
ದಾವಣಗೆರೆಯ ಮಾಯಕೊಂಡ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದ ಜೆ.ಪಿ.ನಡ್ಡಾ ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ಪರ ಅಬ್ಬರದ ಪ್ರಚಾರ ನಡೆಸಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಬಸವಪಟ್ಟಣದ ಸಂತೆ ಮೈದಾನದಿಂದ ರೋಡ್ ಶೋ ಆರಂಭಿಸಿದ ನಡ್ಡಾ ಮತಯಾಚನೆ ನಡೆಸಿದ್ದು, ಇದೇ ವೇಳೆ ಜ್ಯೂನಿಯರ್ ಮೋದಿ ನೋಡಿ ಜನರು ಶಾಕ್ ಆದರು.

ಹೌದು ನಡ್ಡಾ ರೋಡ್ ಶೋಗೂ ಮುನ್ನ ಜ್ಯೂನಿಯರ್ ಮೋದಿ ಸದಾನಂದ ನಾಯ್ಕ್ ಎಂಬುವವರು ರೋಡ್ ಶೋ ನಡೆಸಿದರು.

ಥೇಟ್ ಮೋದಿಯಂತೆ ಕಾಣುವ ಸದಾನಂದ ನಾಯ್ಕ್, ಇವ್ರನ್ನ ನೋಡಿದ ಜನ ಮೋದಿ ಜಿ, ಮೋದಿ ಜಿ ಎಂದು ಕೈ ಕುಲುಕಲು ಶುರು ಮಾಡಿದರು.

ಥೇಟ್ ಮೋದಿಯಂತೆ ಕಾಣುವ ಇವರು ಉಡುಪಿ ಸಮೀಪದ ಹಿರಿಯಡ್ಕ ನಿವಾಸಿ, ಜ್ಯೂನಿಯರ್ ಮೋದಿಯಾಗಿ ಬಿಜೆಪಿಯಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ.

ಇನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಸಾಥ್ ನೀಡಿದರೆ, ಇತ್ತ ಜ್ಯೂನಿಯರ್ ಮೋದಿ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾದರು.