
ಬೋನ್ಸಾಯ್ ಗಿಡವನ್ನು ಹೆಚ್ಚಾಗಿ ನಾವು ಜಪಾನ್ನಲ್ಲಿ ಕಾಣಬಹುದಾಗಿದೆ. ಬೋನ್ಸಾಯ್ ಎಂದರೆ ಗಿಡ ಅಥವಾ ಪಾತ್ರೆಯಲ್ಲಿರುವ ಗಿಡ.

ಕೆಲವು ವರ್ಷಗಳ ಹಿಂದೆ, ಜಪಾನ್ ತಕಮಾಟ್ಸುನಲ್ಲಿ ನಡೆದ ಅಂತರರಾಷ್ಟ್ರೀಯ ಬೋನ್ಸಾಯ್ ಸಮ್ಮೇಳನದಲ್ಲಿ ಬೋನ್ಸಾಯ್ ಗಿಡಕ್ಕೆ 9 ಕೋಟಿ ರೂ. ಬೆಲೆ ಮಾರಾಟವಾಗಿದೆ. ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಮರವಾಗಿದೆ. ಯಾವ ಗಿಡವೂ ಇಷ್ಟು ಬೆಲೆಗೆ ಮಾರಾಟವಾಗಿಲ್ಲ.

ಬೋನ್ಸಾಯ್ ಗಿಡಗಳು ಬಹಳ ಅಪರೂಪದ ಗಿಡಗಳಲ್ಲಿ ಒಂದು. ಏಕೆಂದರೆ ಅವು ಬೆಳೆದಂತೆ ಅವುಗಳನ್ನು ಜೀವಂತವಾಗಿಡುವುದು ತುಂಬಾ ಕಷ್ಟ. ಹಳೆಯ ವೈನ್ಗೆ ಹೇಗೆ ಬೆಲೆ ಜಾಸ್ತಿಯೋ ಹಾಗೆಯೇ ಈ ಬೋನ್ಸಾಯ್ ಗಿಡಗಳ ಬೆಲೆಯೂ ಜಾಸ್ತಿ.

ಜಪಾನ್ ಹಿರೋಷಿಮಾದಲ್ಲಿ 400 ವರ್ಷ ಹಳೆಯ ಬೋನ್ಸಾಯ್ ಗಿಡವಿದೆ. ಇದನ್ನು ಯಮಕಿ ಪೈನ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಯಮಕಿ ಕುಟುಂಬದ 6 ತಲೆಮಾರುಗಳು ಇದನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬಂದಿದೆ. ನಂತರ ಇದನ್ನು ವಾಷಿಂಗ್ಟನ್ನ ನ್ಯಾಷನಲ್ ಬೋನ್ಸಾಯ್ ಮತ್ತು ಪೆನ್ಜಿಂಗ್ ವಸ್ತುಸಂಗ್ರಹಾಲಯಕ್ಕೆ ದಾನ ಮಾಡಲಾಯಿತು. ಈ ಗಿಡದ ವಿಶೇಷತೆಯೆಂದರೆ 1945 ರಲ್ಲಿ ಇದು ಹಿರೋಷಿಮಾ ಬಾಂಬ್ ದಾಳಿಯಿಂದ ಬದುಕುಳಿದಿತ್ತು.

ವಿಶ್ವದ ಅತ್ಯಂತ ದುಬಾರಿ ಗಿಡವೆಂದೇ ಈ ಬೋನ್ಸಾಯ್ ಗಿಡವನ್ನು ಗುರುತಿಸಲಾಗಿದೆ. ಈ ಗಿಡದ ಬೆಲೆಯಲ್ಲಿ ನೀವು ಅನೇಕ ಮರ್ಸಿಡಿಸ್ ಮತ್ತು ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸಬಹುದಾಗಿದೆ.