JIO Plan: ದಿನಕ್ಕೆ 2GB ಡೇಟಾ, ಅನಿಯಮಿತ ಕರೆಗಳು: ಇದು ಜಿಯೋದ ಮತ್ತೊಂದು ಅಗ್ಗದ ಯೋಜನೆ

|

Updated on: Feb 25, 2024 | 6:55 AM

Reliance Jio Prepaid Plan: ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಜಿಯೋ, ಏರ್ಟೆಲ್ ಹಾಗೂ ವೊಡಾಫೋನ್ ಐಡಿಯಾ ನಡುವೆ ಯಾವಾಗಲು ಪೈಪೋಟಿ ಏರ್ಪಡುತ್ತಲೇ ಇರುತ್ತದೆ. ಹೆಚ್ಚಾಗಿ ಕಂಪನಿಯು ಗ್ರಾಹಕರಿಗೆ ಕೈಗೆಟುಕುವ ಯೋಜನೆಗಳನ್ನು ತರಲು ಪ್ರಯತ್ನಿಸುತ್ತದೆ. ನೀವು ರಿಲಯನ್ಸ್ ಜಿಯೋ ಗ್ರಾಹಕರಾಗಿದ್ದರೆ, ಜಿಯೋ ನಿಮಗಾಗಿ ಉತ್ತಮ ಯೋಜನೆಯನ್ನು ತಂದಿದೆ.

1 / 5
Reliance JIO

Reliance JIO

2 / 5
ಈ ಜಿಯೋ ಯೋಜನೆಯ ಬೆಲೆ ರೂ. 249 ಆಗಿದೆ. ಈ ರೀಚಾರ್ಜ್‌ನಲ್ಲಿ ಅನೇಕ ಇತರ ಪ್ರಯೋಜನಗಳು ಸಹ ಲಭ್ಯವಿದೆ. ರೂ. 249 ಯೋಜನೆಯನ್ನು ಜಿಯೋದ ಅಗ್ಗದ ಯೋಜನೆಯೆಂದು ಪರಿಗಣಿಸಲಾಗಿದ್ದು, ಅನೇಕರ ಜನರ ಮೆಚ್ಚಿನ ಆಯ್ಕೆ ಕೂಡ ಆಗಿದೆ.

3 / 5
ಜಿಯೋದ ಈ ಯೋಜನೆಯಲ್ಲಿ ಗ್ರಾಹಕರು ಹೆಚ್ಚಿನ ಡೇಟಾ, ಉಚಿತ ಧ್ವನಿ ಕರೆಗಳು ಮತ್ತು SMS ನ ಪ್ರಯೋಜನವನ್ನು ಪಡೆಯುತ್ತಾರೆ. 5G ಫೋನ್ ಹೊಂದಿರುವ ಗ್ರಾಹಕರು ರೂ. 249 ಯೋಜನೆಯಲ್ಲಿ ಉಚಿತ ಡೇಟಾವನ್ನು ಸಹ ಪಡೆಯುತ್ತಿದ್ದಾರೆ.

4 / 5
ರಿಲಯನ್ಸ್ ಜಿಯೋದ ರೂ. 249 ಪ್ಲಾನ್ 23 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಪ್ಲಾನ್​ನಲ್ಲಿ ಗ್ರಾಹಕರಿಗೆ ದಿನಕ್ಕೆ 2 GB ಡೇಟಾವನ್ನು ನೀಡಲಾಗುತ್ತದೆ. ಅಂದರೆ ಗ್ರಾಹಕರು 23 ದಿನಗಳಲ್ಲಿ ಒಟ್ಟು 46 GB ಡೇಟಾವನ್ನು ಪಡೆಯುತ್ತಾರೆ.

5 / 5
ಈ ಪ್ರಿಪೇಯ್ಡ್ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು ಸಹ ಲಭ್ಯವಿದೆ. ಜಿಯೋದ ಈ ಯೋಜನೆಯಲ್ಲಿ ಸ್ಥಳೀಯ, STD ಮತ್ತು ರೋಮಿಂಗ್ ಕರೆಗಳು ಸಹ ಉಚಿತವಾಗಿ ಲಭ್ಯವಿವೆ. ಜೊತೆಗೆ ದಿನಕ್ಕೆ ಉಚಿತ 100 SMS ಗಳ ಪ್ರಯೋಜನ ಪಡೆಯಬಹುದು. ಆದರೆ, ಯಾವುದೇ ಓಟಿಟಿ ಚಂದಾದಾರಿಕೆ ಉಚಿತವಾಗಿ ನೀಡಿಲ್ಲ.