ಸದ್ಯ ಟೆಕ್ ಜಗತ್ತಿನಲ್ಲಿ ಭಾರೀ ಸುದ್ದಿಯಲ್ಲಿರುವ ಸ್ಮಾರ್ಟ್‌ಫೋನ್ ಎಂದರೆ ಇನ್ಫಿನಿಕ್ಸ್ ಜಿಟಿ 10 ಪ್ರೊ 5ಜಿ. ಬಿಡುಗಡೆಗು ಮುನ್ನವೇ ಸಾಕಷ್ಟು ರೋಚಕತೆ ಸೃಷ್ಟಿಸಿರುವ ಈ ಫೋನಿನ ಒಂದೊಂದೆ ಮಾಹಿತಿ ಸೋರಿಕೆ ಆಗುತ್ತಿದೆ.
ಇದೀಗ ಇನ್ಫಿನಿಕ್ಸ್ ಜಿಟಿ 10 ಪ್ರೊ 5ಜಿ ಫೋನಿನ ಹಿಂಭಾಗದ ಪ್ಯಾನಲ್ನಲ್ಲಿ ಬಣ್ಣ ಬದಲಾಗುತ್ತಾ ಇರುತ್ತದೆ ಎಂಬ ಸುದ್ದಿ ಸೋರಿಕೆ ಆಗಿದೆ. ಫೋನಿನಲ್ಲಿ ನೋಟಿಫಿಕೇಶನ್ ಬಂದಾಗ ಕೂಡ ಹಿಂಭಾಗ ಲೈಟ್ ಆಗುತ್ತಂತೆ.
ಈ ಫೋನಿನ ಹಿಂಭಾಗ ಡಿಸೈನ್ ನಥಿಂಗ್ ಫೋನ್ 2 ಮಾದರಿಯಲ್ಲೇ ಇದೆ. ಇದರ ಫೋಟೋ ಕೂಡ ಸೋರಿಕೆ ಆಗಿದೆ. ಗೇಮರ್ಗಳಿಗಾಗಿ ಸೃಷ್ಟಿಯಾಗಿರುವ ಈ ಫೋನ್ನಲ್ಲಿ ರಿಯರ್ ಕ್ಯಾಮೆರಾ ಅಳವಡಿಸಲಾಗಿದೆ. ಜೊತೆಗೆ ಅರ್ಧ ವೃತ್ತಾಕಾರದ ಡಿಸೈನ್ನಲ್ಲಿ ಕಾಣಿಸಿಕೊಂಡಿದೆ.
ಈ ಸ್ಮಾರ್ಟ್‌ಫೋನ್ ನೀಲಿ ಮತ್ತು ಬಿಳಿ ಎಂಬ ಎರಡು ಬಣ್ಣಗಳಲ್ಲಿ ಬಿಡುಗಡೆ ಆಗಲಿದೆಯಂತೆ. ನೀಲಿ ರೂಪಾಂತರವು ಚಾರ್ಜಿಂಗ್ ಕೇಬಲ್ ಸೇರಿದಂತೆ ಕಿತ್ತಳೆ ಬಣ್ಣಗಳಂದ ಆವೃತ್ತವಾಗಿದೆ.
ಇನ್ಫಿನಿಕ್ಸ್ GT 10 ಪ್ರೊ ಕ್ಯಾಮೆರಾಗಳ ಜೊತೆಗೆ LED ಫ್ಲ್ಯಾಷ್ ಒಳಗೊಂಡಿದೆ. ಇದರ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ನಿಂದ ಕೂಡಿರಲಿದ್ದು, ಮೀಡಿಯಾಟೆಕ್ ಪ್ರೊಸೆಸರ್ ಒಳಗೊಂಡಿದೆ ಎಂದು ವರದಿಯು ಹೇಳಿದೆ.
ಈ ಫೋನ್ನಲ್ಲಿ ಮೊಬೈಲ್ ಲೆಜೆಂಡ್ಸ್, ಬ್ಯಾಂಗ್ ಬ್ಯಾಂಗ್, PUBG ಮತ್ತು ಗರೆನಾ ಫ್ರೀ ಫೈರ್‌ನಂತಹ ಗೇಮಿಂಗ್ ಸುಲಭವಾಗಿ ಆಡಬಹುದಂತೆ.ಇದು ಆಂಡ್ರಾಯ್ಡ್ 13 ಆಧಾರಿತ XOS 13 ಅನ್ನು ರನ್ ಆಗುತ್ತದೆ. ಇದು ಎರಡು ವರ್ಷಗಳ ಭದ್ರತಾ ನವೀಕರಣಗಳನ್ನು ಪಡೆಯುವ ಸಾಧ್ಯತೆಯಿದೆ.
ಇನ್ಫಿನಿಕ್ಸ್‌ನ ಈ ಹೊಸ ಸ್ಮಾರ್ಟ್ಫೋನ್ನ ಬೆಲೆ ಬಹಿರಂಗವಾಗಿಲ್ಲ. ಆದರೆ, ಮೂಲಗಳ ಪ್ರಕಾರ 30,000 ರೂ. ಯಿಂದ 25,000 ರೂ. ಒಳಗಡೆ ಇರಬಹುದು ಎನ್ನಲಾಗಿದೆ. ಇದು ಆಗಸ್ಟ್ನಲ್ಲಿ ಬಿಡುಗಡೆ ಆಗಲಿದೆ.