ನರೇಂದ್ರ ಮೋದಿಯ ಭೇಟಿಯಾದ ಕಪೂರ್ ಕುಟುಂಬ, ಕೊಟ್ಟರು ವಿಶೇಷ ಉಡುಗೊರೆ
Kapoor Family: ಕಪೂರ್ ಕುಟುಂಬದ ಪ್ರಮುಖ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಅವರಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಜೊತೆಗೆ ಒಂದು ಅಮೂಲ್ಯ ಉಡುಗೊರೆಯನ್ನೂ ನೀಡಿದ್ದಾರೆ. ರಾಜ್ ಕಪೂರ್ ಅವರ 100ನೇ ವರ್ಷದ ಜಯಂತಿಯನ್ನು ಕಪೂರ್ ಕುಟುಂಬ ಆಚರಿಸುತ್ತಿದ್ದು, ಪ್ರಧಾನಿಯವರಿಗೆ ಆಹ್ವಾನ ನೀಡಲಾಗಿದೆ.
1 / 10
ಕಪೂರ್ ಕುಟುಂಬದ ಪ್ರಮುಖ ಸದಸ್ಯರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ರಾಜ್ ಕಪೂರ್ 100ನೇ ಜಯಂತಿ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ. ಜೊತೆಗೆ ಒಂದು ಅಮೂಲ್ಯ ಉಡುಗೊರೆಯನ್ನೂ ನೀಡಿದ್ದಾರೆ.
2 / 10
ಭಾರತೀಯ ಚಿತ್ರರಂಗಕ್ಕೆ ಕಪೂರ್ ಕುಟುಂಬ ಕೊಟ್ಟಿರುವ ಕೊಡುಗೆ ಅಪಾರವಾದುದು. ಈಗ ಹೆಮ್ಮರವಾಗಿ ಬೆಳೆದಿರುವ ಬಾಲಿವುಡ್ಗೆಅಡಿಪಾಯ ಹಾಕಿದ್ದೆ ಕಪೂರ್ ಕುಟುಂಬದ ಪೃಥ್ವಿರಾಜ್ ಕಪೂರ್.
3 / 10
ಪೃಥ್ವಿರಾಜ್ ಕಪೂರ್ ಪುತ್ರ ರಾಜ್ ಕಪೂರ್, ಭಾರತದ ಮೊದಲ ಸೂಪರ್ ಸ್ಟಾರ್ ಎನಿಸಿಕೊಂಡರು. ಹಿಂದಿ ಚಿತ್ರರಂಗದ ಏಳ್ಗೆಗೆ ಅವರು ನೀಡಿದ ಕೊಡುಗೆ ಅಪಾರವಾದುದು.
4 / 10
ಇದೀಗ ರಾಜ್ ಕಪೂರ್ ಅವರ ನೂರನೇ ಜಯಂತಿಯನ್ನು ಕಪೂರ್ ಕುಟುಂಬ ಬಲು ಅದ್ಧೂರಿಯಾಗಿ, ಸ್ಮರಣಾರ್ಥವಾಗಿ ಆಚರಿಸಲು ಸಿದ್ದವಾಗಿದ್ದು, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
5 / 10
ರಾಜ್ ಕಪೂರ್ ಅವರು ಬಳಸಿದ ವಸ್ತುವೊಂದನ್ನು ಕಪೂರ್ ಕುಟುಂಬ ಹಾಗೆಯೇ ಕಾಯ್ದಿರಿಸಿಕೊಂಡಿತ್ತು. ಇದೀಗ ವಸ್ತುವನ್ನು ನರೇಂದ್ರ ಮೋದಿ ಅವರಿಗೆ ಕಾಣಿಕೆಯಾಗಿ ನೀಡಿ, 100 ಇಯರ್ಸ್ ಆಫ್ ರಾಜ್ಕಪೂರ್ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದಾರೆ.
6 / 10
ಡಿಸೆಂಬರ್ 13 ರಿಂದ 15ರ ವರೆಗೆ ರಾಜ್ ಕಪೂರ್ ಅವರ ಸಿನಿಮಾ ಉತ್ಸವ ನಡೆಯಲಿದ್ದು, 135 ಸ್ಕ್ರೀನ್ಗಳಲ್ಲಿ ರಾಜ್ ಕಪೂರ್ ಅವರ ವಿವಿಧ ಐಕಾನಿಕ್ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ಕಪೂರ್ ಅಭಿಮಾನಿಗಳು ಮತ್ತೊಮ್ಮೆ ರಾಜ್ ಕಪೂರ್ ಅವರ ಸಿನಿಮಾಗಳನ್ನು ನೋಡಬಹುದಾಗಿದೆ.
7 / 10
ರಾಜ್ ಕಪೂರ್ ಅವರ 100ನೇ ಜಯಂತಿ ಪ್ರಯುಕ್ತ ರಾಜ್ ಕಪೂರ್ ಸಿನಿಮಾ ಉತ್ಸವವನ್ನು ಕಪೂರ್ ಕುಟುಂಬ ಆಯೋಜಿಸಿದೆ. ಮುಂಬೈ ಸೇರಿದಂತೆ ಭಾರತದ ಸುಮಾರು 40 ನಗರಗಳಲ್ಲಿ ಈ ಸಿನಿಮಾ ಉತ್ಸವ ನಡೆಯಲಿದೆ.
8 / 10
ರಣ್ಬೀರ್ ಕಪೂರ್, ಕರೀನಾ ಕಪೂರ್, ಕರಿಶ್ಮಾ ಕಪೂರ್, ನೀತು ಕಪೂರ್, ಆಲಿಯಾ ಭಟ್, ರಿಧಿಮಾ ಕಪೂರ್ ಇನ್ನೂ ಹಲವರು ನರೇಂದ್ರ ಮೋದಿ ಅವರನ್ನು ಭೇಟಿ ಆಗಿದ್ದು, ಅವರೊಟ್ಟಿಗೆ ಸಂವಾದ ಸಹ ನಡೆಸಿದ್ದಾರೆ.
9 / 10
ರಾಜ್ ಕಪೂರ್ ನಟನೆಯ ಐಕಾನಿಕ್ ಸಿನಿಮಾಗಳಾದ, ‘ಬರ್ಸಾತ್’, ‘ಶ್ರೀ 420’, ‘ಆವಾರ’, ‘ಮೇರಾ ನಾಮ್ ಜೋಕರ್’, ಜಾಗ್ತೆ ರಹೋ, ಜಿಸ್ ದೇಶ್ ಮೆ ಗಂಗಾ ಬೆಹತಿ ಹೇ, ಇನ್ನೂ ಹಲವಾರು ಸಿನಿಮಾಗಳು ರಾಜ್ ಕಪೂರ್ ಸಿನಿಮಾ ಉತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
10 / 10
ರಾಜ್ ಕಪೂರ್ ಅವರನ್ನು ಭಾರತೀಯ ಚಿತ್ರರಂಗದ ಶೋ ಮ್ಯಾನ್ ಎಂದು ಕರೆಯಲಾಗುತ್ತದೆ. ತಮ್ಮ ವೃತ್ತಿ ಜೀವನದಲ್ಲಿ ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಹಲವು ಅದ್ಭುತವಾದ ಸಿನಿಮಾಗಳನ್ನು ಅವರು ನೀಡಿದ್ದಾರೆ. ಸಿನಿಮಾಕ್ಕಾಗಿ ಸ್ಟುಡಿಯೋ ಸಹ ನಿರ್ಮಾಣ ಮಾಡಿದ್ದಾರೆ.
Published On - 2:18 pm, Wed, 11 December 24