iPhone 13: ಐಫೋನ್ ಖರೀದಿಗೆ ಇದಕ್ಕಿಂತ ಬೆಸ್ಟ್ ಟೈಮ್ ಬರಲ್ಲ: ಐಫೋನ್ 13 ಈಗ ಅತಿ ಕಡಿಮೆ ಬೆಲೆಗೆ ಲಭ್ಯ

Edited By:

Updated on: Oct 15, 2022 | 3:14 PM

ಐಫೋನ್ 13ನ 128GB ಆಯ್ಕೆಯ ಫೋನ್ ಈಗ ಕೇವಲ 59,990 ರೂ. ಗೆ ಖರೀದಿಸಬಹುದು. ಇದರ MRP ಬೆಲೆ 69,990 ರೂ. ಆಗಿದೆ. ಆಫರ್ ನಲ್ಲಿ ನೀವು ಬರೋಬ್ಬರಿ 10,000 ರೂ. ಗಳ ಆಕರ್ಷಕ ಡಿಸ್ಕೌಂಟ್ ಪಡೆಯಬಹುದು. ಅಂತೆಯೆ 256GB ಆಯ್ಕೆಯ ಫೋನ್ 67,990 ಹಾಗೂ 512GB ಆಯ್ಕೆಯ ಫೋನ್ 86,990 ರೂ. ಗೆ ಸೇಲ್ ಆಗುತ್ತಿದೆ.

1 / 6
ಆ್ಯಪಲ್ ಕಂಪನಿಯ ಐಫೋನ್ ಹೊಸ ಸರಣಿ ಐಫೋನ್ 14 ಬಿಡುಗಡೆ ಆಗಿದ್ದು ಅಷ್ಟೇನು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಐಫೋನ್ 14 ಸರಣಿಗಿಂತ ಐಫೋನ್ 13 ಸರಣಿಗಳೇ ಬೆಸ್ಟ್ ಎಂದು ಅನೇಕರ ಅಭಿಪ್ರಾಯ. ಇದೀಗ ಐಫೋನ್ ತನ್ನ ಹಳೆಯ ಮಾಡೆಲ್ ಗಳ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ದುಬಾರಿ ಬೆಲೆಯ ಆ್ಯಪಲ್ ಐಫೋನ್ ಖರೀದಿಸ ಬೇಕು ಎಂಬವರಿಗೆ ಇದು ಅತ್ಯುತ್ತಮ ಸಮಯ ಎನ್ನಬಹುದು.

ಆ್ಯಪಲ್ ಕಂಪನಿಯ ಐಫೋನ್ ಹೊಸ ಸರಣಿ ಐಫೋನ್ 14 ಬಿಡುಗಡೆ ಆಗಿದ್ದು ಅಷ್ಟೇನು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ. ಐಫೋನ್ 14 ಸರಣಿಗಿಂತ ಐಫೋನ್ 13 ಸರಣಿಗಳೇ ಬೆಸ್ಟ್ ಎಂದು ಅನೇಕರ ಅಭಿಪ್ರಾಯ. ಇದೀಗ ಐಫೋನ್ ತನ್ನ ಹಳೆಯ ಮಾಡೆಲ್ ಗಳ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ. ದುಬಾರಿ ಬೆಲೆಯ ಆ್ಯಪಲ್ ಐಫೋನ್ ಖರೀದಿಸ ಬೇಕು ಎಂಬವರಿಗೆ ಇದು ಅತ್ಯುತ್ತಮ ಸಮಯ ಎನ್ನಬಹುದು.

2 / 6

ಇದೀಗ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ ನಲ್ಲಿ ಕಳೆದ ವರ್ಷ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆದ ಐಫೋನ್ 13 ಸ್ಮಾರ್ಟ್ ಫೋನ್ ಮೇಲೆ ಆಕರ್ಷಕ ಡಿಸ್ಕೌಂಟ್ ನೀಡಲಾಗಿದೆ. ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಈ ಫೋನ್ ದೀಪಾವಳಿ ಸೇಲ್​ನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ.

3 / 6

ಐಫೋನ್ 13ನ 128GB ಆಯ್ಕೆಯ ಫೋನ್ ಈಗ ಕೇವಲ 59,990 ರೂ. ಗೆ ಖರೀದಿಸಬಹುದು. ಇದರ MRP ಬೆಲೆ 69,990 ರೂ. ಆಗಿದೆ. ಆಫರ್ ನಲ್ಲಿ ನೀವು ಬರೋಬ್ಬರಿ 10,000 ರೂ. ಗಳ ಆಕರ್ಷಕ ಡಿಸ್ಕೌಂಟ್ ಪಡೆಯಬಹುದು. ಅಂತೆಯೆ 256GB ಆಯ್ಕೆಯ ಫೋನ್ 67,990 ಹಾಗೂ 512GB ಆಯ್ಕೆಯ ಫೋನ್ 86,990 ರೂ. ಗೆ ಸೇಲ್ ಆಗುತ್ತಿದೆ. 256GB ಮತ್ತು 512GB ಮಾಡೆಲ್​ನ ಫೋನನ್ನು ಎಸ್​ಬಿಐ ಅಥವಾ ಕೋಟಕ್ ಬ್ಯಾಂಕ್ ಕಾರ್ಡ್ ಮೂಲಕ ಖರೀದಿಸಿದರೆ 1,250 ರೂ. ಗಳ ರಿಯಾಯಿತಿ ಸಿಗಲಿದೆ.

4 / 6

ಈ ಫೋನ್‌ 6.1 ಇಂಚಿನ ಡಿಸ್‌ ಪ್ಲೇ ಹೊಂದಿದ್ದು, ಅತ್ಯುತ್ತುಮ ಪಿಕ್ಸಲ್ ರೆಸಲ್ಯೂಶನ್ ಪಡೆದಿದೆ. ಈ ಡಿಸ್‌ ಪ್ಲೇ 60Hz ರಿಫ್ರೆಶ್ ರೇಟ್‌ ಹೊಂದಿದ್ದು, 1200 ನಿಟ್ಸ್‌ ಬ್ರೈಟ್‌ನೆಸ್ ​ನಿಂದ ಕೂಡಿದೆ. ಹಾಗೆಯೇ A15 ಬಯೋನಿಕ್ ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. 5G ಅನ್ನು ಬೆಂಬಲಿಸುತ್ತದೆ.

5 / 6

ಕ್ಯಾಮೆರಾಕ್ಕೆ ಫೇಮಸ್ ಆಗಿರುವ ಐಫೋನ್ 13 ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿದೆ. ಅವುಗಳು ಕ್ರಮವಾಗಿ 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್, ಇನ್ನೊಂದು ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಪಡೆದಿದೆ.

6 / 6

ಐಫೋನ್ 13 ಐಆರ್ ಆಧಾರಿತ ಫೇಸ್ ಐಡಿಯನ್ನು ಹೊಂದಿದೆ ಮತ್ತು ಮಿಂಚಿನ ಕೇಬಲ್ ಮೂಲಕ ಚಾರ್ಜ್ ಮಾಡುವ ದೊಡ್ಡ ಬ್ಯಾಟರಿಯೊಂದಿಗೆ ಬರುತ್ತದೆ. ಯಾವುದೇ ಸಂದರ್ಭದಲ್ಲಿಯೂ ಅತ್ಯುತ್ತಮ ಫೋಟೋ ಸೆರೆಹಿಡಿಯಲು ನೆರವಾಗಲಿದೆ. ಇವುಗಳ ಜೊತೆಗೆ ಸಿನಿಮ್ಯಾಟಿಕ್ ಮೋಡ್ ಆಯ್ಕೆ ಪಡೆದಿರುವುದು ವಿಶೇಷ.

Loading...
Unable to load recommendations.
Follow Us