Indus River: ಸಿಂಧೂ ನದಿಯ ಹುಟ್ಟು ಎಲ್ಲಿ? ಇದರ ಉದ್ದ ಎಷ್ಟು ಗೊತ್ತೇ? ಇಲ್ಲಿದೆ ಮಾಹಿತಿ

Updated on: Apr 26, 2025 | 4:41 PM

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ ಕಣಿವೆಯಲ್ಲಿ ಪ್ರವಾಸಿಗರ ಮೇಲಿನ ಪಾಕ್‌ ಮೂಲದ ಉಗ್ರರ ದಾಳಿಯ ಪ್ರತಿಯಾಗಿ ಭಾರತವು 1960 ರ ಸಿಂಧು ಜಲ ಒಪ್ಪಂದವನ್ನು ತಡೆಹಿಡಿದು, ಪಾಕಿಸ್ತಾನಕ್ಕೆ ಒಂದು ಹನಿ ನೀರನ್ನೂ ಹರಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಭಾರತ ಮತ್ತು ಪಾಕಿಸ್ತಾನದ ಮೂಲಕ ಹರಿದು ಹೋಗಿ ಅರಬ್ಬಿ ಸಮುದ್ರವನ್ನು ಸೇರುವ ಸಿಂಧೂ ನದಿಯನ್ನು ದಕ್ಷಿಣ ಏಷ್ಯಾದ ಜೀವನಾಡಿ ಎಂದೇ ಪರಿಗಣಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯುವ ಈ ನದಿಯ ಹುಟ್ಟು ಎಲ್ಲಿ? ಈ ನದಿ ಎಷ್ಟು ಉದ್ದ ಇದೆ ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

1 / 6
ಇಂಡಸ್‌ ರಿವರ್‌ ಅಂತಾನೂ ಕರೆಯುವ ಸಿಂಧೂ ನದಿಯ ಮೂಲವನ್ನು ನೋಡುವುದಾದರೆ, ಟಿಬೆಟ್‌ನ ಮಾನಸ ಸರೋವರದ ಬಳಿಯ ಸಿನ್-ಕಾ-ಬಾಬ್ ಹೊಳೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 5,182 ಮೀಟರ್‌  ಎತ್ತರದಲ್ಲಿ ಹುಟ್ಟುವ ಸಿಂಧೂ ನದಿ ಕಾಶ್ಮೀರ ಮತ್ತು ಪಾಕಿಸ್ತಾನದಿಂದ ಹರಿದು ಹೋಗಿ ಪಾಕಿಸ್ತಾನದ ಕರಾಚಿ ನದಿ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.

2 / 6
ಏಷ್ಯಾದ ಅತಿ ಉದ್ದದ ನದಿಗಳಲ್ಲಿ ಒಂದಾದ ಸಿಂಧೂ ನದಿ ಪ್ರದೇಶವು ಚೀನಾ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನಗಳೊಂದಿಗೆ ಹಂಚಿಹೋಗಿದೆ. ಅದರಲ್ಲೂ ಶೇ. 60% ರಷ್ಟು ಈ ನದಿ ಪ್ರದೇಶ ಪಾಕಿಸ್ತಾನದಲ್ಲಿಯೇ ಇದ್ದು, ಇಲ್ಲಿನ ಹಲವು ಪ್ರಾಂತ್ಯಗಳ ಕೃಷಿ, ಕೈಗಾರಿಕೆ ಆರ್ಥಿಕ ಚಟುವಟಿಕೆಗಳಿಗೆ ಸಿಂಧೂ ನದಿಯೇ ಮೂಲವಾಗಿದೆ. ಪಾಕಿಸ್ತಾನದ ಆರ್ಥಿಕತೆಗೆ ಆಧಾರವಾಗಿರುವ ಏಕೈಕ ನದಿಯಾಗಿರುವ ಇದನ್ನು ಪಾಕಿಸ್ತಾನದ ಜೀವನಾಡಿ ಎಂದೇ ಕರೆಯಲಾಗುತ್ತದೆ.

