ಮಾಕ್ ಡ್ರಿಲ್​ಗೆ ಭಾರತ ಸಜ್ಜು, ಯುದ್ಧ ವಿಮಾನಗಳ ತಾಲೀಮು, ಇಸ್ರೇಲ್ ರೀತಿ ದಾಳಿ ನಡೆಯಲಿದೆ ಎಂದ ಪಾಕ್ ಸಚಿವ; ಇಂದು ಏನೇನಾಯ್ತು?

Updated on: May 06, 2025 | 8:39 PM

ಮೇ 7ರಿಂದ ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಮರುಭೂಮಿ ವಲಯ ಮತ್ತು ಪಕ್ಕದ ಪ್ರದೇಶಗಳಲ್ಲಿ ತಾಲೀಮು ನಡೆಸಲಿದ್ದು, ಇದರಲ್ಲಿ ರಫೇಲ್, ಮಿರಾಜ್ 2000 ಮತ್ತು ಸುಖೋಯ್ -30 ಗಳು ಸೇರಿದಂತೆ ಎಲ್ಲಾ ಮುಂಚೂಣಿ ವಿಮಾನಗಳು ಭಾಗವಹಿಸಲಿವೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಭಾರತ ನಮ್ಮ ತಂಟೆಗೆ ಬಂದ್ರೆ ಮರೆಯಲಾಗದ ಉತ್ತರ ನೀಡ್ತೇವೆ. ನಮ್ಮ ಮೇಲೆ ಇಸ್ರೇಲ್ ರೀತಿ ದಾಳಿಗೆ ಭಾರತ ಪ್ಲ್ಯಾನ್ ಮಾಡಿದೆ. ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದ್ರೆ ಇಡೀ ವಿಶ್ವವನ್ನೇ ನಾಶ ಮಾಡುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿಕೆ ನೀಡಿದ್ದಾರೆ. ಇಂದು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಪ್ರಮುಖ ಬೆಳವಣಿಗೆಗಳು ಹೀಗಿವೆ.

1 / 8
ಪಹಲ್ಗಾಮ್​ನಲ್ಲಿ ಉಗ್ರರ ದಾಳಿ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ನಾಳೆಯಿಂದ ಭಾರತೀಯ ಸೇನೆ ಸಮರಾಭ್ಯಾಸಕ್ಕೆ ಸಜ್ಜಾಗಿದೆ. ಭಾರತೀಯ ಸೇನೆಯಿಂದ 2 ದಿನಗಳ ಕಾಲ ಸಮರಾಭ್ಯಾಸ ನಡೆಯಲಿದೆ. ಭಾರತ-ಪಾಕಿಸ್ತಾನ ಗಡಿ ರಾಜಸ್ಥಾನದಲ್ಲಿ ನಾಳೆ ಮತ್ತು ನಾಡಿದ್ದು ಏರ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಮೇ 7, 8ರಂದು ವಾಯುಸೇನೆಯಿಂದ ಶಕ್ತಿ ಪ್ರದರ್ಶನವಾಗಲಿದೆ. ನಾಳೆ ಮಧ್ಯಾಹ್ನ 3.30ರಿಂದ  ರಾತ್ರಿ 9.30ರವರೆಗೆ ವಾಯುಸೇನೆಯಿಂದ ಸಮರಾಭ್ಯಾಸ ನಡೆಯಲಿದೆ.

