- Kannada News Photo gallery Toby Movie First Look Teaser Released In Bengaluru, Here Is Photos Of Movie Team
ಇದೇ ನೋಡಿ ಟೋಬಿ ಗ್ಯಾಂಗ್: ಟೀಸರ್ ಬಿಡುಗಡೆ ಸಂಭ್ರಮದಲ್ಲಿ ರಾಜ್ ಬಿ ಶೆಟ್ಟಿ ಹಾಗೂ ತಂಡ
Toby Movie: ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿತ್ರತಂಡದ ಚಿತ್ರಗಳು ಇಲ್ಲಿವೆ...
Updated on: Jun 29, 2023 | 9:12 PM

ರಾಜ್ ಬಿ ಶೆಟ್ಟಿ ನಟನೆಯ ಟೋಬಿ ಸಿನಿಮಾದ ಫಸ್ಟ್ ಲುಕ್ ಟೀಸರ್ ಇಂದು ಬೆಂಗಳೂರಿನ ಲುಲು ಮಾಲ್ನಲ್ಲಿ ಬಿಡುಗಡೆ ಆಯ್ತು.

ಸಿನಿಮಾದ ನಿರ್ದೇಶಕ ಬಾಸಿಲ್, ನಿರ್ಮಾಪಕರು, ಸಂಗೀತ ನಿರ್ದೇಶಕ, ಇತರೆ ನಟ-ನಟಿಯರು ಸೇರಿದಂತೆ ಹಲವರು ಸಮಾರಂಭದಲ್ಲಿ ಭಾಗಿಯಾಗಿದ್ದರು.

ಅನುಶ್ರೀ ಎಂದಿನಂತೆ ಉತ್ಸಾಹದಿಂದ ಕಾರ್ಯಕ್ರಮ ನಿರೂಪಣೆ ಮಾಡಿದರು. ಸಿನಿಮಾಕ್ಕಾಗಿ ಕೆಲಸ ಮಾಡಿದ ಅನೇಕರು ಸಿನಿಮಾ ಹಾಗೂ ಚಿತ್ರತಂಡದ ಬಗ್ಗೆ ಮೆಚ್ಚುಗೆಯ ಮಾತನಾಡಿದರು.

ಕಾರ್ಯಕ್ರಮದಲ್ಲಿ ಟೋಬಿ ಸಿನಿಮಾದ ಫಸ್ಟ್ ಲುಕ್ ಟೀಸರ್ ಬಿಡುಗಡೆ ಆಯ್ತು, ನೆರೆದವರಿಂದ ಅದ್ಭುತ ಪ್ರತಿಕ್ರಿಯೆ ಟೀಸರ್ಗೆ ದೊರಕಿತು.

ನಟಿ ಚೈತ್ರಾ ಆಚಾರ್ ಹಾಗೂ ಸಂಯುಕ್ತಾ ಹೊರನಾಡು ಅವರು ಸಿನಿಮಾದಲ್ಲಿ ನಟಿಸುವ ಅವಕಾಶ ಕೊಟ್ಟ ರಾಜ್ ಬಿ ಶೆಟ್ಟಿಗೆ ಧನ್ಯವಾದ ಹೇಳಿದರು.

ರಾಜ್ ಬಿ ಶೆಟ್ಟಿ ಮಾತನಾಡಿ ಚಿತ್ರತಂಡಕ್ಕೆ ಧನ್ಯವಾದ ಅರ್ಪಿಸಿದರು. ಅವರೆಲ್ಲ ಸಂಘಟಿತ ಕಾರ್ಯದಿಂದಲೇ ಸಿನಿಮಾ ಬೇಗ ಮುಗಿಸಲು ಸಾಧ್ಯವಾಯಿತು ಎಂದರು.

ಟೋಬಿ ಸಿನಿಮಾವು ರಿವೇಂಜ್ ಡ್ರಾಮಾ ಜಾನರ್ನದ್ದಾಗಿದ್ದು ಆಗಸ್ಟ್ 25ಕ್ಕೆ ತೆರೆಗೆ ಬರಲಿದೆ.



















