ತನ್ನದೇ ಗತ್ತು, ಗಾಂಭೀರ್ಯ ನಡಿಗೆ, ಉದ್ದನೆಯ ಕೂಡು ದಂತದಿಂದ ಜೂನಿಯರ್ ಭೋಗೇಶ್ವರ ಆನೆ ವನ್ಯ ಪ್ರಿಯರ ಮನ ಗೆದ್ದಿದೆ.
ಮಿಸ್ಟರ್ ಕಬಿನಿ ಅಂತಲೇ ಖ್ಯಾತಿಯಾಗಿದ್ದ ದೊಡ್ಡ ದಂತದ ಭೋಗೇಶ್ವರ ಸಹಜ ಸಾವಿನ ನಂತರ ಅದೇ ಸ್ಥಳದಲ್ಲಿ ಕೂಡು ದಂತದ ಜೂನಿಯರ್ ಭೋಗೇಶ್ವರ ವನ್ಯ ಪ್ರಿಯರಿಗೆ ಫೇವರೆಟ್
ಹೆಚ್ಡಿ ಕೋಟೆ ತಾಲ್ಲೂಕು ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿರುವ ಅರಣ್ಯ ಇಲಾಖೆ ತರಬೇತಿ ಶಿಬಿರದಲ್ಲಿರುವ ಜೂನಿಯರ್ ಭೋಗೇಶ್ವರ ಆಕರ್ಷಕ ವಿಭಿನ್ನ ದಂತವನ್ನು ಹೊಂದಿದ್ದಾನೆ.
ಕೂಡು ದಂತದ 30-35 ವರ್ಷ ವಯಸ್ಸಿನ ಜೂನಿಯರ್ ಭೋಗೇಶ್ವರ ಅಂದ್ರೆ ಪ್ರವಾಸಿಗರಿಗೆ ಸಿಕ್ಕಾಪಟ್ಟೆ ಇಷ್ಟ. ಪ್ರವಾಸಿಗರ ಜೊತೆ ಪೋಟೋಗೆ ಫೋಸ್ ನೀಡುತ್ತಾನೆ.
ಅತಿಹೆಚ್ಚು ಆನೆಗಳನ್ನು ಹೊಂದಿರುವ ಬಂಡೀಪುರ ನಾಗರಹೊಳೆ ಅರಣ್ಯ ಪ್ರದೇಶದ ಕಬಿನಿ ಹಿನ್ನೀರಿನ ಪ್ರದೇಶದಲ್ಲಿ ಸಫಾರಿಗೆ ಹೆಚ್ಚು ಜನರು ಮುಗಿಬೀಳುತ್ತಾರೆ.
ಹೀಗೆ ಸಫಾರಿಗೆ ಬಂದ ಜನರು ಜೂನಿಯರ್ ಭೋಗೇಶ್ವರನ ಕಂಡು ಖುಷ್ ಆಗಿ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿಯುವ ಪ್ರಯತ್ನ ಮಾಡ್ತಿದ್ದಾರೆ. ಜೂನಿಯರ್ ಭೋಗೇಶ್ವರ ಆನೆಯ ಅಪರೂಪದ ದೃಶ್ಯಗಳು ದಾ ರಾ ಮಹೇಶ್ ಅವರ ಕ್ಯಾಮೆರಾದಲ್ಲಿ ಸೆರೆಯಾಗಿವೆ.