2 / 8
ಪಹಲ್ಗಾಮ್​ನಲ್ಲಿ ಉಗ್ರರ ದಾಳಿ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು, ಪಾಕಿಸ್ತಾನದ ರಕ್ಷಣಾ ಸಚಿವರಿಂದ ಮತ್ತೆ ಹುಚ್ಚುತನದ ಹೇಳಿಕೆ ಹೊರಬಿದ್ದಿದೆ. ಭಾರತ ನಮ್ಮ ತಂಟೆಗೆ ಬಂದ್ರೆ ಮರೆಯಲಾಗದ ಉತ್ತರ ನೀಡ್ತೇವೆ. ಇದುವರೆಗೆ ಯಾರೂ ನೀಡದಂತಹ, ಜೀವನ ಪರ್ಯಂತ ನೆನಪಿಟ್ಟುಕೊಳ್ಳುವಂತೆ ಉತ್ತರ ನೀಡ್ತೇವೆ. ನಮ್ಮ ಮೇಲೆ ಇಸ್ರೇಲ್ ರೀತಿ ದಾಳಿಗೆ ಭಾರತ ಪ್ಲ್ಯಾನ್ ಮಾಡಿದೆ. ನೆತನ್ಯಾಹು ಮಾಡಿದಂತೆ ದಾಳಿ ಮಾಡಲು ಯತ್ನಿಸುತ್ತಿದ್ದಾರೆ. ಆದರೆ ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬಂದ್ರೆ ಸರ್ವನಾಶ ಮಾಡ್ತೀವಿ. ನಮ್ಮ ಜೊತೆ ಯಾರನ್ನೂ ಕೂಡ ಉಳಿಸೋದಿಲ್ಲ. ಇಡೀ ವಿಶ್ವವನ್ನೇ ನಾಶ ಮಾಡುವುದಾಗಿ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಹೇಳಿಕೆ ನೀಡಿದ್ದಾರೆ.

3 / 8
ಕಾಶ್ಮೀರದ ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಗ್ರರ ದಾಳಿ ವೇಳೆ ಬುಲೆಟ್​​ಪ್ರೂಫ್​ ಧರಿಸಿದ್ದ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಭಾರತೀಯ ವಾಯುಪಡೆಯು ನಾಳೆ ಅಂದರೆ ಮೇ 7ರಿಂದ ಭಾರತ-ಪಾಕಿಸ್ತಾನ ಗಡಿಯುದ್ದಕ್ಕೂ ಮರುಭೂಮಿ ವಲಯ ಮತ್ತು ಪಕ್ಕದ ಪ್ರದೇಶಗಳಲ್ಲಿ ತಾಲೀಮು ನಡೆಸಲಿದ್ದು, ಇದರಲ್ಲಿ ರಫೇಲ್, ಮಿರಾಜ್ 2000 ಮತ್ತು ಸುಖೋಯ್ -30 ಗಳು ಸೇರಿದಂತೆ ಎಲ್ಲಾ ಮುಂಚೂಣಿ ವಿಮಾನಗಳು ಭಾಗವಹಿಸಲಿವೆ ಎಂದು ಐಎಎಫ್ ಅಧಿಕಾರಿಗಳು ತಿಳಿಸಿದ್ದಾರೆ.

4 / 8
ಪಾಕಿಸ್ತಾನದ ಜೊತೆಗಿನ ಯುದ್ಧದ ಸಾಧ್ಯತೆಯ ನಡುವೆ ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್‌ ನಡೆಸಲು ಗೃಹ ಸಚಿವಾಲಯ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಇಂದು 
ಜಮ್ಮು ಶಾಲೆಯ ವಿದ್ಯಾರ್ಥಿಗಳಿಗೆ ಮಾಕ್ ಡ್ರಿಲ್ ಸಮಯದಲ್ಲಿ ಯಾವುದೇ ಅಪಾಯಕಾರಿ ಘಟನೆಗೆ ಪ್ರತಿಕ್ರಿಯಿಸಲು ತರಬೇತಿ ನೀಡಲಾಯಿತು. ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್ ಮತ್ತು ಅಹಮದಾಬಾದ್‌ನಂತಹ ಮೆಟ್ರೋ ನಗರಗಳು ಸೇರಿದಂತೆ ಭಾರತದ 259 ಸ್ಥಳಗಳಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದೆ. ಇವುಗಳಲ್ಲಿ 100ಕ್ಕೂ ಹೆಚ್ಚು ಸ್ಥಳಗಳನ್ನು ಅತ್ಯಂತ ಸೂಕ್ಷ್ಮವೆಂದು ಗುರುತಿಸಲಾಗಿದೆ.

