
ದೆಹಲಿಯಲ್ಲಿ ನಡೆದ ಭಾರತ ಕೌಶಲ್ಯ ಸ್ಪರ್ಧೆಯಲ್ಲಿ ಕನ್ನಡಿಗರು ಚಿನ್ನದ ಪದಕ ಗೆದ್ದುಕೊಂಡು ಬಂದಿದ್ದಾರೆ.

42 ಪದಕಗಳನ್ನ ಗೆದ್ದು ದೇಶದಲ್ಲಿ 2ನೇ ಸ್ಥಾನ ಪಡೆದ ಕನ್ನಡಿಗರನ್ನು ಇಂದು ದೇವನಹಳ್ಳಿ ಬಳಿಯ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಹೂಗುಚ್ಛ ನೀಡುವ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಿದ್ದಾರೆ.

ವಿವಿಧ ವಿಭಾಗಗಳಲ್ಲಿ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನ ಗೆಲ್ಲುವ ಮೂಲಕ ಯುವಕ ಹಾಗೂ ಯುವತಿಯರು ಕರುನಾಡಿಗೆ ಕೀರ್ತಿ ತಂದಿದ್ದಾರೆ.

30 ರಾಜ್ಯಗಳ 900 ಕ್ರೀಡಾಪಟುಗಳ ನಡುವೆ ಸ್ಪರ್ಧೆ ನಡೆದಿದ್ದು, ಕೌಶಲ್ಯಾಭಿವೃದ್ಧಿ ಇಲಾಖೆ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಕಳಿಸಿದ್ದರು.

ಇನ್ನು ಮುಂದೆ ಸೆಪ್ಟೆಂಬರ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಚಾಂಪಿಯನ್ಶಿಪ್ನಲ್ಲೂ ಸ್ಪರ್ಧೆ ಮಾಡಲಿದ್ದಾರೆ.