ಅಮೆಜಾನ್, ಫ್ಲಿಪ್ ಕಾರ್ಟ್ನಲ್ಲಿ ಕಲಬುರಗಿಯ ಖಡಕ್ ರೊಟ್ಟಿ ಲಭ್ಯ
ಕಲಬುರಗಿ ಖಡಕ್ ರೊಟ್ಟಿ ಈಗ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿ ನವೆಂಬರ್ 16 ರಿಂದ ಖರೀದಿಸಬಹುದು. ಜಿಲ್ಲಾಡಳಿತದ ಈ ಉಪಕ್ರಮವು ಕಲಬುರಗಿ ಖಡಕ್ ರೊಟ್ಟಿಯನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗಲು ಉದ್ದೇಶಿಸಿದೆ. ಸಿರಿಧಾನ್ಯಗಳಿಂದ ತಯಾರಿಸಲಾದ ಈ ರೊಟ್ಟಿಗಳು ರುಚಿಕರ ಮತ್ತು ಆರೋಗ್ಯಕರವಾಗಿವೆ. ಪ್ರತಿ ರೊಟ್ಟಿಗೆ 6 ರೂಪಾಯಿ ದರ ನಿಗದಿಪಡಿಸಲಾಗಿದೆ.
1 / 6
ಉತ್ತರ ಕರ್ನಾಟಕದ ಜೋಳದ ರೊಟ್ಟಿ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಕಲಬುರಗಿಯ ಖಡಕ್ ರೊಟ್ಟಿಗೆ ಕರ್ನಾಟಕ ಮಾತ್ರವಲ್ಲದೇ ದೇಶ, ವಿದೇಶಗಳಲ್ಲಿ ಬಹುಬೇಡಿಕೆಯಿದೆ. ಇದೀಗ ಇದೇ ಕಲಬುರಗಿ ಖಡಕ್ ರೊಟ್ಟಿ ಇನ್ಮುಂದೆ ಆನ್‌ಲೈನ್ ಮೂಲಕ ಸಾರ್ವಜನಿಕರ ಕೈಸೇರಲಿವೆ. ಅಂದರೆ ಇನ್ಮೇಲೆ ಅಮೆಜಾನ್, ಫ್ಲಿಪ್ ಕಾರ್ಟ್ನಲ್ಲಿ ಸಿಗುತ್ತೆ.
2 / 6
ಕಲಬುರಗಿ ಖಡಕ್ ರೊಟ್ಟಿಯನ್ನು ವಿಶ್ವಮಟ್ಟದಲ್ಲಿ ಪರಿಚಯಿಸಲು ಇದೀಗ ಕಲಬುರಗಿ ಜಿಲ್ಲಾಡಳಿತ ಮುಂದಾಗಿದೆ. ಹೀಗಾಗಿ ಖಡಕ್ ರೊಟ್ಟಿಯನ್ನ ಸಿರಿಧಾನ್ಯಗಳಿಂದ ತಯಾರಿಸಿ ವಿಶ್ವದ ದೈತ್ಯ ಆನ್‌ಲೈನ್ ಕಂಪನಿಗಳಾದ ಅಮೆಜಾನ್, ಫ್ಲಿಪ್ ಕಾರ್ಟ್ ಮೂಲಕ ಸಾರ್ವಜನಿಕರ ಕೈಗೆ ಸಿಗುವಂತೆ ಮಾಡಲು ಒಡಂಬಡಿಕೆ ಮಾಡಿಕೊಳ್ಳಲಾಗಿದೆ.
3 / 6
ನವೆಂಬರ್ 16ರಿಂದ ಕಲಬುರಗಿ ಖಡಕ್ ರೊಟ್ಟಿ ಆನ್‌ಲೈನ್‌ನಲ್ಲಿ ಸಿಗಲಿದೆಯಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಹೇಳಿದ್ದಾರೆ. ಇನ್ನೂ ಕೇವಲ ರೊಟ್ಟಿ ಮಾತ್ರವಲ್ಲದೇ ಸಜ್ಜೆ ರೊಟ್ಟಿ, ದಪಾಟಿ, ಶೇಂಗಾ ಹೊಳಿಗೆಯನ್ನ ಖರೀದಿ ಕುರಿತಂತೆ ಹೋಟೆಲ್ ಮಾಲೀಕರ ಸಂಘದೊಂದಿಗೆ ಸಭೆ ನಡೆಸಲಾಗುತ್ತಿದೆ ಎಂದಿದ್ದಾರೆ.
4 / 6
ಇನ್ನೂ ಒಂದು ರೊಟ್ಟಿಗೆ 6 ರೂ ದರ ನಿಗದಿ ಮಾಡಲಾಗಿದೆ. ಅಲ್ಲದೇ ಹತ್ತು ರೊಟ್ಟಿ ಸೇರಿಸಿ ಒಂದು ಬಾಕ್ಸ್ ಮಾಡಲಾಗಿದ್ದು, ಬಾಕ್ಸ್ ಮೇಲೆ ಕಲಬುರಗಿ ಖಡಕ್ ರೊಟ್ಟಿ ಎಂದು ನಮೂದಿಸಲಾಗಿದೆ. ಜೊತೆಗೆ ಕ್ಯೂಆರ್ ಕೋಡ್ ಹಾಕಲಾಗಿದೆ. ಸ್ಕ್ಯಾನ್ ಮಾಡುವ ಮೂಲಕ ಆರ್ಡರ್ ಮಾಡಬಹುದಾಗಿದೆ.
5 / 6
ಇನ್ನೂ ಸಂಬಂಧಪಟ್ಟ ಸಂಸ್ಥೆಯಿಂದ ರೊಟ್ಟಿಗೆ ಪ್ರಮಾಣ ಪತ್ರವನ್ನು ಪಡೆದುಕೊಳ್ಳಲಾಗಿದೆ. ಇಷ್ಟೇ ಅಲ್ಲದೆ ಕಲಬುರಗಿ ರೊಟ್ಟಿ ಗಮನಿಸಿ ನ್ಯೂಜಿಲೆಂಡ್ ದೇಶದ ರಾಯಭಾರಿ ಕಚೇರಿ ಸಹ ರೊಟ್ಟಿ ಬಗ್ಗೆ ಮಾಹಿತಿ ಪಡೆದುಕೊಂಡಿದೆ.
6 / 6
ರೊಟ್ಟಿ ಎಂದರೆ ಎಂಥವರು ಇಷ್ಟಪಡುತ್ತಾರೆ. ಅದಕ್ಕಾಗಿ ಕಲಬುರಗಿ ಖಡಕ್ ರೊಟ್ಟಿ ಇದೀಗ ವಿಶ್ವಮಟ್ಟದಲ್ಲಿ ರಾರಾಜಿಸಲಿದ್ದು, ನವೆಂಬರ್ 16ರಿಂದ ಸಾರ್ವಜನಿಕರ ಕೈಗೆ ಸಿಗಲಿದೆ.