ಪಾಕಿಸ್ತಾನದ ಜೊತೆಗಿನ ಯುದ್ಧದ ಸಾಧ್ಯತೆಯ ನಡುವೆ ಮೇ 7ರಂದು ದೇಶಾದ್ಯಂತ ಮಾಕ್ ಡ್ರಿಲ್‌ ನಡೆಸಲು ಗೃಹ ಸಚಿವಾಲಯ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಇಂದು ಜಮ್ಮು ಶಾಲೆಯ ವಿದ್ಯಾರ್ಥಿಗಳಿಗೆ ಮಾಕ್ ಡ್ರಿಲ್ ಸಮಯದಲ್ಲಿ ಯಾವುದೇ ಅಪಾಯಕಾರಿ ಘಟನೆಗೆ ಪ್ರತಿಕ್ರಿಯಿಸಲು ತರಬೇತಿ ನೀಡಲಾಯಿತು. ದೆಹಲಿ, ಮುಂಬೈ, ಪುಣೆ, ಬೆಂಗಳೂರು, ಹೈದರಾಬಾದ್ ಮತ್ತು ಅಹಮದಾಬಾದ್‌ನಂತಹ ಮೆಟ್ರೋ ನಗರಗಳು ಸೇರಿದಂತೆ ಭಾರತದ 259 ಸ್ಥಳಗಳಲ್ಲಿ ನಾಳೆ ಮಾಕ್ ಡ್ರಿಲ್ ನಡೆಯಲಿದೆ. ಇವುಗಳಲ್ಲಿ 100ಕ್ಕೂ ಹೆಚ್ಚು ಸ್ಥಳಗಳನ್ನು ಅತ್ಯಂತ ಸೂಕ್ಷ್ಮವೆಂದು ಗುರುತಿಸಲಾಗಿದೆ.

5 / 8
 ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಒಂದೂವರೆ ಗಂಟೆಗಳ ಕಾಲ ನಡೆದ ಗುಪ್ತ ಸಭೆಯ ನಂತರ ಪಾಕಿಸ್ತಾನ ಮುಜುಗರಕ್ಕೀಡಾಯಿತು. ಈ ಸಭೆಯ ನಂತರ, ವಿಶ್ವಸಂಸ್ಥೆಯು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಲಿಲ್ಲ ಅಥವಾ ಯಾವುದೇ ನಿರ್ಣಯವನ್ನು ಅಂಗೀಕರಿಸಲಿಲ್ಲ. ಸಭೆಯಲ್ಲಿ, ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಆಸಿಮ್ ಇಫ್ತಿಕರ್, ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯ ಉದ್ದೇಶವನ್ನು ಸಾಧಿಸಲಾಗಿದೆ ಎಂದು ಹೇಳಿದರು. ಈ ಸಭೆಯಲ್ಲಿ ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆಯೂ ಚರ್ಚಿಸಿದೆ ಎಂದು ಅವರು ಹೇಳಿದರು.

6 / 8
ಕೇಂದ್ರ ಗೃಹ ಸಚಿವಾಲಯ ನಾಳೆ ( ಮೇ 7) ಮಾಕ್ ಡ್ರಿಲ್ ನಡೆಸುವಂತೆ ರಾಜ್ಯಗಳಿಗೆ ಸೂಚಿಸಿತ್ತು. ನಾಳೆ ಭಾರತದ 259 ಸ್ಥಳಗಳಲ್ಲಿ ನಾಗರಿಕ ರಕ್ಷಣಾ ಡ್ರಿಲ್ ನಡೆಯಲಿದೆ. ಈ ಅಣಕು ಡ್ರಿಲ್‌ನಲ್ಲಿ ವಾಯುದಾಳಿ ಸೈರನ್‌ಗಳು, ಬ್ಲ್ಯಾಕ್‌ಔಟ್ ಪ್ರೋಟೋಕಾಲ್‌ಗಳು ಮತ್ತು ಸಾರ್ವಜನಿಕ ತರಬೇತಿ ನಡೆಯಲಿದ್ದು, ಅಧಿಕಾರಿಗಳು ಟಾರ್ಚ್‌ಗಳು, ಮೇಣದಬತ್ತಿಗಳು ಮತ್ತು ಹಣವನ್ನು ಸಿದ್ಧವಾಗಿಟ್ಟುಕೊಳ್ಳಲು ನಾಗರಿಕರಿಗೆ ಸೂಚಿಸಿದ್ದಾರೆ.

