಂಪಿಯನ್ ಆಗಿದ್ದಾರೆ(PC-PTI).

ಸೆಪ್ಟೆಂಬರ್ 9, 2000 ರಂದು ಹರಿಯಾಣದ ಭಿವಾನಿ ಜಿಲ್ಲೆಯ ಧನಾನಾ ಗ್ರಾಮದಲ್ಲಿ ಜನಿಸಿದ ಸಾಕ್ಷಿ, ಜಗದೀಶ್ ಸಿಂಗ್ ಅವರ ಮಾರ್ಗದರ್ಶನದಲ್ಲಿ ಭಿವಾನಿ ಬಾಕ್ಸಿಂಗ್ ಕ್ಲಬ್‌ನಲ್ಲಿ ತರಬೇತಿಯನ್ನು ಪ್ರಾರಂಭಿಸಿದರು. ಪ್ರಸ್ತುತ ಸಾಕ್ಷಿ ಭಾರತೀಯ ಸೇನೆಯಲ್ಲಿ ಹವಾಲ್ದಾರ್ ಆಗಿದ್ದರೆ, ಅವರ ಸಹೋದರ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದಾರೆ(PC-PTI).

ಸಾಕ್ಷಿ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 2015 ರಲ್ಲಿ ನಡೆದಿದ್ದ AIBA ವಿಶ್ವ ಜೂನಿಯರ್ ಚಾಂಪಿಯನ್ಶಿಪ್ನಲ್ಲಿ ಚಿನ್ನ, 2017 ರಲ್ಲಿ ನಡೆದಿದ್ದ ವಿಶ್ವ ಯುವ ಚಾಂಪಿಯನ್ಶಿಪ್ನಲ್ಲಿ ಚಿನ್ನ, 2018 ರಲ್ಲಿ ನಡೆದಿದ್ದ ವಿಶ್ವ ಯುವ ಚಾಂಪಿಯನ್ಶಿಪ್ನಲ್ಲಿ ಚಿನ್ನ, 2021ರಲ್ಲಿ ನಡೆದಿದ್ದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕಂಚು, 2025 ರಲ್ಲಿ ನಡೆದಿದ್ದ ವಿಶ್ವ ಬಾಕ್ಸಿಂಗ್ ಕಪ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಈ ಮೂಲಕ ವಿಶ್ವ ಬಾಕ್ಸಿಂಗ್ ಕಪ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದು, 8 ಬಾರಿ ರಾಷ್ಟ್ರೀಯ ಚಾಂಪಿಯನ್ ಕೂಡ ಆಗಿದ್ದಾರೆ(PC-PTI).