AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಎಲಿಮಿನೇಟರ್ ಪಂದ್ಯದಲ್ಲಿ RCB ಗೆದ್ದ ಇತಿಹಾಸವಿದೆಯೇ? ಇಲ್ಲಿದೆ ಮಾಹಿತಿ

IPL 2024: ಐಪಿಎಲ್​ನ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿದೆ. ಮೇ 22 ರಂದು ನಡೆಯಲಿರುವ ಈ ಪಂದ್ಯವು ಆರ್​ಸಿಬಿ ಪಾಲಿಗೆ ನಿರ್ಣಾಯಕ. ಅಂದರೆ ಈ ಮ್ಯಾಚ್​ನಲ್ಲಿ ಗೆದ್ದರೆ ಮಾತ್ರ ಆರ್​ಸಿಬಿ ತಂಡದ ಫೈನಲ್ ಆಸೆ ಜೀವಂತವಿರಲಿದೆ. ಹೀಗಾಗಿ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ.

ಝಾಹಿರ್ ಯೂಸುಫ್
|

Updated on:May 20, 2024 | 8:47 PM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಕೇವಲ ಮೂರು ಬಾರಿ ಮಾತ್ರ ಫೈನಲ್ ಆಡಿದೆ. ಆದರೆ 16 ಸೀಸನ್​​ಗಳಲ್ಲಿ 14 ಪ್ಲೇಆಫ್ ಪಂದ್ಯಗಳನ್ನಾಡಿದೆ. ಈ ವೇಳೆ ಎಲಿಮಿನೇಟರ್ ಪಂದ್ಯವಾಡಿದ್ದು ಕೇವಲ 4 ಬಾರಿ ಮಾತ್ರ.

1 / 6
ಆರ್​ಸಿಬಿ ತಂಡವು ಮೊದಲ ಬಾರಿಗೆ ಎಲಿಮಿನೇಟರ್ ಪಂದ್ಯವಾಡಿದ್ದ್ದು 2015 ರಲ್ಲಿ. ಈ ಪಂದ್ಯದಲ್ಲಿ ಆರ್​ಸಿಬಿ ಮತ್ತು ಆರ್​ಆರ್​ ತಂಡಗಳು ಮುಖಾಮುಖಿಯಾಗಿದ್ದವು. ನಿರ್ಣಾಯಕ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಿತು. ಆದರೆ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಸೋಲನುಭವಿಸಿತು.

2 / 6
2020 ರಲ್ಲಿ ಆರ್​ಸಿಬಿ ತಂಡವು 4ನೇ ಸ್ಥಾನದೊಂದಿಗೆ ಎಲಿಮಿನೇಟರ್ ರೌಂಡ್​ಗೆ ಪ್ರವೇಶಿಸಿತ್ತು. ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಈ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್​ಗಳ ಸೋಲನುಭವಿಸಿತ್ತು.

3 / 6
ಇದಾದ ಬಳಿಕ 2021 ರಲ್ಲಿ ಮತ್ತೊಮ್ಮೆ ಆರ್​ಸಿಬಿ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಎಲಿಮಿನೇಟರ್ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಆರ್​ಸಿಬಿ ತಂಡ ಜಯಗಳಿಸಲು ವಿಫಲವಾಯಿತು.

4 / 6
ಇನ್ನು 2022 ರಲ್ಲಿ ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇಆಫ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಆರ್​ಸಿಬಿ ತಂಡಕ್ಕೆ ಎದುರಾಳಿಯಾಗಿ ಸಿಕ್ಕಿದ್ದು ಲಕ್ನೋ ಸೂಪರ್ ಜೈಂಟ್ಸ್​. LSG ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ 2ನೇ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಿತು. ಆದರೆ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಮುಗ್ಗರಿಸಿತು.

5 / 6
ಅಂದರೆ ಐಪಿಎಲ್​ ಇತಿಹಾಸದಲ್ಲಿ ಆರ್​ಸಿಬಿ ತಂಡವು ನಾಲ್ಕು ಬಾರಿ ಮಾತ್ರ ಎಲಿಮಿನೇಟರ್ ಪಂದ್ಯವಾಡಿದ್ದು, ಈ ವೇಳೆ ಎರಡು ಬಾರಿ ಜಯ ಸಾಧಿಸಿದೆ. ಇದಾಗ್ಯೂ ಎಲಿಮಿನೇಟರ್ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್​ಸಿಬಿ ಒಮ್ಮೆಯೂ ಫೈನಲ್​ಗೆ ತಲುಪಿಲ್ಲ. ಆದರೆ ಈ ಬಾರಿ ಸತತ ಗೆಲುವುಗಳೊಂದಿಗೆ ಹೊಸ ಹುಮ್ಮಸ್ಸಿನಲ್ಲಿರುವ ಆರ್​ಸಿಬಿ ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡರೂ ಅಚ್ಚರಿಪಡಬೇಕಿಲ್ಲ.

6 / 6

Published On - 7:52 pm, Mon, 20 May 24

Follow us
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ

ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್

ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ

ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ

ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ

ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ

ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?

ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್

ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್

ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?