Amar Jawan Jyoti: ಅಮರ್ ಜವಾನ್ ಜ್ಯೋತಿ ಬಗ್ಗೆ ನೀವು ತಿಳಿದಿರಲೇಬೇಕಾದ ಕುತೂಹಲಕಾರಿ ಸಂಗತಿಗಳು ಇಲ್ಲಿದೆ
TV9 Web | Updated By: ganapathi bhat
Updated on:
Jan 21, 2022 | 3:56 PM
Amar Jawan Jyoti: ಇದೀಗ ಅಮರ್ ಜವಾನ್ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಮರ್ ಜವಾನ್ ಜ್ಯೋತಿಯ ಬಗ್ಗೆ ನೀವು ತಿಳಿದಿರಬೇಕಾದ ಕುತೂಹಲಕಾರಿ ಅಂಶಗಳು ಇಲ್ಲಿದೆ.
1 / 6
ನವದೆಹಲಿಯ ಇಂಡಿಯಾ ಗೇಟ್ನಲ್ಲಿ ಕಾಣುತ್ತಿದ್ದ ಅಮರ್ ಜವಾನ್ ಜ್ಯೋತಿ ಇನ್ನು ಮುಂದೆ ಆ ಸ್ಥಳದಲ್ಲಿ ಕಾಣಸಿಗುವುದಿಲ್ಲ. ನೀವು ಇಂಡಿಯಾ ಗೇಟ್ಗೆ ಭೇಟಿ ಕೊಟ್ಟಿದ್ದರೆ ಅಥವಾ ಅಲ್ಲಿಗೆ ಹೋಗಿರದಿದ್ದರೂ ನೀವು ಅಮರ್ ಜವಾನ್ ಜ್ಯೋತಿ ನೋಡಿಯೇ ಇರುತ್ತೀರಿ. ಇಂಡಿಯಾ ಗೇಟ್ನಲ್ಲಿ ಅಮರ್ ಜವಾನ್ ಜ್ಯೋತಿ ನಿರಂತರವಾಗಿ ಉರಿಯುತ್ತಲೇ ಇರುತ್ತದೆ. ಇದೀಗ ಆ ಜ್ಯೋತಿಯನ್ನು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಅಮರ್ ಜವಾನ್ ಜ್ಯೋತಿಯ ಬಗ್ಗೆ ನೀವು ತಿಳಿದಿರಬೇಕಾದ ಕುತೂಹಲಕಾರಿ ಅಂಶಗಳು ಇಲ್ಲಿದೆ.
2 / 6
ಇಂಡಿಯಾ ಗೇಟ್ ಬಳಿ ಉರಿಯುತ್ತಿರುವ ಅಮರ್ ಜವಾನ್ ಜ್ಯೋತಿ ಸುಮಾರು 50 ವರ್ಷಗಳಿಂದ ಅಲ್ಲಿ ಉರಿಯುತ್ತಿದೆ. ಈ ಇಂಡಿಯಾ ಗೇಟ್ಅನ್ನು ಬ್ರಿಟೀಷ್ ಸರ್ಕಾರವು ಬ್ರಿಟೀಷ್ ಇಂಡಿಯನ್ ಆರ್ಮಿಯ ಸೈನಿಕರ ಸ್ಮಾರಕವಾಗಿ ನಿರ್ಮಿಸಿತ್ತು. 1914- 1921ರ ಅವಧಿಯಲ್ಲಿ ಜೀವತೆತ್ತ ಸೈನಿಕರ ನೆನಪಿಗಾಗಿ ಈ ಸ್ಮಾರಕ ನಿರ್ಮಾಣ ಮಾಡಲಾಗಿತ್ತು. ವಿಶ್ವಯುದ್ಧ 1, ನಾರ್ತ್ ವೆಸ್ಟ್ ಫ್ರಂಟಿಯರ್ ಅಫ್ಘಾನ್ ಯುದ್ಧದಲ್ಲಿ ಮಡಿದ ಸಾವಿರಾರು ಬ್ರಿಟಿಷ್ ಇಂಡಿಯನ್ ಸೈನಿಕರ ಹೆಸರೂ ಈ ಸ್ಮಾರಕದಲ್ಲಿದೆ.
