- Kannada News Photo gallery Indian Oldest Hotel : Great Eastern Hotel is the first and oldest hotel in India.
ಭಾರತದ ಹಳೆಯ, ಮೊಟ್ಟ ಮೊದಲ ಹೋಟೆಲ್ ಇರುವುದು ಎಲ್ಲಿ ಗೊತ್ತಾ?
ಎಲ್ಲರೂ ಕೂಡ ಟ್ರಿಪ್ ಎಂದು ದೂರದ ಊರು, ರಾಜ್ಯ, ವಿದೇಶಕ್ಕೆ ಹೋದರೆ ಉಳಿದುಕೊಳ್ಳಲು ಯಾವ ಹೋಟೆಲ್ ಬೆಸ್ಟ್ ಇದೆ ಎಂದು ಮೊದಲು ಹುಡುಕಾಟ ನಡೆಸುತ್ತೀರಿ. ಈಗೇನಿದ್ದರೂ ದುಡ್ಡು ಕೊಟ್ಟರೆ ಒಳ್ಳೆಯ ಸೌಕರ್ಯವಿರುವ ಫೈವ್ ಸ್ಟಾರ್ ಹೋಟೆಲ್ ಗಳು ಸಿಗುತ್ತವೆ. ಆದರೆ ಭಾರತದಲ್ಲಿನ ಮೊಟ್ಟ ಮೊದಲ ಹಾಗೂ ಹಳೆಯ ಹೋಟೆಲ್ ಬಗ್ಗೆ ನಿಮಗೆ ಗೊತ್ತಾ? ಈ ಹೋಟೆಲ್ ಇರುವುದು ಎಲ್ಲಿ? ಎನ್ನುವ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.
Updated on: May 25, 2025 | 7:15 PM

ಕೆಲವರು ಟ್ರಿಪ್ ಗೆ ಹೋದಾಗ ಐಷರಾಮಿ ಹೋಟೆಲ್ ಗಳಲ್ಲಿ ತಂಗಬೇಕು ಎಂದು ಬಯಸುವುದು ಸಹಜ.ಈ ಆಹಾರ ಪ್ರಿಯರು ಬಗೆ ಬಗೆಯ ಖಾದ್ಯಗಳ ರುಚಿ ಸವಿಯಲು ಮೊದಲು ಹುಡುಕುವುದೇ ಯಾವ ಹೋಟೆಲ್ ಬೆಸ್ಟ್ ಎಂದು. ಆದರೆ ಕೆಲ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳನ್ನು ನೋಡಿದರೆ ಕಣ್ಣು ತಂಪಾಗುತ್ತದೆ.

ಹೌದು, ಈಗೇನಿದ್ದರೂ ದುಬಾರಿ ಬೆಲೆಯ ಎಲ್ಲಾ ಸೌಕರ್ಯಗಳು ಹಾಗೂ ರುಚಿಕರ ಆಹಾರ ಸಿಗುವ ಹೋಟೆಲ್ ಗಳು ಬೇಕಾದಷ್ಟು ಇವೆ. ಭಾರತದಲ್ಲಿ ಸಾಕಷ್ಟು ಐಷಾರಾಮಿ ಸೌಕರ್ಯಗಳನ್ನು ಒಳಗೊಂಡ ಫೈವ್ ಸ್ಟಾರ್ ಹಾಗೂ ಸೆವೆನ್ ಸ್ಟಾರ್ ಹೋಟೆಲ್ ಗಳ ಬಗ್ಗೆ ನೀವು ಕೇಳಿರುತ್ತೀರಿ.

ಶ್ರೀಮಂತ ವರ್ಗದ ಜನರು ಅಂತಹ ಹೋಟೆಲ್ ಗಳಲ್ಲಿ ತಂಗಿರುತ್ತಾರೆ. ಆದರೆ ನೀವು ಭಾರತದ ಹಳೆಯ ಹಾಗೂ ಮೊದಲ ಹೋಟೆಲ್ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ಹೋಟೆಲ್ ಇರುವುದು ಕೋಲ್ಕತ್ತಾದಲ್ಲಿ. ಈ ಹೋಟೆಲ್ ಹೆಸರು ಗ್ರೇಟ್ ಈಸ್ಟರ್ನ್ ಹೋಟೆಲ್.

ಹಳೆಯ ಹೋಟೆಲ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಈ ಹೋಟೆಲನ್ನು 1840 -41 ರಲ್ಲಿ ಡೇವಿಡ್ ವೀಲ್ಸನ್ ಎನ್ನುವ ವ್ಯಕ್ತಿಯೂ ನಿರ್ಮಿಸಿದನು. ಈಸ್ಟ್ ಇಂಡಿಯಾ ಕಂಪೆನಿಯ ಕೇಂದ್ರ ಕೋಲ್ಕತ್ತಾವಾಗಿದ್ದರಿಂದ ಬ್ರಿಟಿಷ್ ಅಧಿಕಾರಿಗಳು ಸೇರಿದಂತೆ ಅನೇಕರು ತಂಗಲು ಆ ಕಾಲದಲ್ಲಿ ಈ ಹೋಟೆಲನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ದರು.

ಕೋಲ್ಕತ್ತಾದ ಓಲ್ಡ್ ಕೋರ್ಟ್ ಸ್ಟ್ರೀಟ್ ನಲ್ಲಿ ನಿರ್ಮಾಣವಾಗಿದ್ದ ಈ ಹೋಟೆಲ್ ಅಂದಿನ ಕಾಲದಲ್ಲಿ ಐಷಾರಾಮಿ ಹೋಟೆಲ್ ಗೆ ಸೇರ್ಪಡೆಯಾಗಿತ್ತು.1883 ರಲ್ಲಿ ಮೊದಲ ವಿದ್ಯುದೀಕರಣಗೊಂಡ ಹೋಟೆಲ್ ಆಗಿ ಮಾರ್ಪಡಾಯಿತು.

1970 ರ ವೇಳೆಗೆ ಪಶ್ಚಿಮ ಬಂಗಾಳ ಸರ್ಕಾರವು ಈ ಹೋಟೆಲ್ ನಿರ್ವಹಣೆ ಯನ್ನು ವಹಿಸಿಕೊಂಡಿತು. ಆದರೆ ಆಧುನಿಕ ಸ್ಪರ್ಶ ಹಾಗೂ ನಿರ್ವಹಣೆ ಕೊರತೆ ಸೇರಿದಂತೆ ಈ ಹೋಟೆಲ್ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿತು.

ಹಳೆಯ ಹೋಟೆಲ್ ಆದ ಕಾರಣ 2005 ರ ವೇಳೆಗೆ ಸಂಪೂರ್ಣವಾಗಿ ಹದಗೆಟ್ಟಿತು, ಆದರೆ ಇವತ್ತಿಗೂ ಭಾರತದ ಹಳೆಯ ಹೋಟೆಲ್ ಎನ್ನುವ ಖ್ಯಾತಿ ಮಾತ್ರ ಈ ಹೋಟೆಲ್ ಗೆ ಇದೆ.




