
ಕಂಗನಾ ರಣಾವತ್ ನಟನೆಯ ‘ಧಾಕಡ್’ ಹೊಸ ಮಾದರಿಯ ಚಿತ್ರ. ಇದರಲ್ಲಿ ಕಂಗನಾ ಮಹಿಳಾ ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್ಗಳು ನಿರೀಕ್ಷೆ ಹುಟ್ಟಿಸಿವೆ.

ಈ ಹಿಂದೆ ಏಪ್ರಿಲ್ನಲ್ಲಿ ಚಿತ್ರತಂಡ ರಿಲೀಸ್ ಘೋಷಿಸಿತ್ತು. ಇದೀಗ ಚಿತ್ರದ ಬಿಡುಗಡೆಯನ್ನು ತುಸು ಮುಂದೂಡಲಾಗಿದೆ.

2022ರ ಮೇ 27ರಂದು ಚಿತ್ರವು ತೆರೆಕಾಣಲಿದೆ.

ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ‘ಧಾಕಡ್’ ರಿಲೀಸ್ ಆಗಲಿದೆ.

ಧಾಕಡ್ನಲ್ಲಿ ‘ಏಜೆಂಟ್ ಅಗ್ನಿ’ ಪಾತ್ರದಲ್ಲಿ ಕಂಗನಾ ಕಾಣಿಸಿಕೊಳ್ಳುತ್ತಿದ್ದಾರೆ. ಅರ್ಜುನ್ ರಾಂಪಾಲ್, ದಿವ್ಯಾ ದತ್ತಾ ಮೊದಲಾದವರು ಮುಖ್ಯಭೂಮಿಕೆಯಲ್ಲಿದ್ದಾರೆ.

ಕಂಗನಾ ನಡೆಸಿಕೊಡುತ್ತಿರುವ ಮೊದಲ ಒಟಿಟಿ ಶೋ ‘ಲಾಕ್ ಅಪ್’ ಸದ್ಯ ಪ್ರಸಾರವಾಗುತ್ತಿದೆ. ಇದರ ಕೆಲಸಗಳಲ್ಲಿ ನಟಿ ಬ್ಯುಸಿಯಾಗಿದ್ದಾರೆ.
Published On - 7:32 am, Tue, 1 March 22