3 / 6
ಸಿಂಧೂ ನದಿಯ ಉದ್ದವನ್ನು ನೋಡುವುದಾದರೆ ಈ  ನದಿಯ ವಿಸ್ತೀರ್ಣ ಸುಮಾರು 11,65,000 ಚದರ ಕಿಲೋಮೀಟರ್‌ಗಳಲ್ಲಿ ಹರಡಿದೆ. ಮತ್ತು ಈ ನದಿಯ ಒಟ್ಟು ಉದ್ದ 3,180 ಕಿ.ಮೀ. ಝೀಲಂ, ಚೀನಬ್‌, ರಾವಿ, ಬಿಯಾಸ್‌, ಸಟ್ಲೆಜ್ ಈ ಐದು ನದಿಗಳು ಸಿಂಧೂ ನದಿಯ ಪ್ರಮುಖ ಉಪನದಿಗಳಾಗಿದ್ದು, ಪಾಕಿಸ್ತಾನದ ಶೇ 92% ರಷ್ಟು ಭೂಮಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಆರ್ಥಿಕತೆಗೆ ಸಿಂಧೂ ನದಿ  ಏಕೈಕ ಆಧಾರವಾಗಿದೆ.

4 / 6
ಸುಮಾರು 3,200 ಕಿಲೋಮೀಟರ್ ಸಿಂಧೂ ನದಿ, ಭಾರತದಲ್ಲಿ ಸುಮಾರು 800 ಕಿ.ಮೀ ಗಳಷ್ಟು ಮಾತ್ರ ಹರಿಯುತ್ತದೆ.  ಈ ನದಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಮೂಲಕ ಹಾದುಹೋಗುತ್ತದೆ. ಆದಾಗ್ಯೂ, ವಾಸ್ತವದಲ್ಲಿ ಈ ನದಿಯ ಒಂದು ಸಣ್ಣ ಭಾಗ ಮಾತ್ರ ಭಾರತದ ನಿಯಂತ್ರಣದ್ದು, ಈ ನದಿ ಪ್ರದೇಶ ಶೇ 60% ರಷ್ಟು ಪಾಕಿಸ್ತಾನದಲ್ಲಿದೆ.

5 / 6
ಸಿಂಧೂ ನದಿ ಮತ್ತು ಅದರ ಉಪನದಿಗಳ ಮೇಲೆ ಹಲವಾರು  ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವಿದ್ಯುತ್ ಉತ್ಪಾದಿಸುವ ಹಲವಾರು ದೊಡ್ಡ ಯೋಜನೆಗಳು ಸೇರಿವೆ. ಭಾರತದಲ್ಲಿ ಸಟ್ಲೆಜ್ ನದಿಯ ಮೇಲಿನ ಭಾಕ್ರಾ ಅಣೆಕಟ್ಟು  ಮತ್ತು ಬಿಯಾಸ್ ನದಿಯ ಮೇಲೆ ಪಾಂಡೋಹ್ ಅಣೆಕಟ್ಟು, ಚೆನಾಬ್‌ ನದಿಯ ಮೇಲೆ ಬಾಗ್ಲಿಹಾರ್ ಮತ್ತು ದುಲ್ಹಸ್ತಿ ಅಣೆಕಟ್ಟು, ಝೀಲಂ ನದಿಯ ಮೇಲೆ ಉರಿ ಮತ್ತು ಕಿಶನ್‌ಗಂಗಾ ಯೋಜನೆಯನ್ನು ನಿರ್ಮಿಸಲಾಗಿದೆ.

6 / 6
ಪಾಕಿಸ್ತಾನದಲ್ಲಿ, ಸಿಂಧೂ ನದಿಯ ಮೇಲಿನ ತುರ್ಬೆಲಾ ಅಣೆಕಟ್ಟು, ಝೀಲಂ ನದಿಯಲ್ಲಿ ಮಂಗ್ಲಾ ಅಣೆಕಟ್ಟು ಮತ್ತು  ನೀಲಂ-ಝೀಲಂ ಯೋಜನೆಯನ್ನು ಸ್ಥಾಪಿಸಲಾಗಿದೆ. ಈ ಎಲ್ಲಾ ಅಣೆಕಟ್ಟುಗಳು ಭಾರತ ಮತ್ತು ಪಾಕಿಸ್ತಾನದ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇದೀಗ ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಯದಂತೆ ತಡೆ ಹಿಡಿಲು ಭಾರತ ಸರಕಾರ ಮುಂದಾಗಿದೆ.