ರಾಜಸ್ಥಾನ ಪ್ರೀಮಿಯರ್ ಲೀಗ್ ಉದ್ಘಾಟನೆಯಲ್ಲಿ ಭರ್ಜರಿ ಹೆಜ್ಜೆ ಹಾಕಿದ ಜಾಕ್ವೆಲಿನ್ ಫರ್ನಾಂಡಿಸ್

Updated on: Aug 29, 2023 | 10:05 AM

ಜಾಕ್ವೆಲಿನ್ ಫರ್ನಾಂಡಿಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನಟಿಯ ಗ್ಲಾಮರ್​ನ ಹಾಡಿ ಹೊಗಳಿದ್ದಾರೆ. ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ 6.7 ಕೋಟಿ ಹಿಂಬಾಲಕರಿದ್ದಾರೆ.

1 / 7
ರಾಜಸ್ಥಾನ ಪ್ರೀಮಿಯರ್ ಲೀಗ್​ ಉದ್ಘಾಟನೆ ಆಗಿದೆ. ಈ ವೇಳೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಭರ್ಜರಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಹಾಗೂ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ರಾಜಸ್ಥಾನ ಪ್ರೀಮಿಯರ್ ಲೀಗ್​ ಉದ್ಘಾಟನೆ ಆಗಿದೆ. ಈ ವೇಳೆ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಭರ್ಜರಿ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಹಾಗೂ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

2 / 7

ಜಾಕ್ವೆಲಿನ್ ಫರ್ನಾಂಡಿಸ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ವಿಡಿಯೋ ಹಂಚಿಕೊಂಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ನಟಿಯ ಗ್ಲಾಮರ್​ನ ಹಾಡಿ ಹೊಗಳಿದ್ದಾರೆ.

3 / 7

ಜಾಕ್ವೆಲಿನ್ ಫರ್ನಾಂಡಿಸ್ ಅವರು ಶ್ರೀಲಂಕಾ ಮೂಲದವರು. ಅವರು ಭಾರತಕ್ಕೆ ಬಂದು ಸೆಟಲ್ ಆಗಿದ್ದಾರೆ. ಬಾಲಿವುಡ್​ ಅವರ ವೃತ್ತಿ ಜೀವನದ ದಿಕ್ಕನ್ನು ಬದಲಿಸಿದೆ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ.

4 / 7

ಡ್ಯಾನ್ಸ್​ನ ಜಾಕ್ವೆಲಿನ್ ಫರ್ನಾಂಡಿಸ್ ಅದ್ಭುತವಾಗಿ ಮಾಡುತ್ತಾರೆ. ಈ ಕಾರಣಕ್ಕೆ ಅವರು ಅನೇಕರಿಗೆ ಇಷ್ಟವಾಗುತ್ತಾರೆ. ಜಾಕ್ವೆಲಿನ್​ಗೆ ಇನ್​ಸ್ಟಾಗ್ರಾಮ್​ನಲ್ಲಿ 6.7 ಕೋಟಿ ಹಿಂಬಾಲಕರಿದ್ದಾರೆ. ಅವರ ಅಭಿಮಾನಿವರ್ಗ ಹಿರಿದಾಗುತ್ತಲೇ ಇದೆ.

5 / 7

ಜಾಕ್ವೆಲಿನ್ ಅವರು ಕನ್ನಡ ಪ್ರೇಕ್ಷಕರಿಗೂ ಪರಿಚಯಗೊಂಡಿದ್ದಾರೆ. ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ 2022ರಲ್ಲಿ ರಿಲೀಸ್ ಆಯಿತು. ಈ ಸಿನಿಮಾದ ‘ರಕ್ಕಮ್ಮ..’ ಹಾಡಿನಲ್ಲಿ ಜಾಕ್ವೆಲಿನ್ ಅವರು ಹೆಜ್ಜೆ ಹಾಕಿ ಗಮನ ಸೆಳೆದರು.

6 / 7

‘ರಕ್ಕಮ್ಮ..’ ಹಾಡಿನಲ್ಲಿ ಜಾಕ್ವೆಲಿನ್ ಅವರು ಹೆಜ್ಜೆ ಹಾಕಿದ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಗಡಂಗ್ ರಕ್ಕಮ್ಮ ಹೆಸರಿನ ಪಾತ್ರವನ್ನು ಅವರು ಮಾಡಿದ್ದರು. ಇನ್ನು, ವಿವಾದದ ಮೂಲಕವೂ ಅವರು ಸುದ್ದಿಯಲ್ಲಿದ್ದಾರೆ.

7 / 7

200 ಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅರೆಸ್ಟ್ ಆಗಿದ್ದಾನೆ. ಆತನ ಜೊತೆ ಆಪ್ತತೆ ಹೊಂದಿದ್ದ ಕಾರಣಕ್ಕೆ ಜಾಕ್ವೆಲಿನ್ ಸಂಕಷ್ಟ ಅನುಭವಿಸಿದರು. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಅವರ ವೃತ್ತಿ ಜೀವನಕ್ಕೆ ಇದು ಕಪ್ಪು ಚುಕ್ಕೆ ಆಗಿದೆ.

Published On - 9:38 am, Tue, 29 August 23

Loading...
Unable to load recommendations.
Follow Us