3 / 6
ಇಂಡಿಯಾ ಗೇಟ್ನ ಶಂಕುಸ್ಥಾಪನೆಯನ್ನು ಡ್ಯೂಕ್ ಕನ್ನಾಟ್ 1921ರಲ್ಲಿ ಮಾಡಿದ್ದರು. ಎಡ್ವಿನ್ ಲುಟಿನ್ಸ್ ಎಂಬವರು ಇದರ ವಿನ್ಯಾಸ ಮಾಡಿದ್ದರು. ಆ ಬಳಿಕ, 10 ವರ್ಷಗಳ ನಂತರ ಈ ಸ್ಮಾರಕವನ್ನು ವೈಸ್ರಾಯ್ ಲಾರ್ಡ್ ಐರ್ವಿನ್ ಲೋಕಾರ್ಪಣೆ ಮಾಡಿದ್ದರು.
4 / 6
ಇಂಡಿಯಾ ಗೇಟ್ನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಕಟ್ಟಲಾಯಿತು. ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ಅಲ್ಲಿಗೆ ಅಮರ್ ಜವಾನ್ ಸ್ಮಾರಕ ಸೇರ್ಪಡೆ ಮಾಡಲಾಯಿತು. ಬಳಿಕ ಕೆಲವು ಸಮಯಗಳ ನಂತರ ಅಲ್ಲಿಗೆ ಜ್ಯೋತಿ ಸೇರ್ಪಡೆ ಆಗಿದ್ದು ಅದು ಹಗಲು ರಾತ್ರಿ ಎನ್ನದೆ ಸತತವಾಗಿ ಉರಿಯುತ್ತಿತ್ತು.
5 / 6
1971 ರ ಡಿಸೆಂಬರ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಯುದ್ಧ ನಡೆಯಿತು. ಭಾರತದ ಹಲವು ಸೈನಿಕರು ಆ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಯುದ್ಧ ಅಂತ್ಯವಾದ ಬಳಿಕ ಅವರ ಸ್ಮರಣೆಗಾಗಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅಮರ್ ಜವಾನ್ ಜ್ಯೋತಿಯನ್ನು ಉದ್ಘಾಟನೆ ಮಾಡಿದರು. ಜನವರಿ 26, 1972 ರಂದು ಅಮರ್ ಜವಾನ್ ಜ್ಯೋತಿ ಉದ್ಘಾಟಿಸಿದರು.
6 / 6
ಅಮರ್ ಜವಾನ್ ಎಂಬುದು ಕಪ್ಪು ಬಣ್ಣದಲ್ಲಿ ಇರುವ ಸ್ಮಾರಕ ಆಗಿದೆ. ಅದರ ಮೇಲೆ L1A1 ಸೆಲ್ಫ್ ಲೋಡಿಂಗ್ ರೈಫಲ್ ಸಹ ಇರಿಸಲಾಗಿದೆ. ಹಾಗೂ ಸೈನಿಕನ ಶಿರಸ್ತ್ರಾಣ ಕೂಡ ಇಡಲಾಗಿದೆ. ಅಂದಿನಿಂದ ಇಂದಿನವರೆಗೆ ಆ ಜ್ಯೋತಿ ಉರಿಯುತ್ತಿದೆ. ಮಾಹಿತಿಯಂತೆ 1971 ರಿಂದ 2006ರ ವರೆಗೆ ಎಲ್ಪಿಜಿ ಬಳಸಿ ಜ್ಯೋತಿ ಉರಿಸಲಾಗಿತ್ತು ಹಾಗೂ ಬಳಿಕ ಸಿಎನ್ಜಿ ಬಳಕೆ ಮಾಡಲಾಗುತ್ತಿತ್ತು.