7 / 8
ಭಾರತೀಯ ಸೇನೆಯ ಬ್ರಹ್ಮೋಸ್ ಕ್ಷಿಪಣಿಯು ಅದರ ಅಪ್ರತಿಮ ವೇಗ ಮತ್ತು ನಿಖರತೆಗೆ ಹೆಸರುವಾಸಿಯಾಗಿದೆ. ಇದು ವಿಶ್ವದ ಅತ್ಯಂತ ಮುಂದುವರಿದ ಕ್ರೂಸ್ ಕ್ಷಿಪಣಿಗಳಲ್ಲಿ ಒಂದಾಗಿದೆ. ಮ್ಯಾಕ್ 2.8 ಮತ್ತು 3.0 ನಡುವಿನ ವೇಗದಲ್ಲಿ ಚಲಿಸುವ ಸಾಮರ್ಥ್ಯವಿರುವ ಇದು ಸಾಂಪ್ರದಾಯಿಕ ಸಬ್‌ಸಾನಿಕ್ ಕ್ರೂಸ್ ಕ್ಷಿಪಣಿಗಳಿಗಿಂತ ಸುಮಾರು ಮೂರು ಪಟ್ಟು ವೇಗವಾಗಿದೆ. ಇದನ್ನು ಭಾರತೀಯ ಮಿಲಿಟರಿಯ ಬ್ರಹ್ಮಾಸ್ತ್ರ ಎಂದೇ ಪರಿಗಣಿಸಲಾಗಿದೆ. ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿ ಬಂಗಾಳಕೊಲ್ಲಿಯಲ್ಲಿ ನಡೆಸಿದ ಯಶಸ್ವಿ ಪರೀಕ್ಷೆಗಳ ಸಮಯದಲ್ಲಿ 800 ಕಿ.ಮೀ. ವ್ಯಾಪ್ತಿಯ ಗುರಿಯನ್ನು ದಾಟಿತು. ಪಾಕಿಸ್ತಾನದೊಂದಿಗೆ ಯುದ್ಧದ ಸಾಧ್ಯತೆ ಇರುವುದರಿಂದ ಭಾರತ ತನ್ನ ಯುದ್ಧೋಪಕರಣಗಳು ಮತ್ತು ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿದೆ

8 / 8
ಭಾರತ-ಪಾಕಿಸ್ತಾನ ಯುದ್ಧ ಇಸ್ಲಾಂ ಯುದ್ಧವಲ್ಲ ಎಂದು ಮೌಲಾನಾ ಅಬ್ದುಲ್ ಅಜೀಜ್ ಘಾಜಿ ಹೇಳಿದ್ದಾರೆ. ಅಮೆರಿಕದಲ್ಲಿರುವ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಅವರು ಅಪ್‌ಲೋಡ್ ಮಾಡಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನದಲ್ಲಿರುವಷ್ಟು ದಬ್ಬಾಳಿಕೆ ಭಾರತದಲ್ಲಿಲ್ಲ ಎಂದು ಅಜೀಜ್ ಹೇಳಿದ್ದಾರೆ. ಧಾರ್ಮಿಕ ಗುಂಪುಗಳನ್ನು ಕೈಗೊಂಬೆಗಳಾಗಿ ಬಳಸುತ್ತಿರುವ ಪಾಕಿಸ್ತಾನವನ್ನು ಅವರು ಟೀಕಿಸಿದರು. ರಾಜಕಾರಣಿ ಅಲಿ ಮುಹಮ್ಮದ್ ಖಾನ್ ಮರ್ವಾತ್ ಅವರ ಮತ್ತೊಂದು ವೈರಲ್ ವಿಡಿಯೋ ಭಾನುವಾರ ಬೆಳಕಿಗೆ ಬಂದಿದೆ.