
ಕರಾವಳಿಯ ಸೊಗಡನ್ನು ಬಿಂಬಿಸುವ ಕಂಬಳ ಸಾಂಪ್ರದಾಯಿಕ ಕ್ರೀಡೆ. ಕಂಬಳ ನೂರಾರು ವರ್ಷಗಳಿಂದಲೂ ತುಳುನಾಡ ಜನರ ಜೀವದ ಕೊಂಡಿಯಾಗಿದೆ. ಅದರಲ್ಲೂ ಕಟಪಾಡಿ ಬೀಡುವಿನ ಮೂಡು ಬೀಡು ಕಂಬಳ ಉಡುಪಿ ಜಿಲ್ಲೆಯಲ್ಲಿ ತುಂಬಾನೆ ಫೇಮಸ್. ಈ ಕಂಬಳ ಹಬ್ಬಕ್ಕೆ ಈ ಭಾರಿ ಮತ್ತಷ್ಟು ಮೆರುಗು ಬಂದಿತ್ತು.

ಸುಮಾರು ವರ್ಷಗಳ ಇತಿಹಾಸ ಇರುವ ಕಂಬಳ, ಕರಾವಳಿಗರ ನೆಚ್ಚಿನ ಜಾನಪದ ಕ್ರೀಡೆ. ಅದರಲ್ಲೂ ತನ್ನ ಗ್ರಾಮೀಣ ಸೊಗಡಿನಿಂದಲ್ಲೇ ಈ ಕ್ರೀಡೆ ಕರಾವಳಿಯಲ್ಲಿ ಸಿಕ್ಕಪಟ್ಟೆ ಫೇಮಸ್. ಮಣ್ಣಿನ ಮಕ್ಕಳ ಪ್ರತಿಷ್ಠೆಯ ಆಚರಣೆಯಲ್ಲೊಂದು. ಕಂಬಳ ಅನ್ನೋದು ತುಳುನಾಡಿನ ಮಕ್ಕಳ ಭಾವನಾತ್ಮಕ ಆಚರಣೆಯು ಆಗಿದೆ. ಕಂಬಳ ಕ್ರೀಡೆಯಲ್ಲಿ ಜನಪ್ರಿಯತೆ ಪಡೆದಿರುವುದು ಮೂಡು ಬೀಡು ಕಂಬಳ.

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಕಟಪಾಡಿ ಬೀಡು ಕರೆಯಲ್ಲಿ ನಡೆಯುವ ಮೂಡು ಬೀಡು ಕಂಬಳ ಐತಿಹಾಸಿಕ ಮಹತ್ವವನ್ನು ಪಡೆದಿದೆ. ಜಿಲ್ಲೆಯ ಅತೀ ದೊಡ್ಡ ಕಂಬಳವಾಗಿರುವ ಮೂಡು ಬೀಡು ಕಂಬಳ ಇಡೀ ಕರ್ನಾಟಕದ ಗಮನ ಸೆಳೆಯುತ್ತದೆ.

ಎರಡು ದಿನ ಕಂಬಳವನ್ನು ಸಮಿತಿಯ ಸೂಚನೆಯಂತೆ ಕಟಪಾಡಿ ಬೀಡು ಮೂಡು ಬೀಡು ಕಂಬಳವನ್ನು ಆಯೋಜಿಸಲಾಗಿತ್ತು. ಪ್ರತೀ ಬಾರಿಯಂತೆ ಈ ಬಾರಿಯು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ 100 ಕ್ಕೂ ಹೆಚ್ಚು ಕಂಬಳ ಕೋಣ ಪಾಲ್ಗೊಂಡಿದ್ದವು. ಕಂಬಳವನ್ನು ನೋಡಲು ಸಾವಿರಾರು ಕಂಬಳ ಕ್ರೀಡೆಯ ಪ್ರೇಮಿಗಳು ಆಗಮಿಸಿದ್ದರು. ರಾತ್ರಿಯ ವೇಳೆ ಹತ್ತು ಸಾವಿರಕ್ಕೂ ಅಧಿಕ ಕಂಬಳ ಫ್ಯಾನ್ಸ್ ಆಗಮಿಸಿ ವೀಕ್ಷಿಸಿದ್ದಾರೆ.

ಉಡುಪಿ ಜಿಲ್ಲೆಯಲ್ಲಿ ನಡೆಯುವ ಅತ್ಯಂತ ಅದ್ದೂರಿಯ ಮೂಡು ಬೀಡು ಕಂಬಳ ಕ್ರೀಡೆಯನ್ನು ವೀಕ್ಷಿಸಲು ಬಂದ ಕಂಬಳ ಪ್ರೇಮಿಗಳ ಸಕತ್ತ ಎಂಜಾಯ್ ಮಾಡಿದ್ದಾರೆ.